ವಿಶಾಲನಗರದಲ್ಲಿ ನಿರಂತರ ಕಳ್ಳತನಪೊಲೀಸ್ ಗಸ್ತು ಹೆಚ್ಚಿಸಲು ಮನವಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.01: ಇಲ್ಲಿನ ವಿಶಾಲ ನಗರ ಬಡಾವಣೆಯ 3 ರಿಂದ 7 ನೇ ಕ್ರಾಸ್ ನಲ್ಲಿ ಕಳೆದ ಹಲವು ದಿನಗಳಿಂದ ರಾತ್ರಿ ವೇಳೆ ಸಣ್ಣ ಪುಟ್ಟ ಕಳ್ಳತನ ನಡೆಯುತ್ತಿದ್ದು ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸುವಂತೆ ಕರ್ನಾಟಕ ರಕ್ಷಣಾ ಸೇನೆ ಎಸ್ಪಿ ಡಾ.ಶೋಭಾರಾಣಿ ಅವರಿಗೆ ಮನವಿ ಮಾಡಿದೆ.
ಸೇನೆಯ ಅಧ್ಯಕ್ಷ ವಿ.ಶ್ರೀನಿವಾಸುಲು ಮತ್ತಿತರರು ಮನವಿ ಸಲ್ಲಿಸಿ ಕೆಲ ದಿನಗಳಿಂದ ದುಷ್ಕರ್ಮಿಗಳು ಮನೆ ಮುಂದೆ ನಿಲ್ಲಿಸಿದ ವಾಹನಗಳ ಗ್ಲಾಸ್ ಒಡೆಯುವುದು, ಪ್ರೆಟ್ರೋಲ್ ಕದಿಯುವುದು ಮಾಡುತ್ತಿದ್ದಾರೆ.
ಅದಕ್ಕಾಗಿ ರಾತ್ರಿ ವೇಳೆ ಈ ಪ್ರದೇಶದಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸಿ ದುಷ್ಕರ್ಮಿಗಳ ಕೃತ್ಯ ತಡೆಯಬೇಕು ಎಂದಿದ್ದಾರೆ.

