ಅನೇಕ ಮಹನೀಯುರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ದೊರೆತಿದೆ: ಎಸ್.ಎ. ರಾಮದಾಸ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ. 16- ಅನೇಕ ಮಹನೀಯುರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ದೊರೆತಿದೆ ಎಂದು ನಗರಸಭೆ ಪೌರಾಯುಕ್ತ ಎಸ್.ಎ. ರಾಮದಾಸ್ ತಿಳಿಸಿದರು.
ನಗರದ ನಗರಸಭೆ ಕಚೇರಿಯಲ್ಲಿ ನಡೆದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ದೊರೆತಿದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ನಗರದ ಅಭಿವೃದ್ದಿಗೆ ಶ್ರಮಿಸೋಣ. 1947ರ ಆ. 15 ರಂದು ಬ್ರಿಟಿಷರು ದೇಶವನ್ನು ಬಿಟ್ಟು ಹೋದ ದಿನವಾಗಿದೆ. ರಾಷ್ಟ್ರಪತಿ ಮಹಾತ್ಮಗಾಂಧಿ ಅವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಅವರ ತತ್ವ ಅದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರುಗಳಾದ ಬಸವಣ್ಣ, ಚಿನ್ನಮ್ಮ, ಗಾಯಿತ್ರಿ ಚಂದ್ರಶೇಖರ್, ಕಲಿಲ್ಲಾ ಹುವುಲ್ಲಾ, ಮಮತಾ ಬಾಲಸುಬ್ರಮಣ್ಯ, ರಾಘವೇಂದ್ರ, ಮಹಮದ್ ಅಮಿಕ್, ನೀಲಮ್ಮ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಟರಾಜು, ಪರಿಸರ ಇಂಜಿನಿಯರ್ ಗಿರಿಜಾ, ಆರೋಗ್ಯ ನಿರೀಕ್ಷಕ ಮಂಜು, ಮಂಜುನಾಥ್, ಮೊದಲಾದವರು ಇದ್ದರು.