ಕರ್ನಾಟಕ ಶಿಕ್ಷಕ ತಂಡದಿಂದ ರಾಜಸ್ಥಾನದಲ್ಲಿ ಅದ್ಭುತ ಜನಪದ ನೃತ್ಯ
ಬೀದರ್ :ಆ.15: ಸಂಸ್ಕøತಿ ಸಚಿವಾಲಯ, ಭಾರತ ಸರ್ಕಾರ ಇದರ ವತಿಯಿಂದ ರಾಜಸ್ಥಾನದ ಉದಯಪುರದ “ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದಲ್ಲಿ “ಸೃಜನಶೀಲ ಬೊಂಬೆಯಾಟದ ಪುನಶ್ಚೇತನ” ಎಂಬ ವಿಚಾರದ ಬಗ್ಗೆ ನಡೆದ ತರಬೇತಿಯಲ್ಲಿ ಕರ್ನಾಟಕ ಸಂಸ್ಕೃತಿಯ ಮಹಾ ಅನಾವರಣ ನಡೆದಿದೆ.
ದೇಶದ 10 ರಾಜ್ಯಗಳಿಂದ 110 ಜನ ಪ್ರಶಿಕ್ಷಣಾರ್ಥಿಗಳು ಆಗಮಿಸಿದ್ದು ನಮ್ಮ ಕರ್ನಾಟಕದ ವಿವಿಧ ಜಿಲ್ಲೆಗಳಾದ ಬೀದರ, ಉಡುಪಿ, ಮಂಡ್ಯ, ಕೊಡಗು, ಮೈಸೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಿಂದ 10 ಪ್ರಶಿಕ್ಷಣಾರ್ಥಿಗಳು ಕರ್ನಾಟಕವನ್ನು ಪ್ರತಿನಿಧಿಸಲು ತೆರಳಿದ್ದರು. ಅಲ್ಲಿ ಪ್ರತಿದಿನ ಬೆಳಿಗ್ಗೆ ಒಂದು ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದು ಕರ್ನಾಟಕದ ಸರದಿ ಬಂದಾಗ ಎಲ್ಲರೂ ಒಂದಾಗಿ ವಿಭಿನ್ನವಾಗಿ ಸಂಸ್ಕೃತಿಯ ಅನಾವರಣ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಾಡಗೀತೆ ಹಾಡುವ ಮೂಲಕ ಕರ್ನಾಟಕದ ವೈವಿಧ್ಯಮಯ ಇತಿಹಾಸದ ಮಹಾ ಅನಾವರಣ ಮಾಡಿದರು. ಶಾಲಾ ಶಿಕ್ಷಕರಿಗೆ ಕಲಿಕೆಯ ಪರಿಣಾಮಕಾರಿಯಾಗಲು ಮತ್ತು ಐತಿಹಾಸಿಕ ಸಂಸ್ಕೃತಿಯನ್ನು ಉಳಿಸುವ ಬೆಳೆಸುವುದು ಮತ್ತು ವರ್ಗ ಕೋಣೆಯಲ್ಲಿ ಜನಪದ ಕಲೆಯ ಬಳಕೆಯಿಂದ ಪರಿಣಾಮಕಾರಿ ಪಾಠ ಬೋಧನೆ ಮಾಡಲು ಸೃಜನಶೀಲ ಗೊಂಬೆ ಆಟದ ಪುನಶ್ಚೇತನ ಕಾರ್ಯಗಾರದ ಪಾತ್ರದ ಬಗ್ಗೆ ಮಾಹಿತಿ ಪಡೆದರು. ಅದರಲ್ಲಿ ವಿಶೇಷವಾಗಿ ಮೂರು ಜನ ಬೀದರ ಜಿಲ್ಲೆಯಿಂದ ಆಯ್ಕೆಗೊಂಡಿದ್ದು ವಿಶೇಷ.
