ಉಪನ್ಯಾಸ ಕಾರ್ಯಕ್ರಮ
ಧಾರವಾಡ, ಅ1: ದಿ. ತಲ್ಲೂರರಾಯನಗೌಡ್ರು ಪಾಟೀಲ ಭವ್ಯ ಭಾರತದ ಉಜ್ವಲ್ ಕನಸುಗಾರರು ಹಾಗೂ ಮಹಾನ್‍ದೇಶ ಭಕ್ತರು. ಸಮಾಜ ಸೇವೆಯೇ ದೇವರ ಸೇವೆ ಎಂದು ಬಾಳಿದ ಸಾರ್ಥಕ ಜೀವಿಗಳು ಎಂದು ಮುರಗೋಡ ಪ.ಪೂ. ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಎನ್. ಬಿ.ಮಲಕಣ್ಣವರ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ತಲ್ಲೂರರಾಯನಗೌಡ ಪಾಟೀಲ ಸ್ಮಾರಕ ಸಂಸ್ಥೆಯದತ್ತಿಕಾರ್ಯಕ್ರಮದಲ್ಲಿತಲ್ಲೂರರಾಯನಗೌಡರು ನಡೆದು ಬಂದದಾರಿ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ದಿ.ತಲ್ಲೂರರಾಯನಗೌಡ್ರು ಪಾಟೀಲರದು ಬಹುಮುಖ ವ್ಯಕ್ತಿತ್ವ, ವಾಸ್ತವಿಕ ಬದುಕು. ಶ್ರೇಷ್ಠ ಕೃಷಿಕರಾದಅವರು ಬ್ರಿಟಿಷ ಸರಕಾರದ ಆ ಅವಧಿಯಲ್ಲಿರೈತರಿಗೆ ವೈಜ್ಞಾನಿಕ ಕೃಷಿ ಉಪಕರಣಗಳ ಬಳಕೆಯ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತಿದ್ದರು.ಸಹಕಾರತತ್ವದಡಿ ಸಹಕಾರಿ ಸಂಘ ಸ್ಥಾಪಿಸಿ ಜನಸೇವೆ ಮಾಡಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತಗುರಪ್ಪ ಬೆಲ್ಲದ ಮಾತನಾಡಿ, ಮಹಾನ್ ಪ್ರತಿಭಾ ಸಂಪನ್ನರಾದ ದಿ.ರಾಯನಗೌಡ್ರು ಪಾಟೀಲರದು ದಿವ್ಯ ವ್ಯಕ್ತಿತ್ವ. ಘನವಾದ ಬದುಕು.ಆ ಪ್ರಾತಃಸ್ಮರಣೀಯರಜೀವನ ಸಂದೇಶಗಳು ಭವಿಷ್ಯದ ಪೀಳಿಗೆಗೆ ಪ್ರೇರಕವಾಗಲೆಂದು ಹೇಳಿದರು.
ವೇದಿಕೆಯಲ್ಲಿದತ್ತಿದಾನಿ ದೇವಿಕಾರಾಣಿ ಬ.ಪಾಟೀಲ ಉಪಸ್ಥಿತರಿದ್ದರು.
ವೀರಣ್ಣಒಡ್ಡೀನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಶಂಕರ ಕುಂಬಿ ನಿರೂಪಿಸಿದರು.ಶಿವಾನಂದ ಭಾವಿಕಟ್ಟಿ ವಂದಿಸಿದರು.
ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಬಿ.ಎಲ್. ಪಾಟೀಲ, ಎಸ್.ಜಿ. ಪಾಟೀಲ, ಶಂಕರಲಿಂಗ ಶಿವಳ್ಳಿ, ಮನೋಜ ಪಾಟೀಲ, ಗುರುತಿಗಡಿ, ಗೌರಮ್ಮ ವಾಲಿ, ಶಂಕರಗೌಡ ಪಾಟೀಲ, ಎಂ.ಎಂ. ಚಿಕ್ಕಮಠ, ಬಿ.ಕೆ.ಹೊಂಗಲ್, ಡಾ. ಬಾಳಪ್ಪ ಚಿನಗುಡಿ, ಸದಾನಂದ ಶಿವಳ್ಳಿ ಸೇರಿದಂತೆ ರಾಯನಗೌಡ್ರ ಪರಿವಾರದವರು ಉಪಸ್ಥಿತರಿದ್ದರು.