ಸೈನ್ಯದಲ್ಲಿ ಸೇವೆ ಸಲ್ಲಿಸುವುದೊಂದೆ ದೇಶ ಸೇವೆಯಲ್ಲ: ಎಸ್.ಎಂ. ಗುಡ್ಡದ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೧೬:ದೇಶಾಭಿಮಾನ ಎನ್ನುವುದು ಬೋಧನೆಯಿಂದ ಬರುವಂತದಲ್ಲ. ಅದು ನಮ್ಮಲ್ಲಿಯೇ ಜಾಗೃತಗೊಳ್ಳಬೇಕು. ಶಿಕ್ಷಣ ಎನ್ನುವುದು ಅದಕ್ಕೆ ಪೂರಕವಾದ ಕಾರ್ಯ ಮಾಡುತ್ತದೆ. ಕಲಿಕೆಯ ಜೊತೆಯಲ್ಲಿ ಮಕ್ಕಳಲ್ಲಿ ನೆಲೆಗೊಂಡಿರುವ ದೇಶಾಭಿಮಾನವನ್ನು ಪೋಷಿಸುವುದೇ ಪರಿಪೂರ್ಣ ಶಿಕ್ಷಣದ ಮೊದಲ ಹೆಜ್ಜೆಯಾಗುತ್ತದೆ ಎಂದು ಭಾರತೀಯ ವಾಯು ಪಡೆಯ ನಿವೃತ್ತ ಸ್ಕಾ÷್ವಡ್ರನ್ ಲೀಡರ್ ಎಸ್.ಎಂ. ಗುಡ್ಡದ ಹೇಳಿದರು.
ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ೭೮ನೇ ಸ್ವಾತಂತ್ರೊö್ಯÃತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇಂದು ದೇಶ ಎಲ್ಲ ಕ್ಷೇತ್ರಗಳಲ್ಲಿಯೂ ಬಲಿಷ್ಠತೆ ಸಾಧಿಸುತ್ತ ಹೊರಟಿದೆ. ಪರಿಪೂರ್ಣತೆ ಎಡೆಗೆ ಸಾಗಬೇಕಾದರೆ ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ಅರಿತುಕೊಂಡು ಕಾರ್ಯ ಮಾಡಬೇಕಾಗುತ್ತದೆ. ಕೇವಲ ಸೇನೆಯಲ್ಲಿ ಸೇವೆ ಸಲ್ಲಿಸಿದರೆ ಅದು ದೇಶಭಕ್ತಿಯಾಗುವುದಿಲ್ಲ. ಬದಲಿಗೆ ದೇಶದ ಪ್ರತಿಯೊಬ್ಬ ನಾಗರಿಕನು ಸಮಾಜಕ್ಕಾಗಿ ದೇಶಕ್ಕಾಗಿ ಮಾಡುವ ಉತ್ತಮ ಕಾರ್ಯಗಳೆಲ್ಲ ದೇಶಭಕ್ತಿಯ ಪ್ರತೀಕವೇ ಆಗಿರುವುದರಿಂದ ದೇಶದ ಪ್ರಗತಿಯಾಗಬೇಕಾದಲ್ಲಿ ಎಲ್ಲರೂ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಬೇಕು. ಅದರಲ್ಲೂ ಮಕ್ಕಳು ಯಾವುದೇ ಕ್ಷೇತ್ರದಲ್ಲಿ ಹೆಜ್ಜೆ ಇರಿಸಿದರೂ ಕೂಡ ತಮ್ಮ ಕಾರ್ಯ ನೈಪುಣ್ಯತೆಯನ್ನು ಪ್ರದರ್ಶಿಸುವುದರೊಂದಿಗೆ ತಮ್ಮ ಸೆವೆಯನ್ನು ದೇಶಕ್ಕಾಗಿ ನೀಡಬೇಕು. ಆ ನಿಟ್ಟಿನಲ್ಲಿ ಮಕ್ಕಳಲ್ಲಿನ ದೇಶಾಭಿಮಾನವನ್ನು ಹೊರ ತೆಗೆಯುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಅಭಿಯಂತರರು ಹಾಗೂ ಘೇವರಚಂದ್ ನಗರದ ಅಧ್ಯಕ್ಷÀ ಜಿ.ಬಿ. ಜಿಡ್ಡಿಮನಿ ಮಾತನಾಡಿ, ದೇಶ ಅಭಿವೃದ್ಧಿಯ ಪಥದಲ್ಲಿ ಹೆಜ್ಜೆ ಹಾಕುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಕಬಂಧ ಬಾಹುವನ್ನು ಚಾಚುತ್ತ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಹೀಗಿರುವಾಗ ಮುಂದು ವರಿಯುತ್ತಿರುವ ದೇಶಕ್ಕಾಗಿ ನಾವು ಏನಾದರೂ ಕೊಡುಗೆ ನೀಡಬೇಕು. ಹಾಗೆಂದು ಬಂದೂಕು ಹಿಡಿದು ಯುದ್ಧ ಮಾಡಬೇಕೆಂದೇನಿಲ್ಲ. ಬದಲಿಗೆ ಕಲಿಯುವಾಗ ನಿಯತ್ತಿನಿಂದ ಕಲಿತು ಕಲಿಸಿದ ಶಾಲೆಗೆ, ಹೆತ್ತವರಿಗೆ ಉತ್ತಮ ಮಕ್ಕಳಾಗಿ ಹೆಸರು ತರಬೇಕು. ಆಗ ಅದೇ ನಾವು ದೇಶಕ್ಕೆ ನೀಡುವ ದೊಡ್ಡ ಕೊಡುಗೆ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ದೇಶ ಸೇವೆ ಮಾಡಿದ ನಿವೃತ್ತ ಭೂಸೇನಾಧಿಕಾರಿ ಜಿಸಿಒ ಮಹಾದೇವ ಪವಾರ ಹಾಗೂ ಹವಾಲ್ದಾರ ಅಶೋಕ ರಾಯಗೊಂಡ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಅಧ್ಯಕ್ಷತೆ ವಹಿಸಿದ್ದರು. ಅಂಕಣಕಾರ ಹಾಗೂ ವಾಗ್ಮಿ ಮಂಜುನಾಥ ಜುನಗೊಂಡ ಉಪಸ್ಥಿತರಿದ್ದರು.
ಉಪನ್ಯಾಸಕ ಶರಣಗೌಡ ಪಾಟೀಲ ಸ್ವಾಗತಿಸಿದರು. ಶ್ರದ್ಧಾ ಜಾಧವ ನಿರೂಪಿಸಿ ವಂದಿಸಿದರು.
ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.