ಸ್ವಾತಂತ್ರ್ಯೋತ್ಸವ ಆಚರಣೆ
ಧಾರವಾಡ, ಆ16: ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ 78ನೇ ಸ್ವಾತಂತ್ಯ್ರೋತ್ಸವನ್ನು ಆಚರಿಸಲಾಯಿತು.
ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ 78ನೇ ಸ್ವಾತಂತ್ಯ್ರೋತ್ಸವನ್ನು ಆಚರಿಸಲಾಯಿತು. ಹಿರಿಯ ನ್ಯಾಯಮೂರ್ತಿ ಗೌರವಾನ್ವಿತ ಶ್ರೀ.ಕೃಷ್ಣ ಎಸ್. ದೀಕ್ಷಿತ ರವರು ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ತಮ್ಮ ಭಾಷಣದಲ್ಲಿ ಎಲ್ಲರಿಗೂ ಶುಭಾಶಯಗಳನ್ನು ಕೋರಿ, ಈ ದೇಶದ ಇತಿಹಾಸವನ್ನು ಮೆಲಕುಹಾಕುತ್ತಾ ಪರಕೀಯರ ದಾಳಿಗಳಾದಾಗ್ಯೂ ಭಾರತ ತನ್ನ ಶ್ರೇಷ್ಠ ನಾಗರಿಕತೆಯಿಂದ ಸ್ವಾತಂತ್ಯ್ರ ಸಂಗ್ರಾಮದವರೆಗೆ ನಡೆದು ಬಂದ ದಾರಿಯನ್ನು ಸ್ಮರಿಸಿದರು.
ನಾವೆಲ್ಲಾ ಭಾರತೀಯರು ಜಾತಿ ಮತ ಪಂಥಗಳ ಸಿಮೀತ ದೃಷ್ಠಿಕೋನದಿಂದ ಹೊರಬಂದು ಭಾವೈಕ್ಯತೆಯಿಂದ ಪರಸ್ಪರ ಹೆಜ್ಜೆಗಳನ್ನು ಇಡುತ್ತಾ ಭುಜಕ್ಕೆ ಭುಜ ಕೊಟ್ಟು ಭಾರತದ ಸರ್ವಾಂಗೀಣ ಅಭೀವೃದ್ದಿಗೆ ಪ್ರಯತ್ನಿಸೋಣ, ಆ ಮೂಲಕ ನಮ್ಮ ಹಿರಿಯರು ತ್ಯಾಗ ಬಲಿದಾನಗಳಿಂದ ಗಳಿಸಿಕೊಟ್ಟ ಈ ಸ್ವಾತಂತ್ರ್ಯವನ್ನು ಉಳಿಸೋಣ ಎಂದು ಹೇಳಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಬಿ.ಎಮ್.ಶ್ಯಾಮಪ್ರಸಾದ, ಗೌರವಾನ್ವಿತ ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ, ಗೌರವಾನ್ವಿತ ನ್ಯಾಯಮೂರ್ತಿ ರವಿ ವಿ. ಹೊಸಮನಿ, ಗೌರವಾನ್ವಿತ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ, ಗೌರವಾನ್ವಿತ ನ್ಯಾಯಮೂರ್ತಿ ಜೆ.ಎಮ್.ಖಾಜಿ, ಗೌರವಾನ್ವಿತ ನ್ಯಾಯಮೂರ್ತಿÀ ಶ್ರೀಮತಿ, ಕೆ.ಎಸ್.ಹೇಮಲೇಖಾ, ಗೌರವಾನ್ವಿತ ನ್ಯಾಯಮೂರ್ತಿ ಸಿ.ಎಮ್. ಜೊಶಿ, ಗೌರವಾನ್ವಿತ ನ್ಯಾಯಮೂರ್ತಿ ವಿಜಯಕುಮಾರ ಪಾಟೀಲ, ಕೇಂದ್ರ ಸರ್ಕಾರದ ಸಾಲಿಸಿಟರ ಜನರಲ್, ರಾಜ್ಯ ಸರ್ಕಾರ ವಕೀಲರು ರಾಜ್ಯ ಪಬ್ಲಿಕ ಪ್ರಾಸಿಕ್ಯುಟರ, ಮತ್ತು ವಕೀಲರ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಕ ಮಹಾ ವಿಲೇಖಾನಾಧಿಕಾರಿ ಶಾಂತವೀರ ಶಿವಪ್ಪ, ಹಾಗೂ ಅಧಿಕ ಮಹಾ ವಿಲೇಖಾನಾಧಿಕಾರಿ (ನ್ಯಾಯಾಂಗ) ಜೆ.ಆರ್.ಮೆಂಡೋನ್ಸಾ ರವರು ಹಾಜರಿದ್ದರು.