ಕಲಬುರಗಿ ಜಿಲ್ಲೆ ಅಭಿವೃದ್ಧಿ ನೀಲಿನಕ್ಷೆ ಗೆ ಎಸ್‍ಟಿಎಫ್
ಕಲಬುರಗಿ,ಆ.15: ಮುಂದಿನ 20 ವರ್ಷಗಳಲ್ಲಿ ಕಲಬುರಗಿಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತುಅಧ್ಯಯನಕೈಗೊಂಡು ನೀಲಿನಕ್ಷೆ ಸಿದ್ಧಪಡಿಸಲುತಜ್ಞರನ್ನು ಒಳಗೊಂಡ ವಿಶೇಷ ಟಾಸ್ಕ್‍ಫೋರ್ಸ್(ಎಸ್‍ಟಿಎಫ್) ರಚಿಸಲು ನಿರ್ಧರಿಸಲಾಗಿದೆಎಂದುರಾಜ್ಯದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಐಟಿ-ಬಿಟಿ ಹಾಗೂ ಕಲಬುರಗಿಜಿಲ್ಲಾಉಸ್ತುವಾರಿ ಸಚಿವ ಪ್ರಿಯಾಂಕ್‍ಖರ್ಗೆಹೇಳಿದರು.
ಗುರುವಾರಇಲ್ಲಿನಪೊಲೀಸ್ ಪರೇಡ್ ಮೈದಾನದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಜಿಲ್ಲೆಯಾದ್ಯಂತಈವರೆಗೆಕೈಗೊಂಡಿರುವ ಬಹುತೇಕಅಭಿವೃದ್ಧಿ ಕಾರ್ಯಗಳು ಭೌತಿಕ ಸ್ವರೂಪದಲ್ಲಿಎಲ್ಲೆಡೆಗೋಚರಿಸುತ್ತಿವೆ. ಈ ಪೈಕಿ ಬಹುಮುಖ್ಯವಾಗಿಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯ, ಜಯದೇವ ಹೃದ್ರೋಗ ವಿಜ್ಞಾನಗಳ ಸಂಶೋಧನಾ ಸಂಸ್ಥೆ, ಇಎಸ್‍ಐಆಸ್ಪತ್ರೆ ಮತ್ತು ಮೆಡಿಕಲ್‍ಕಾಲೇಜು, ಜಿಮ್ಸ್ ಮೆಡಿಕಲ್‍ಕಾಲೇಜು, ಟ್ರಾಮಾ ಸೆಂಟರ್, ಸುಟ್ಟ ಗಾಯಗಳ ಚಿಕಿತ್ಸಾ ವಿಭಾಗ (ಬನ್ರ್ಸ್ ವಾರ್ಡ್), ಕ್ಯಾನ್ಸರ್‍ಆಸ್ಪತ್ರೆಗೆ ಈಗಾಗಲೆ ಜಿಲ್ಲೆಯಲ್ಲಿಕಾರ್ಯನಿರ್ವಹಿಸುತ್ತಿವೆ. ಇದರಜೊತೆಗೆ, ಸೂಪರ್ ಸ್ಪೆಷಾಲಿಟಿಆಸ್ಪತ್ರೆ, ತಾಯಿ ಮತ್ತು ಮಕ್ಕಳ ಪ್ರತ್ಯೇಕ ಆಸ್ಪತ್ರೆಗಳು ನಿರ್ಮಾಣಗೊಳ್ಳಲಿವೆ ಎಂದರು.
ಈ ಎಲ್ಲಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಮುಂದಿನ 20 ವರ್ಷಗಳಲ್ಲಿ ಏನೆಲ್ಲಾಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿದೆಎಂಬುದರಕುರಿತು ವರದಿ ನೀಡಲುತಜ್ಞರನ್ನು ಒಳಗೊಂಡ ಟಾಸ್ಕ್‍ಫೋರ್ಸ್‍ಅತಿ ಶೀಘ್ರದಲ್ಲಿ ರಚಿಸಲಾಗುತ್ತಿದೆಎಂದರು.
