ದೇಶ ಕಟ್ಟುವ ಕೆಲಸ ಮಾಡೋಣ
ಚನ್ನಮ್ಮನ ಕಿತ್ತೂರು,ಆ16: ದೇಶ ನಮಗೆ ಏನು ಮಾಡಿದೇ ಎನ್ನುವ ಪೂರ್ವ ನಾವು ದೇಶಕ್ಕಾಗಿ ಏನು ಕೊಟ್ಟಿದ್ದೇವೆ. ಎನ್ನುವುದರ ಬಗ್ಗೆ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಈರಣ್ಣಾ ಮುಂಡೋಳ್ಳಿ ಹೇಳಿದರು.
ಕ್ಷೇತ್ರದ ವ್ಯಾಪ್ತಿಯ ಗದ್ದಿಕರವಿನಕೊಪ್ಪ ಸರ್ಕಾರಿ ಹಿರಿಯ ಪ್ರ್ರಾಥಮಿಕ ಕನ್ನಡ ಶಾಲೆ ಅಂಗಳದಲ್ಲಿ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.
ಮಾಜಿ ಗ್ರಾಪಂ ಅಧ್ಯಕ್ಷ ಎಪಿಎಂಸಿ ಮಾಜಿ ನಿರ್ದೇಶಲ ಬಸವರಾಜ ಗಡೆನ್ನನವರ, ಎಸ್.ಡಿ.ಎಂ.ಸಿ ಸರ್ವಸದಸ್ಯರು, ಗ್ರಾಮದ ಹಿರಿಯರು ಮಕ್ಕಳು, ಶಿಕ್ಷಕರು, ಅಂಗನವಾಡಿ ಆಶಾ ಕಾರ್ಯಕರ್ತರು ಸಾರ್ವಜನಿಕರು ಪಾಲ್ಗೊಂಡಿದ್ದರು.