ನಾವೆಲ್ಲ ಸಂವಿಧಾನಕ್ಕೆ ಭದ್ಧರಾಗಿರಬೇಕು: ಟಿ.ಹೆಚ್.ಎಂ
(ಸಂಜೆವಾಣಿ ವಾರ್ತೆ)
ಬಳ್ಳಾರಿ ಆ.16:  ನಾವೆಲ್ಲ ಸಂವಿಧಾನಕ್ಕೆ ಬದ್ಧವಾಗಿದ್ದು ಅದರ ಆಶಯಗಳಂತೆ ನಡೆದುಕೊಳ್ಳಬೇಕು.  ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು. ಭಾರತದ ಸಾರ್ವಭೌಮತ್ವ, ಐಕ್ಯತೆ, ಅಖಂಡತೆಯನ್ನು ಎತ್ತಿ ಹಿಡಿಯುವುದು, ದೇಶವನ್ನು ರಕ್ಷಿಸುವುದು. ಧಾರ್ಮಿಕ, ಭಾಷಾ, ಪ್ರಾದೇಶಿಕ, ಜಾತಿ ಪಂಗಡಗಳ ಭೇದಭಾವಗಳಿಂದ ಅತಿತವಾಗಿ ಸಾಮರಸ್ಯವನ್ನು ಸಮಾನ ಭಾವನೆಯನ್ನು ಹೊಂದುವುದು ನಮ್ಮೆಲ್ಲರ ಕರ್ತವ್ಯವಾಗಿದೆಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಹೇಳಿದ್ದಾರೆ.
ಅವರು ನಿನ್ನೆ ನಗರದ ಬೆಸ್ಟ್ ಸ್ಕೂಲ್ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.  ಸ್ವಾತಂತ್ರ್ಯದ ಹೋರಾಟಗಾರರನ್ನು ಸ್ಮರಿಸಿ ಒಂದು ಒಳ್ಳೆಯ ಶಾಲೆಯನ್ನು ತೆರೆದರೆ100 ಜೈಲುಗಳು ರದ್ದು ಮಾಡಿದಂತೆ ಆಗುತ್ತದೆ ಏಕೆಂದರೆ ಸುಶಿಕ್ಷಿತ ಸಮಾಜ‌ನಿರ್ಮಾಣ ಆಗುತ್ತದೆಂದರು.
  ರಾಜ್ಯಗಳಿಗೊಂದರಂತೆ ಉಚ್ಚ  ನ್ಯಾಯಾಲಯ ಸ್ಥಾಪನೆ, ರಾಜ್ಯಪಾಲರ ನೇಮಕ,  ಸೇನೆಗಳನ್ನು ರಚಿಸುವುದು ಮುಂತಾದ ಮಹತ್ತರವಾದ ಕಾನೂನುಗಳು ಭಾರತದ ಸಂವಿಧಾನದಲ್ಲಿ ಇವೆ ಎಂದು ತಿಳಿಸಿದರು.
 ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೋನಂಕಿ ರಾಮಪ್ಪ, ಉಪಾಧ್ಯಕ್ಷ ಕೆ.ತಿಲಕ್ ಕುಮಾರ್ ಅವರ ಶಿಕ್ಷಣ ಸೇವೆಯನ್ನು ಸ್ಮರಿಸಿದರು.
ವೇದಿಕೆ ಮೇಲೆ ಕಾಲೇಜಿನ ಕಾರ್ಯದರ್ಶಿ ಎಂ ಶ್ರೀನಿವಾಸುಲು, ಉಪ ಪ್ರಾಂಶುಪಾಲ ಶ್ರೀನಿವಾಸ್ ರೆಡ್ಡಿ, ಆಡಳಿತಾಧಿಕಾರಿ ವಿಜಯಲಕ್ಷ್ಮಿ, ಮುಖ್ಯ ಗುರು ಅರುಣ ಕುಮಾರಿ, ಪ್ರಾಚಾರ್ಯ ಲೋಕಪ್ಪ ಮೈಲಾಪುರ್, ಉಪ ಪ್ರಾಚಾರ್ಯ ಜ್ಯೋತಿ ಅಮರನಾಥ್ ,ಮೇಲ್ವಿಚಾರಕರಾದ ಫಿಲೋಮಿನಾ ಡಿಸೋಜಾ ಸುಧಾ ಸುಬ್ಬರಾಯುಡು ಮುಂತಾದವರು ಉಪಸ್ಥಿತರಿದ್ದರು.
 ಲೆಬನೊ ಆರ್ಮಿ ನಿರೂಪಿಸಿದರು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.