ವಿಕಸಿತ ಭಾರತಕ್ಕೆ ಕೈ ಜೋಡಿಸಿ
ಬಾಗಲಕೋಟ,ಆ.16: ಸ್ವಾತಂತ್ರ್ಯ ದೊರಕಿ 78 ವರ್ಷಗಳಾಗಿದೆ. ಸ್ವಾತಂತ್ರ್ಯಕ್ಕಾಗಿ ವೀರಮಹನೀಯರು ತಮ್ಮ ಬಲಿದಾನವನ್ನು ಮಾಡಿದ್ದಾರೆ. ಅವರನ್ನು ಸ್ಮರೀಸುವ ಕಾರ್ಯವಾಗಬೇಕಿದೆ. ಇಂದು ನಾವು ಸ್ವತಂತ್ರ್ಯ ಹಕ್ಕು ಪಡೆದು ಎಲ್ಲ ರಂಗದಲ್ಲೂ ಪ್ರಗತಿಪಥದತ್ತ ಸಾಗುತ್ತಿದ್ದೇವೆ ಎಂದು ಪ್ರಭಾರ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ಕುಷ್ಠರೋಗದ ನಿಯಂತ್ರಣಾಧಿಕಾರಿ ಡಾ.ಸುವರ್ಣ ಕುಲಕರ್ಣಿ ಹೇಳಿದರು.
ಬಾಗಲಕೋಟ ಜಿಲ್ಲಾ ಸಮೀಕ್ಷಾ ಘಟಕದ ಕಚೇರಿ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಅವರು. ಮಾತನಾಡಿದರು. ಈ ಸಂದರ್ಭದಲ್ಲಿ ಡಾ.ಸೀಮಾ ಹುದ್ದಾರ, ಡಾ.ಅಜೀತ ಪಾಟೀಲ, ಎಂ.ಬಿ.ಪಾಟೀಲ್, ಎಚ್.ಪಿ.ನಾಯ್ಕರ, ಶಶಿಕುಮಾರ್ ಕುಮಟಳ್ಳಿ ಸೇರಿದಂತೆ ಜಿಲ್ಲಾ ಸಮೀಕ್ಷಾ ಘಟಕದ ಸಿಬ್ಬಂದಿ, ಜಿಲ್ಲಾ ಕುಷ್ಠರೋಗದ ನಿಯಂತ್ರಣಾಧಿಕಾರಿ ಕಚೇರಿ ಸಿಬ್ಬಂದಿ ಹಾಜರಿದ್ದರು.