ಸ್ವಾತಂತ್ರ್ಯೋತ್ಸವ ಆಚರಣೆ
ಚನ್ನಮ್ಮನ ಕಿತ್ತೂರ,ಆ.16: ಮಹನೀಯರು ಬ್ರಿಟಿಷರ ವಿರುದ್ಧ ರಣಕಹಳೆ ಊದಿ ಮಧ್ಯೆ ರಾತ್ರಿ ಸ್ವತಂತ್ರ್ಯ ತಂದುಕೊಟ್ಟಿದ್ದಾರೆ. ಆದರೆ ಭಾರತ ವಿಭಜನೆಯ ಮೂಲಕ ಒಡೆದ ಆ ದಿನವನ್ನು ದೇಶ ವಿಭಜನೆಯ ದುರಂತ ಕಥೆ ತಿಳಿಸುತ್ತದೆ ಎಂದು ಸಮಾಜಸೇವಕ ಹಾಗೂ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಸೋಮವಾರ ಪೇಟೆಯ ಚನ್ನಮ್ಮನ ಕೂಟದಲ್ಲಿ ಅಗಷ್ಟ 14ರ ಮದ್ಯರಾತ್ರಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಹುಣಸೀಕಟ್ಟಿ-ಬೀಳಕಿ-ಅವರೊಳ್ಳಿ ಚನ್ನಬಸವದೇವರು, ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣರ, ಶಿವಾನಂದ ಹನಮಸಾಗರ, ಕಿರಣ ಪಾಟೀಲ, ಬಸನಗೌಡ ಸಿದ್ರಾಮನಿ, ಗೌಡಪ್ಪ ದೊಡ್ಡಗೌಡರ, ಸಂದೀಪ ದೇಶಪಾಂಡೆ, ಉಳವಪ್ಪಾ ಉಳ್ಳಾಗಡ್ಡಿ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರಿದ್ದರು.