ರೈತರ ಪ್ರಗತಿಯೇ ಅಭಿವೃದ್ಧಿಗೆ ಪೂರಕ
ಬೈಲಹೊಂಗಲ,ಆ16: ದೇಶದ ರೈತರು ನಿಜವಾದ ಪ್ರಗತಿ ಕಂಡಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ಕೃಷಿ ಸಹಾಯಕ ನಿರ್ದೇಶಕ ಬಸವರಾಜ ದಳವಾಯಿ ಹೇಳಿದರು.
ಪಟ್ಟಣದ ಕುಲಕರ್ಣಿ ಗಲ್ಲಿಯಲ್ಲಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಕಚೇರಿಯಲ್ಲಿ ಧ್ವಜರೋಹಣ ನೆರವೇರಿಸಿ ಅವರು ಮಾತನಾಡಿದರು.
ವಿಠ್ಠಲ ಯಾಸನ್ನವರ, ಬಸಪ್ಪ ಹೂಗಾರ, ಈರಪ್ಪ ಎತ್ತಿನಮನಿ, ಸೊಗಲಪ್ಪ ಶಿರವಂತಿ,ಯುವ ರೈತ ಮುಖಂಡರಾದ ಬಸವರಾಜ ಉಪ್ಪಾರ,ಶಿವು ಜೋಳದ, ರವೀಂದ್ರ ಹುಡೇದ, ಈರಣ್ಣ ಹಡಪದ, ಮಂಜು ಅಗಸಿಬಾಗಲ, ಮಂಜು ಮಡಿವಾಳ, ಹಣಮಂತ ಬಡಿಗೇರ, ಬಸು ತೋಟಗಿ, ಮಣಿಕಂಠ ಹಡಪದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.