ಸತ್ಯಂ ಪಿಯು ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ
ಕಲಬುರಗಿ,ಆ.15-ನಗರದ ಸತ್ಯಂ ಪಿಯು ಕಾಲೇಜಿನಲ್ಲಿ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಾಲೇಜಿನ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನಿರ್ವಹಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಂಗ್ರೆಸ್ ಧುರೀಣ ನೀಲಕಂಠ ಮೂಲಗೆ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, “ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಅನೇಕ ಹೋರಾಟಗಾರರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದ್ದಾರೆ. ವಿದ್ಯಾರ್ಥಿಗಳು ಅವರ ತ್ಯಾಗ, ಬಲಿದಾನವನ್ನು ಸ್ಮರಿಸಬೇಕು ಮತ್ತು ಗುರಿ, ಛಲದೊಂದಿಗೆ ಓದಿ ಡಾಕ್ಟರ್, ಇಂಜಿನಿಯರ್, ಸೈಂಟಿಸ್ಟ್ ಆಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಬಿ.ಎಚ್. ನಿರಗುಡಿ ಮಾತನಾಡಿ, “ದೇಶಕ್ಕಾಗಿ ಹೋರಾಟವನ್ನು ಮಾಡಿದ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರದಾರ್ ವಲ್ಲಭಭಾಯಿ ಪಟೇಲ್, ಮಹಾತ್ಮ ಗಾಂಧೀಜಿ ಅವರಂತಹ ಅನೇಕ ಹೋರಾಟಗಾರರನ್ನು ಸ್ಮರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಹೇಶ್ ಕುಮಾರ್ ಗಡಗಿ, ಮಂಜುನಾಥ್ ಕಲಾಲ್, ಅಶೋಕ್ ಎಸ್, ಡಾ.ಸುಲೋಚನಾ ಅಂಕಲಗಿ, ರೂಪಾ ಕುಲಕರ್ಣಿ, ನಿರ್ಮಲಾ ಜಾವಳಿ, ವಿಶ್ವಜ್ಯೋತಿ ಮಠ, ಸುಚೇತಾ ಸುತಾರ್, ಗೀತಾ ಮೂಲಗೆ ಹಾಗೂ ವಿದ್ಯಾರ್ಥಿಗಳು ಮಾತನಾಡಿದರು. ಗಾಯತ್ರಿ, ಸೃಷ್ಟಿ, ಮೇಘನಾ, ಭಾಗ್ಯಶ್ರೀ ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತನಾಡಿದರೆ, ಹಂಸಿಕಾ, ಗಂಗೂಬಾಯಿ ದೇಶ ಭಕ್ತಿ ಗೀತೆಗಳನ್ನು ಹಾಡಿದರು. ಅಂಬಿಕಾ ನಿರೂಪಿಸಿದರು.