ಔರಾದ ತಾಲೂಕಿನ ಸಂಪನ್ಮೂಲ ಶಿಕ್ಷಕ ಡಾ.ಶಾಲಿವಾನ ಉದಗಿರೆ ರವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯದ ಪರಂಪರೆ ಐತಿಹಾಸಿಕ ಸ್ಥಳಗಳ ಮಹತ್ವ,ಸಾಹಿತ್ಯ, ಕಲೆ, ಶಿಲ್ಪಕಲೆ, ದೇಶ ವಿದೇಶಕ್ಕೆ ರಾಜ್ಯದ ಕೊಡುಗೆ, ಜನಪದ ಕಲೆಗಳ ಪ್ರಕಾರ, ನಮ್ಮ ಆಚಾರ ವಿಚಾರ, ಉಡುಗೆ ತೊಡಗಿಗಳು, ಹಲವಾರು ಸಾಂಸ್ಕೃತಿಕ ವಿಚಾರಗಳ ಕುರಿತು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸದ ಮೂಲಕ ವಿಚಾರ ಹಂಚಿಕೊಂಡರು.
ಕರ್ನಾಟಕ ಶಿಕ್ಷಕರ ತಂಡದಿಂದ ವಿಶೇಷವಾದ ಜಾನಪದ ನೃತ್ಯವನ್ನು ಪ್ರದರ್ಶನ ಜರುಗಿತು. ಜಾನಪದ ನೃತ್ಯದಲ್ಲಿ ಕಲ್ಯಾಣ ಕರ್ನಾಟಕದ ಉಡುಗೆ ತೊಡೆಗೆ ಗಮನ ಸೆಳೆದದ್ದು ವಿಶೇಷವಾಗಿತ್ತು. ವಿವಿಧ ರಾಜ್ಯಗಳಿಂದ ಆಗಮಿಸಿದ ಶಿಕ್ಷಕರು ರಾಜಸ್ಥಾನದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ, ಹರ ಘರ ತಿರಂಗಾ ರ್ಯಾಲಿ ನೆರವೇರಿಸಿದರು.
ಕರ್ನಾಟಕದಿಂದ ಡಾ ಶಾಲಿವಾನ ಉದಗಿರೆ ಔರಾದ, ಶ್ರೀಧರ ಚೌವ್ಹಾಣ ಹುಮ್ನಾಬಾದ, ರಂಜಿತ ಠಾಕೂರ ಭಾಲ್ಕಿ, ಕುಸುಮಾ ಲಕ್ಷ್ಮೀನಾರಾಯಣ, ಗೀತಾ, ಅನಿತಾ ಟಿ ಪಿ , ಉಮೇಶ ಟಿ.ಪಿ, ಶೀಲಾವತಿ, ಸುಕನ್ಯಾದೇವಿ ಸೇರಿದಂತೆ ವಿವಿಧ ಜಿಲ್ಲೆಯ ಶಿಕ್ಷಕ ಶಿಕ್ಷಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ಸಂಸ್ಕೃತಿ ಸಚಿವಾಲಯ, ಭಾರತ ಸರ್ಕಾರ ಇದರ ವತಿಯಿಂದ ರಾಜಸ್ಥಾನದ ಉದಯಪುರದ “ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರದಲ್ಲಿ “ಸೃಜನಶೀಲ ಬೊಂಬೆಯಾಟದ ಪುನಶ್ಚೇತನ”ಎಂಬ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ನಮ್ಮ ಸುದೈವ ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ ತಿಳಿಯಲು ಅವಕಾಶ ಸಿಕ್ಕಿದೆ ಜೊತೆಗೆ ನಮ್ಮ ನಾಡಿನ ಸಂಸ್ಕೃತಿ ಬೇರೆ ರಾಜ್ಯದವರಿಗೆ ತಿಳಿಸಲು ಅವಕಾಶ ಸಿಕ್ಕಿದ್ದು ಖುಷಿ ತಂದಿದೆ, ಇದಕ್ಕೆ ಸಹಕಾರ ನೀಡಿದ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಧನ್ಯವಾದಗಳು.
ಶಾಲಿವಾನ ಉದಗಿರೆ
ಸಂಪನ್ಮೂಲ ಶಿಕ್ಷಕ ಔರಾದ (ಬಾ)