ಶಿಕ್ಷಕಿ ಪ್ರತಿಭಾ ತೊರವಿ ಮಾರ್ಗದರ್ಶನದ ದೇಶಭಕ್ತಿ ನೃತ್ಯಕ್ಕೆ ಪ್ರಥಮ ಸ್ಥಾನ
ಕೊಲ್ಹಾರ:ಆ.೧೬:ತಾಲೂಕಿನ ಕೂಡಗಿ ಗ್ರಾಮದ ಕೆ ಪಿ ಎಸ್ ಶಾಲೆಯ ಆವರಣದಲ್ಲಿ ಜರುಗಿದ ೭೮ನೇ ಸ್ವಾತಂತ್ರ‍್ಯ ದಿನಾಚರಣೆ ಪ್ರಯುಕ್ತ ಪ್ರತಿವರ್ಷದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯಲ್ಲಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಶಿಕ್ಷಕಿ ಪಿ ಎಸ್ ತೊರವಿ ಮಾರ್ಗದರ್ಶನದಲ್ಲಿ ಪ್ರಥಮ ಸ್ಥಾನ ನಗದು ಬಹುಮಾನ ಪಡೆದು ಸಂಭ್ರಮಿಸಿದರು.
ಗ್ರಾಮದ ಹಿರಿಯರು ನಗದು ಬಹುಮಾನ ನೀಡಿ ಮಕ್ಕಳು ಹಾಗೂ ಮಾರ್ಗದರ್ಶಕ ಗುರುಮಾತೆಯನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಸರ್ವ ಸದಸ್ಯರು, ಪಿ ಡಿ ಒ, ಎಸ್ ಡಿ ಎಂ ಸಿ ಸದಸ್ಯರು, ಕಾಲೇಜು ಪ್ರಾಚಾರ್ಯರು,ಪ್ರಾಥಮಿಕ ಹಾಗೂ ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ಸಿಬ್ಬಂದಿಗಳು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು