ಬಸಪ್ಪನದೊಡ್ಡಿ ಶಾಲೆ: 78ನೇ ವರ್ಷದ ಸ್ವಾತಂತ್ರ್ಯ ದಿನ ಸಂಭ್ರಮಾಚರಣೆ
ಸಂಜೆವಾಣಿ ವಾರ್ತೆ
ಹನೂರು ಆ 16 :- ತಾಲೂಕಿನ ಬಸಪ್ಪನ ದೊಡ್ಡಿ ಸರ್ಕಾರಿ ಶಾಲೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶಾಲೆಯ ಅವರಣದಲ್ಲಿ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಿದರು.
ನಂತರ ಶಾಲೆಯ ಮುಖ್ಯ ಶಿಕ್ಷಕರಾದ ವೀರಪ್ಪ ಅವರು ಮಾತನಾಡಿ ಸ್ವಾತಂತ್ರ್ಯ ದೊರೆತು 77 ವರ್ಷಗಳ ಗತಿಸಿದವು. ಇದು 78ನೇ ವರ್ಷ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ನಾವಿದ್ದೇವೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿಯವರು ವಲ್ಲಭ್ ಭಾಯಿ ಪಟೇಲರು ಜವಾಹರಲಾಲ್ ನೆಹರುರವರು ಸುಭಾಷ್ ಚಂದ್ರ ಬೋಸರು ಲೋಕಮಾನ್ಯ ತಿಲಕರು ಚಂದ್ರಶೇಖರ ಆಜಾದ್ ಮುಂತಾದ ಮಹನೀಯರು ಹೋರಾಟ ಮಾಡಿದರು.
ಅನೇಕ ಮಹನೀಯರ ತ್ಯಾಗ ಬಲಿದಾನಗಳ ಮೂಲಕ 1947ರಲ್ಲಿ ನಮಗೆ ಸ್ವಾತಂತ್ರ್ಯ ದೊರೆಯಿತು. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ನಾಯಕರನ್ನು ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸಬೇಕು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದಂತ ಮಹಾನ್ ನಾಯಕರು. ದೇಶದ ಸಂವಿಧಾನವನ್ನು ರಚಿಸಿದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರ ತತ್ವ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಸಪ್ಪನ ದೊಡ್ಡಿ ಸರ್ಕಾರಿ ಶಾಲೆಯಲ್ಲಿ ಈ ಹಿಂದೆ 17 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಿಕ್ಷಕರಾದ ಚಿಕ್ಕವಿರಯ್ಯ ಅವರಿಗೆ ಹಳೆಯ ವಿದ್ಯಾರ್ಥಿ ಬಳಗದಿಂದ ಸನ್ಮಾನಿಸಲಾಯಿತು. ಇದೇ ವೇಳೆ ಮಕ್ಕಳಿಗೆ ಶುದ್ಧ ನೀರು ಕುಡಿಯುವ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಾಟರ್ ಫಿಲ್ಟರ್ ಗೆ ಚಾಲನೆ ನೀಡಲಾಯಿತು.
200 ಲೀಟರ್ ಸ್ಟೋರೇಜರ್ ವಾಟರ್ ಫಿಲ್ಟರ್, ಮೂರು ಗ್ರೀನ್ ಬೋರ್ಡ್ ಗಳು ದಾನಿಗಳಿಂದ ಶಾಲೆಗೆ ಕೊಡುಗೆಯಾಗಿ ಬಂದಿರುವ 6 ಕಂಪ್ಯೂಟರ್ ಸಿಸ್ಟಮ್ಗಳಿಗೆ ಅಗತ್ಯವಾದ ಯುಪಿಎಸ್ ಸಿಸ್ಟಮ್ ಹಾಗೂ ಆರು ಕಂಪ್ಯೂಟರ್ ಟೇಬಲ್ ಗಳನ್ನು ಹಳೆಯ ವಿದ್ಯಾರ್ಥಿಗಳು ಶಾಲೆಗೆ ನೀಡಿದ್ದು.ಇನ್ನು ಹೆಚ್ಚಿನ ಅಗತ್ಯ ಪರಿಕರಗಳನ್ನು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ನೀಡಲಾಗುವುದೆಂದು ಹಳೆಯ ವಿದ್ಯಾರ್ಥಿಗಳು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂ. ಅಧ್ಯಕ್ಷ ಮುತ್ತುರಾಜು, ಪಿಡಿಓ ಮಾದೇಶ್, ಎಸ್‍ಡಿಎಂಸಿ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷ ರೇಷ್ಮಾ ಭಾನು, ಗ್ರಾಮ ಪಂ. ಸದಸ್ಯರಾದ ಸಂದೇಶ್ , ಮಲ್ಲಣ್ಣ, ಚೆನ್ನೇಗೌಡರು, ಗ್ರಾಮದ ಮುಖಂಡರಾದ ಹೊನ್ನೇಗೌಡರು, ಅಕ್ಬಲ್, ಪಾಪಣ್ಣ, ಹಳೆಯ ವಿದ್ಯಾರ್ಥಿಗಳಾದ ವೆಂಕಟೇಶ್ ಪತ್ರ ಬರಹಗಾರರು, ವಾಟರ್ ಫಿಲ್ಟರ್ ನುರಿತ ಕೆಲಸಗಾರ ರಾಜೇಂದ್ರ ಹಾಗೂ ಶಿಕ್ಷಕರು ಗ್ರಾಮಸ್ಥರು ಹಾಜರಿದ್ದರು.