ಸೆ.೨೯ ಪಿಬಿಎಸ್ ಗೀತೆಗಳ ಸೋಲೋ
ಬೆಂಗಳೂರು, ಆ. ೧೬- ಖ್ಯಾತ ಹಿನ್ನೆಲೆ ಗಾಯಕ ಡಾ. ಪಿ.ಬಿ. ಶ್ರೀನಿವಾಸ್ ರವರ ೯೫ನೇ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ಶ್ರೀನಿವಾಸ್ ಮಧುರ ಗಾನ ತಂಡದ ವತಿಯಿಂದ ಸೆ. ೨೯ ರಂದು ನಗರದ ಚನ್ನಮ್ಮನಗರ ಬಸ್ ನಿಲ್ದಾಣದ ಸಮೀಪವಿರುವ ಪರಂಪರಾ ಆ ಸಭಾಂಗಣದಲ್ಲಿ ಪಿ.ಬಿ.ಎಸ್. ಹಾಡುಹಬ್ಬ ಮತ್ತು ಪಿ.ಬಿ. ಶ್ರೀನಿವಾಸ್ ಅವರ ಗೀತೆಗಳ ಸೋಲೋ ಹಾಗೂ ಯುಗಳ ಗೀತೆಗಳ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
೩೫ ವರ್ಷ ವಯೋಮಿತಿ ಒಳಗಿನ ಗಾಯಕ-ಗಾಯಕಿಯರಿಗಾಗಿ ಈ ಸ್ಪರ್ಧೆ ಏರ್ಪಡಿಸಿದ್ದು, ಪ್ರವೇಶ ಉಚಿತ. ಈ ಗಾಯನ ಕಾರ್ಯಕ್ರಮ ಅಂದು ಬೆಳಿಗ್ಗೆ ೯ ಗಂಟೆಗೆ ಆರಂಭವಾಗಿ ರಾತ್ರಿ ೯ ರವರೆಗೆ ದಿನವಿಡೀ ನಡೆಯಲಿದೆ.
೬೦ಕ್ಕೂ ಹೆಚ್ಚು ಹೆಸರಾಂತ ಗಾಯಕ-ಗಾಯಕಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಡಾ. ಪಿ.ಬಿ. ಶ್ರೀನಿವಾಸ್‌ರವರ ಪುತ್ರ ಡಾ. ಪಿ.ಬಿ. ಫಣೀಂದರ್ ರವರು ಉಪಸ್ಥಿತರಿರುವರು.
ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿಚ್ಚಿಸುವವರು ಮೊದಲಿಗೆ ತಮ್ಮ ತಮ್ಮ ಇಷ್ಟದ ಸೋಲೋ / ಡುಯಟ್ ಗೀತೆಗಳನ್ನು ವಿಡಿಯೋ ಮಾಡಿ ಕಳುಹಿಸಬೇಕು. ವಿಡಿಯೋ ಕಳುಹಿಸಲು ದಿನಾಂಕ: ೦೫-೦೯-೨೦೨೪ ಕೊನೆಯ ದಿನವಾಗಿರುತ್ತದೆ.
ಈ ಸುತ್ತಿನಲ್ಲಿ ಆಯ್ಕೆಯಾದವರು ಅಂತಿಮ ಸುತ್ತಿಗೆ ಪ್ರವೇಶಿಸ ಪಡೆಯುತ್ತಾರೆ. ಅವರಿಗೆ ಅಂತಿಮ ಸುತ್ತಿನಲ್ಲಿ ಹಾಡಲು ಹಾಡುಗಳನ್ನು ತೀರ್ಪುಗಾರರ ಮಂಡಳಿ ಮೊದಲೇ ನೀಡಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ೯೭೪೨೭೭೨೨೦೦ ಅನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.