ಕೆಪಿ ವಿದ್ಯಾ ಸಂಸ್ಥೆಯಲ್ಲಿ ಧ್ವಜಾರೋಹಣ
ಬೀದರ: ಆ.೧೬:ನಗರದ ಕೆಪಿ ವಿದ್ಯಾ ಸಂಸ್ಥೆಯಲ್ಲಿ ೭೮ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಸಂಸ್ಥೆಯ ಅಧ್ಯಕ್ಷರಾದ ಬಾಬು ವಾಲಿ ಧ್ವಜಾರೋಹಣ ನಡೆಸಿಕೊಡುವ ಮೂಲಕ ಆಚರಿಸಿದರು.
ನಮ್ಮೆ ದೇಶಕ್ಕೆ ಸ್ವಾತಂತ್ರö್ಯ ಪುಕ್ಕಟೆಯಾಗಿ ಸಿಕ್ಕಿಲ್ಲ. ಇದಕ್ಕೆ ಮಹಾತ್ಮ ಗಾಂಧಿ ಶಾಂತಿಯುತವಾಗಿ ಹೋರಾಟ ನಡೆಸಿದರೆ, ಭಗತಸಿಂಗ್, ರಾಜಗುರು, ಸುಖದೇವ್ ಸಂಘರ್ಷ ಮಾಡಿ ವೀರ ಮರಣ ಹೊಂದಿದ್ದರು. ವಿದ್ಯಾರ್ಥಿಗಳಾದ ನಾವು ಸಿನಿಮಾ ತಾರೆಯರು, ಸೆಲೆಬ್ರಿಟಿಗಳನ್ನು ಬದಿಗಿಟ್ಟು ಸ್ವಾತಂತ್ರö್ಯಕ್ಕಾಗಿ ತಮ್ಮ ಜೀವನವನೇ ಮುಡುಪಾಗಿಟ್ಟ ವೀರ ಯೋಧರನ್ನು ಆದರ್ಶವಾದಿಗಳನ್ನಾಗಿ ಮಾಡಿಕೊಂಡು ನಡೆಯಬೇಕು ಎಂದು ತಿಳಿ ಹೇಳಿದರು.
ಈ ಸ್ವಾತಂತ್ರೋತ್ಸವ ದಿನಚಾರಣೆಯ ಅಂಗವಾಗಿ ಅನೇಕ ವಿದ್ಯಾರ್ಥಿಗಳು ಭಾಷಣ, ನೃತ್ಯ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಜಿಜಾ ಮಾತಾ ಶಿಕ್ಷಣ ಸಂಸ್ಥೆ ನಡೆಸಿದ ಸಾಮಾನ್ಯ ಜ್ಞಾನದಲ್ಲಿ ಎರಡನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.
ಈ ಸಂಧರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಮಲ್ಲಯ್ಯ ಸ್ವಾಮಿ, ನಿರ್ದೇಶಕರಾದ ಸಂತೋಷ ಬಾಲೋಡೆ, ಕನ್ಯಾಕ ಪರಮೇಶ್ವರಿ ಕನ್ನಡ ಪ್ರಾಥಮಿಕ ಪ್ರೌಢ ಹಾಗೂ ಆಂಗ್ಲ ಹಿರಿಯ ಮಾಧ್ಯಮ ಮುಖ್ಯಗುರುಗಳಾದ ವಿಜಯ ಕುಮಾರ ಪಾಟೀಲ ಯರನಳ್ಳಿ, ಸೇರಿದಂತೆ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.