ಸ್ವಾತಂತ್ರ್ಯೋತ್ಸವ ಆಚರಣೆ
ಚನ್ನಮ್ಮನ ಕಿತ್ತೂರು,ಆ.16: ತಾಲೂಕಿನ ದೇವಗಾಂವ ಗ್ರಾಪಂದಲ್ಲಿ ಗಾಂಧಿಜೀ ಹಾಗೂ ಅಂಬೇಡ್ಕರವರ ಭವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗಿಸಿ, 78ನೇ ವರ್ಷದ ಸ್ವಾತಂತ್ರ್ಯೊತ್ಸವ ಧ್ವಜಾರೋಹಣವನ್ನು ಗ್ರಾಪಂ ಅಧ್ಯಕ್ಷೆ ಶ್ರೀಮತಿ ಮಲ್ಲವ್ವ.ಶಂ. ನಾವಲಗಟ್ಟಿ ನೇರವೇರಿಸಿದರು.
ನಂತರ ಮಾತನಾಡಿ ದೇಶದ ಸ್ವತಂತ್ರಕ್ಕಾಗಿ ಅನೇಕ ಮಹನೀಯರು ತ್ಯಾಗ-ಬಲಿದಾನ ಮಾಡಿದ್ದಾರೆ. ಅವರ ತ್ಯಾಗ-ಬಲಿದಾನದ ಫಲವಾಗಿ ದೊರೆತ್ತಿರುವ ಸ್ವಾತಂತ್ರ್ಯವನ್ನು ಅರ್ಥೈಸಿಕೊಂಡು ದೇಶದ ಅಭಿವೃದ್ಧಿಗೆ ನಾವೇಲ್ಲರೂ ಶ್ರಮೀಸಬೇಕಾಗಿದೆ ಎಂದರು.
ಈ ವೇಳೆ ಗ್ರಾಪಂ ಸದಸ್ಯರುಗಳಾದ ವಿವೇಕಾನಂದ ದುಗ್ಗಾಣಿ, ಮಾನಪ್ಪ ಕಂಬಾರ, ಅನುಶ್ರೀ ಗಳಗಿ, ಚಂದ್ರವ್ವ ದೊಡಮನಿ, ಭರತ ಗಂದಿಗವಾಡ, ಬಸವಣ್ಣೆವ್ವ ಮುಪ್ಪಿನಮಠ, ಜ್ಯೋತಿ ರಾಮಚಂದ್ರ ಪತ್ತಾರ, ರಾಜೇಂದ್ರ ಕಕ್ಕೇರಿ, ರಿಯಾನ್ ಅಂಬಲತಡಿ, ಶಕ್ಕೂಬಾಯಿ ದೇಸಾಯಿ, ಈಶ್ವರ ನರಗುಂದ, ಅನೀಲ ಎಮ್ಮಿ, ಕಿರಣ ವಾಲಿಕಾರ, ಮಂಜುನಾಥ ದೊಡ್ಡನಾಯಕರ, ರಾಜಶ್ರೀ ಪಾಟೀಲ, ನಾಗಪ್ಪ ಪರಸನಟ್ಟಿ, ಸವಿತಾ ಎಮ್ಮಿ, ರತ್ನವ್ವ ರುದ್ರಪ್ಪ ಬೆಂಡಿಗೇರಿ, ಹಿರಿಯರಾದ ರಾಜು ನಾವಲಗಟ್ಟಿ, ರಮೇಶ ಉಗರಖೋಡ, ಈರಣ್ಣಾ ಹುಬ್ಬಳ್ಳಿ, ಸಿ.ಬಿ.ಪಾಟೀಲ, ಈರಣ್ಣಾ ಮಾರಿಹಾಳ, ರಾಜು ಕಡತಾಳ, ಅದೃಶ್ಯ ಪತ್ತಾರ, ಪಾರೀಸ್ ಅಗಸಿಮನಿ, ನಾಗಪ್ಪ ತಳವಾರ, ಗ್ರಾಪಂ ಸರ್ವ ಸದಸ್ಯರು ಸಿಬ್ಬಂದಿ, ಶಾಲಾ ಮಕ್ಕಳು, ಶಿಕ್ಷಕರು, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಪಶು ಸಕಿಯರು, ಉದ್ಯೋಗ ಖಾತ್ರಿ ಸಿಬ್ಬಂದಿ, ಗಡಗಿ ಶಾಲೆ ಮಕ್ಕಳು-ಶಿಕ್ಷಕರು, ಗ್ರಾಪಂ ಕಸ ವಿಲೇವಾರಿ ಸಿಬ್ಬಂದಿ, ಸಾರ್ವಜನಿಕರಿದ್ದರು.