ಗುರು ನಾನಕ್ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ಚಿನ್ನದ ಪದಕ
ಬೀದರ:ಆ.೧೬: ಗುರುನಾನಕ್ ಪ್ರಥಮ ದರ್ಜೆ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಪೃಥ್ವಿವೈಜನಾಥ್ ಸ್ವಾಮಿ ಯನ್ನು ದಿನಾಂಕ ೧೨ ಆಗಸ್ಟ್ ೨೦೨೪ರಂದು ಗುಲ್ಬರ್ಗ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿರುವ ೪೨ ನೇ ವಾರ್ಷಿಕ ಉತ್ಸವದ ಪ್ರಯುಕ್ತ ವಾಣಿಜ್ಯ ವಿಭಾಗದ ವತಿಯಿಂದ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
ಪ್ರಯುಕ್ತ ಶ್ರೀ ನಾನಕ್ ಝೀರಾ ಸಾಹೇಬ್ ಫೌಂಡೇಶನ್ ಅಧ್ಯಕ್ಷರಾದ ಡಾಕ್ಟರ್ ಸರ್ದಾರ್ ಬಲ್ಬೀರ್ ಸಿಂಗ್ ಜಿ. ಹಾಗೂ ಗುರುನಾನಕ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರೇಷ್ಮಾ ಕೌರ್ ಜಿ . ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಶಾಮಲಾ ವಿ ದತ್ತ. ವಿಭಾಗದ ಮುಖ್ಯಸ್ಥರು ಉಪನ್ಯಾಸಕ ವರ್ಗ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದರು ಬೀದರ್ ಜಿಲ್ಲೆಗೆ ಹಾಗೂ ಗುರುನಾನಕ್ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ಕೀರ್ತಿ ತಂದು ಕೊಟ್ಟಿದ್ದಕ್ಕಾಗಿ ಶ್ಲಾಘಿಸಿದ್ದಾರೆ.