ಸ್ವಾತಂತ್ರ್ಯ ತ್ಯಾಗ ಬಲಿದಾನದಿಂದ ಬಂದಿದೆ
ಲಕ್ಷ್ಮೇಶ್ವರ,ಆ16: ದೇಶಕ್ಕೆ ಸ್ವಾತಂತ್ರ್ಯವು ಹಲವರ ತ್ಯಾಗ ಬಲಿದಾನದಿಂದ ಬಂದಿದೆ ಎಂದು ತಹಶೀಲ್ದಾರ ವಾಸುದೇವ ವಿ ಸ್ವಾಮಿ ಹೇಳಿದರು.
ಅವರು ಉಮಾ ಮಹಾವಿದ್ಯಾಲಯ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡ 78 ನೇ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಣ ಪಥ ಸಂಚಲನ ಜರುಗಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಆಡಳಿತವತಿಯಿಂದ ನಿವೃತ್ತ ಲೋಕಾಯುಕ್ತ ಎಸ್ಸಿ ಶಂಕರ ರಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ವೈದ್ಯಾಧಿಕಾರಿ ಶ್ರಿಕಾಂತ ಕಾಟೇವಾಲೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ್ ಗ್ರೇಡ್ 2 ತಹಶೀಲ್ದಾರ ಮಂಜುನಾಥ ಅಮಾಸಿ ಮುಖ್ಯಾಧಿಕಾರಿ ಮಹೇಶ ಹಡಪದ ಉಪನೋಧನಿ ಅಧಿಕಾರಿ ಎಸ್.ಕೆ.ಜಳರೆಡ್ಡಿ ಪಿ.ಎಸ್.ಐ ಈರಪ್ಪ ರಿತ್ತಿ ನ್ಯಾಯವಾಧಿ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಪಾಟೀಲ್ ಹೆಸ್ಕಾಂ ಅಧಿಕಾರಿ ಆಂಜನಪ್ಪ ಹಾಗೂ ಪುರಸಭೆ ಸದಸ್ಯರು ಹಾಜರಿದ್ದರು.