ಆರ್.ಟಿ.ಐ. ಪೀಠದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕಲಬುರಗಿ:ಆ.15: ಕಲಬುರಗಿ ನಗರದ ಮಹಲ್-ಎ-ಶಾಹಿ ಅತಿಥಿಗೃಹದಲ್ಲಿರುವ ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠ ಕಚೇರಿಯಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಕಲಬುರಗಿ ಪೀಠದ ಆಯುಕ್ತ ರವೀಂದ್ರ ಧಾಕಪ್ಪ ಅವರು ರಾಷ್ಟ್ರ ಧ್ವಜಾರೋಹಣ ಮಾಡಿದರು. ಇದೇ ಸಂದರ್ಭದಲ್ಲಿ ಪೀಠದ ಆವರಣದಲ್ಲಿ ಸಸಿ ನೆಡೆಯುವ ಮೂಲಕ ಪರಿಸರ ಕಾಳಜಿ ಮೆರೆಯಲಾಯಿತು.