ನಿಮಗಾಗಿ ನಾವು ಸಂಸ್ಥೆಯಿಂದ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ ಆ 16 : ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಎಆರ್ಪಿ ಲೈನ್  ಸ.ಮಾ.ಹಿ.ಪ್ರಾ.ಶಾಲೆ ಎಆರ್ಪಿ ಲೈನ್ ಬಳ್ಳಾರಿಯಲ್ಲಿ ಧ್ವಜಾರೋಹಾಣ ಕಾರ್ಯಕ್ರಮವನ್ನು ನೆರವೇರಿಸಿದ್ದು, ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮವನ್ನು ಶಂಭುಲಿಂಗ ಕುಮಾರ್ ಹಿರಿಯ ಪಶುವೈದ್ಯ ಪರೀಕ್ಷಕರು, ಶ್ರೀಮತಿ ಹಸೀನ್ ಟಿ ಎಸ್ಡಿಎಂಸಿ ಅಧ್ಯಕ್ಷರು, ಮತ್ತು ಪ್ರಭಾರಿ ಮುಖ್ಯ ಗುರುಗಳು ಶ್ರೀ ಎರ್ರಿ ಸ್ವಾಮಿ ಹಾಗೂ ವಿನಯ್ ಕುಮಾರ್ ಎಂ ಎಸ್ ಅಧ್ಯಕ್ಷರು, ನಿಮಗಾಗಿ ನಾವು ಸಂಸ್ಥೆ ಬಳ್ಳಾರಿ ರವರು ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಸೈನಿಕರನ್ನು, ರೈತರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಸನ್ಮಾನೀತರಾದ ಶ್ರೀ ರಾಜಸಿಂಹ ಕುಲಕರ್ಣಿ ಮಾಜಿ ಸೈನಿಕರು ಬಳ್ಳಾರಿ ರವರು ಮಾತಾಡಿ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು ತಿಳಿಸುತ್ತಾ ಯುವ ಪೀಳಿಗೆ ಹೆಚ್ಚು ಸೈನ್ಯ ಸೇರುವಲ್ಲಿ ಆಸಕ್ತಿ ತೋರಬೇಕು & ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ದೇಶ ಸೇವೆಯೇ ದೇವರ ಸೇವೆ ಎಂದು ತಿಳಿಸಿದರು.
ಸನ್ಮಾನೀತರಾದ ಶ್ರೀ ಕೆ ದೊಡ್ಡ ಬಸವರಾಜ್ ಪ್ರಗತಿಪರ ರೈತರು ಮಾತಾಡಿ ಕೃಷಿಯನ್ನ ಕೇವಲ ಲಾಭದಾಯಕ ಮಾಡಿಕೊಳ್ಳುವುದಕ್ಕಿಂತ ಆರೋಗ್ಯದಾಯಕ ಮಾಡಿಕೊಳ್ಳುವುದು ಹೆಚ್ಚು ಸೂಕ್ತ.ಬೆಲೆ ಜಾಸ್ತಿ ಎನಿಸಿದರು ಸಾವಯವ ಉತ್ಪನ್ನಗಳನ್ನೇ ಬಳಸಿ ಎಂದು ತಿಳಿಸಿದರು ಸಂಸ್ಥೆಯವರು ನನ್ನನ್ನ ಸನ್ಮಾನಿಸಿದ್ದು ಖುಷಿತಂದಿದೆ ಎಂದು ಹೇಳಿದರು.
ಮುಖ್ಯಅತಿಥಿಗಳಾದ ಶ್ರೀ ಕೆ ಶಂಭುಲಿಂಗ ಕುಮಾರ್ ಹಿರಿಯ ಪಶುವೈದ್ಯ ಪರೀಕ್ಷಕರು ಮಾತಾಡಿ ಜೈ ಸೈನಿಕ ಜೈ ರೈತ ಎಂಬ ಘೋಷವಾಕ್ಯವನ್ನ ಕೇವಲ ಜೈಕಾರಕ್ಕೆ ಸೀಮಿತಗೊಳಿಸದೆ ನಿವೃತ್ತ ಸೈನಿಕರನ್ನ , ಉತ್ತಮ ರೈತರನ್ನ ಗುರುತಿಸಿ ಅವರ ಕೆಲಸ ಕಾರ್ಯದ ಬಗ್ಗೆ ತಿಳಿಸುತ್ತಿರುವುದು ಸಂಸ್ಥೆಯ ಹೆಮ್ಮೆಯ ಕಾರ್ಯ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಅತಿಥಿಗಳಾಗಿ ರಾಮಚಂದ್ರಪ್ಪ, ರೈತರು & ವೀರೇಶ್ ನಿವೃತ್ತ ಸೈನಿಕ ಆಗಮಿಸಿದ್ದರು. ಸಂಸ್ಥೆಯ ಕಾರ್ಯದರ್ಶಿಯಾದ ಬಿ ಮಾರುತಿ ಶಿಕ್ಷಕರಾದ ಶ್ರೀಮತಿ ಲೀನ ಶ್ರೀಮತಿ ವಿಶಾಲಾಕ್ಷಿ ಶ್ರೀಮತಿ ಸುಪ್ರಿಯ ರವರು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಗೋಡಿ ಶಿವರಾಜ್ ಹಾಗೂ ದಕ್ಷಿಣ ಮೂರ್ತಿ ರವರು ನಡೆಸಿಕೊಟ್ಟರು ನಿರ್ವಹಣೆಯನ್ನು ಬಾಲಸುಬ್ರಮಣ್ಯ,ಅನಿಲ್,ಸಂದೀಪ್ ರವರು ವಹಿಸಿಕೊಂಡಿದ್ದರು.
ಸಂಸ್ಥೆಯ ಕಾರ್ಯನಿರ್ವಾಹಕರಾದ ಮೇಘನಾ,ವಿಜಯ್ ಕುಮಾರ್, ಚನ್ನತೀರ, ವೀರೇಶ್, ರುದ್ರೇಶ್, ಬಾಲು, ಅವಿನಾಶ್, ಶಿವರಾಜ್, ಸಂಜೀವ್, ಗುರುಲಿಂಗ, ನಾಗರಾಜ್,ಯೇಸುಪ್ರಭು, ಷಣ್ಮುಖ, ಪಂಪಾಪತಿ, ಶಿವಾಜಿ, ಪ್ರಕಾಶ್, ಅಜಿತ್, ಸುರೇಶ್, ಕೆಂಚಪ್ಪ, ಹಸೇನ್, ಹರ್ಷ, ಕಿರಣ್, ವೆಂಕಟೇಶ್, ಇತರರು ಪಾಲ್ಗೋಂಡಿದ್ದರು.