ನಿವೃತ್ತ ನೌಕರರಿಂದ ಧರಣಿ ಸತ್ಯಾಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಅ1: ವಿಶ್ವ ನಾಗರೀಕರ ದಿನಾಚರಣೆಯ ದಿನವಾದ ಇಂದು. ಕಳೆದ ಜುಲೈ 22 ರಿಂದ 24 ರ ವರೆಗಿನ ಅವಧಿಯಲ್ಲಿ ನಿವೃತ್ತರಾದ ನೌಕರರು. 7ನೇ ವೇತನ ಆಯೋಗದ ಅನುಸಾರ ಡಿ.ಸಿ.ಆರ್.ಜಿ. ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಬೇಕೆಂದು ಆಗ್ರಹಿಸಿ ನಗರದ ಡಿಸಿ ಕಚೇರಿ ಮುಂದೆ ಕಪ್ಪು ಪಟ್ಟಿ ಧರಿಸಿಕೊಂಡು ಧರಣಿ ಸತ್ಯಾಗ್ರಹ ನಡೆಸಿದರು.
ನಿವೃತ್ತ ನೌಕರರ ವೇದಿಕೆಯಿಂದ ಇತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ನೀಡಿದ  ವೇದಿಕೆಯ ಜಿಲ್ಲಾ ಸಂಚಾಲಕ
ಎ.ಕೆ.ಚಂದ್ರಪ್ಪ, ರಾಜ್ಯ ಸಂಚಾಲಕರಾದ ಮೆಹತಾಬ್,
ಅವರುಗಳು  ನಮಗೆ 6ನೇ ವೇತನ ಆಯೋಗದ ಲೆಕ್ಕಾಚಾರದ ಅನುಸಾರ ಡಿ.ಸಿ.ಆರ್.ಜಿ. ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಆರ್ಥಿಕ ನಷ್ಟವುಂಟಾಗಿ ಅನ್ಯಾಯವಾಗುತ್ತದೆ.
ಸರ್ಕಾರವು ಕೂಡಲೆ ನಿವೃತ್ತಿ ನೌಕರರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದರು.
ಸರ್ಕಾರಿ ನೌಕರರ ಸಂಘದ  ಜಿಲ್ಲಾ ಘಟಕ ಅಧ್ಯಕ್ಷ ಎಂ.ಶಿವಾಜಿರಾವ್ , ಕಾರ್ಯದರ್ಶಿ ರಾಮಕೃಷ್ಣ,  ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಮುಖಂಡರುಗಳಾದ  ಕೆ. ಜಿಲಾನಿ, ಎಂ.ಟಿ.ಮಲ್ಲೇಶ್,  ಸಂಚಾಲಕರುಗಳಾದ ಕೆಂಚೆಯಲ್ಲಪ್ಪ, ಸಿದ್ದರೂಢಸ್ವಾಮಿ, ಭೋಗಪ್ಪ, ಭರತೇಶ್  ಹನುಮಂತಪ್ಪ .ವಿ ಮೊದಲಾದವರು ಪಾಲ್ಗೊಂಡಿದ್ದರು.