ವಿವಿಧತೆಯಲ್ಲಿ ಏಕತೆ, ಭಾರತದ ವಿಶೇಷತೆ : ಇಸ್ಲಾಂಪೂರೆ
ಸಂಜೆವಾಣಿ ವಾರ್ತೆ
ಔರಾದ : ಆ.೧೬:ಜಗತ್ತಿನ ಯಾವುದೇ ದೇಶವು ವಿವಿಧತೆಯಲ್ಲಿ ಏಕತೆಯನ್ನು ಕಾಣುವಂತಿದ್ದರೆ ಅದು ದೇಶ ನಮ್ಮ ಭಾರತ ಏಕತೆಯ ಸತ್ಯವನ್ನು ಸಾಬೀತು ಪಡಿಸುವ ದೇಶವಾಗಿದೆ ಎಂದು ನಿವೃತ್ತ ಯೋಧ ರಾಚಪ್ಪ ಇಸ್ಲಾಂಪೂರೆ ಅಭಿಪ್ರಾಯ ಪಟ್ಟರು.
ಪಟ್ಟಣದ ಎಮ್. ನಾಮದೇವರಾವ ತಾರೆ ಮೆಮೋರಿಯಲ್ ಶಾಲೆಯಲ್ಲಿ ನಡೆದ ೭೮ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಜಗತ್ತಿನ ಎಲ್ಲ ದೇಶಗಳಲ್ಲಿ ಭಾರತವು ವಿಶೇಷ ಇತಿಹಾಸ ಹೊಂದಿದೆ ಧರ್ಮ, ಭಾಷೆ, ಪಾಕಪದ್ಧತಿ ಮತ್ತು ಉಡುಪುಗಳ ವಿಷಯಕ್ಕೆ ಬಂದಾಗ ನಾವು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿದ್ದೇವೆ ಆದರೆ ನಮ್ಮ ದೇಶಕ್ಕೆ ಬಂದಾಗ, ನಮ್ಮ ಹೃದಯದಲ್ಲಿ ನಾವೆಲ್ಲರೂ ಒಂದೇ ರೀತಿ ಭಾವಿಸುತ್ತೇವೆ. ಏಕತೆಯೊಂದಿಗೆ ಪ್ರಗತಿ ಪಥದಲ್ಲಿ ಸಾಗಿರುವ ಪ್ರಜಾಪ್ರಭುತ್ವ ಹೊಂದಿರುವ ಭಾರತಕ್ಕೆ ಅಂಬೇಡ್ಕರ್ ಅವರು ಬಹುದೊಡ್ಡ ಕೊಡುಗೆಯಾಗಿ ಸಂವಿಧಾನವನ್ನು ಕೊಟ್ಟಿದ್ದಾರೆ ಎಂದರು. ಮಕ್ಕಳೊಂದಿಗೆ ಸ್ವತಂತ್ರ ದಿನ ಆಚರಣೆ ಖುಷಿ ನೀಡಿದೆ ಎಂದರು.
ಪತ್ರಕರ್ತ ಅಮರಸ್ವಾಮಿ ಸ್ಥಾವರಮಠ ಅವರು ಮಾತನಾಡಿ ಭಾರತಕ್ಕೆ ಸ್ವಾತಂತ್ರ‍್ಯ ಅನೇಕ ವೀರ ಯೋಧರ ಹಾಗೂ ಸ್ವತಂತ್ರ ಹೋರಾಟಗಾರರ ತ್ಯಾಗ ಬಲಿದಾನದ ಪ್ರತೀಕ ನಮಗೆ ಸ್ವಾತಂತ್ರ‍್ಯ ಸಿಕ್ಕಿದೆ. ದೇಶಕ್ಕಾಗಿ ದುಡಿಯುತ್ತಿರುವ ಯೋಧರ ಕಾರ್ಯ ಬಹು ದೊಡ್ಡದು, ಆದರೆ ನಮ್ಮಲ್ಲಿ ಅನೇಕ ಜನರು ಭಾರತದ ಇತಿಹಾಸ ತಿಳಿಯದೆ ತನ್ನ ಮಾತೃ ದೇಶಕ್ಕೆ ದ್ರೋಹ ಬಗೆಯುವ ಪ್ರವೃತ್ತಿಯಲ್ಲಿ ತೋಡಗಿರುವುದು ವಿಷಾದನೀಯ ಸಂಗತಿ , ಆದ್ದರಿಂದ ಅಂತಹವರ ವಿರುದ್ಧ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು, ಮತ್ತು ಶಿಕ್ಷಕರು ಹಾಗೂ ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ದೇಶದ ಬಗ್ಗೆ ಅಭಿಮಾನ ಬೆಳೆಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಈ ವೇಳೆ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಿಂದ ಪರೇಡ್ ಜರುಗಿತು. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಕ್ಕಳು ಸ್ವಾತಂತ್ರ‍್ಯ ಹೋರಾಟಗಾರರ ವೇಶಭೂಷಣದಲ್ಲಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಎಮ್. ನಾಮದೇವರಾವ ತಾರೆ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷೆ ಲಕ್ಷ್ಮೀಬಾಯಿ ತಾರೆ, ಕಾರ್ಯದರ್ಶಿ ನಾಗೇಶನ ತಾರೆ, ಪ.ಪಂ ಸದಸ್ಯ ಪ್ರಶಾಂತ ಫೂಲಾರಿ, ಇಮಾನವೆಲ್, ಮುಖ್ಯಗುರು ದೀಪಕ ಕಾಂಬ್ಳೆ, ಶಿಕ್ಷಕರಾದ ಸುಜಾತಾ, ಚೇತನಾ ಗಜರೆ, ಪಲ್ಲವಿ, ಸೋನಿಕಾ, ಸಬಾ, ಐಶ್ವರ್ಯ ನೆಳಗೆ ಸೇರಿದಂತೆ ಇನ್ನಿತರರಿದ್ದರು. ಹೇಮಾವತಿ ಖರಾಬೆ ಸ್ವಾಗತಿಸಿದರು, ನೀಲಾವತಿ ರಂಜಿರೆ ವಂದಿಸಿದರು.