ಸ್ವಾತಂತ್ರ್ಯ ಪಡೆದಆರಂಭಿಕ ದಿನಗಳಲ್ಲಿ ಭಾರತಒಂದುಗುಂಡು ಸೂಜಿಉತ್ಪಾದಿಸುವ ಸಾಮಥ್ರ್ಯ ಪಡೆದಿರಲಿಲ್ಲ. ಈಗ ಸೆಮಿಕಂಡಕ್ಟರ್‍ಚಿಪ್‍ತಯಾರಿಸುವ ಹಂತಕ್ಕೆ ಬೆಳೆದು ನಿಂತಿದೆ.ಮಂಗಳಗ್ರಹಕ್ಕೆ ಮಾನವನನ್ನು ಕಳಿಸಿದ್ದೇವೆ. ಮಾಹಿತಿ-ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಇಡೀಜಗತ್ತಿಗೆ ಸುಮಾರು ರೂ.4 ಲಕ್ಷಕೋಟಿ ಮೌಲ್ಯದ ಉತ್ಪಾದನೆಗಳನ್ನು ರಫ್ತು ಮಾಡುವ ಸಾಮಥ್ರ್ಯ ಭಾರತಕ್ಕೆ ಬಂದಿದ್ದು, ಈ ಪೈಕಿ ಕರ್ನಾಟಕಜಗತ್ತಿನ ನಾಲ್ಕನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆಎಂದು ನುಡಿದರು.
ಸ್ವಾತಂತ್ರ್ಯ ಗಳಿಸಿದ ಖುಷಿ ಇತ್ತಾದರೂ ಆಗ ಅಪೌಷ್ಠಿಕತೆ ಹೆಚ್ಚು ಕಾಡುತ್ತಿತ್ತು.ಸಾಕ್ಷರತೆ ಪ್ರಮಾಣವಂತುಕೇವಲ ಶೇ.12ರಷ್ಟಿತ್ತು.ನಮ್ಮ ಹಿರಿಯರದೂರದೃಷ್ಟಿ ಮತ್ತುನಮ್ಮ ಕೃಷಿ ವಿಜ್ಞಾನಿಗಳ ಶ್ರಮದಿಂದಾಗಿ ಹಸಿರುಕ್ರಾಂತಿ ಮತ್ತುಕ್ಷೀರಕ್ರಾಂತಿಸಾಧ್ಯವಾಯಿತು.ಈಗ ಸಾಕ್ಷರತೆ ಪ್ರಮಾಣ ಶೇ.70ರಷ್ಟಿದೆ.ಇದೆಲ್ಲದರಜೊತೆಗೆರಾಷ್ಟ್ರದಅಭಿವೃದ್ಧಿಯ ಪ್ರತೀಕಗಳಾಗಿ ಗುರುತಿಸಿಕೊಂಡಿರುವ ಐಐಎಸ್ಸಿ, ಐಐಐಟಿ, ಏಮ್ಸ್, ಎಲ್.ಐ.ಸಿ., ಬಿಎಚ್‍ಇಎಲ್, ಇಸ್ರೋ ಸೇರಿದಂತೆ ಹಲವು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಗಳು ಸ್ಥಾಪನೆಗೊಳ್ಳುವ ಮೂಲಕ ಭಾರತಒಂದು ಸಮರ್ಥ ಹಾಗೂ ಸ್ವಾವಲಂಬಿ ದೇಶವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆಎಂದು ಸಚಿವ ಪ್ರಿಯಾಂಕ್‍ಖರ್ಗೆ ಹಿಂದಿನ ಘಟನಾವಳಿಗಳನ್ನು ಮೆಲುಕು ಹಾಕಿದರು.
ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಗೌರವ ಪರೇಡ್‍ಧ್ವಜ ವಂದನೆ ಸ್ವೀಕರಿಸಿದ ಸಚಿವ ಪ್ರಿಯಾಂಕ್‍ಖರ್ಗೆ ಹಲವು ಕ್ಷೇತ್ರಗಳ ಸಾಧಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಹಿರಿಯ ಸ್ವಾತಂತ್ರ್ಯಯೋಧರನ್ನು ಸನ್ಮಾನಿಸಿದರು.
ಸಂಸದ ರಾಧಾಕೃಷ್ಣದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್‍ಸದಸ್ಯರಾದ ತಿಪ್ಪಣ್ಣಪ್ಪಕಮಕನೂರ, ಜಗದೇವಗುತ್ತೇದಾರ, ಕರ್ನಾಟಕಕುರಿ ಮತ್ತುಉಣ್ಣೆಅಭಿವೃದ್ಧಿ ನಿಗಮದಅಧ್ಯಕ್ಷ ದೇವೆಂದ್ರಪ್ಪ ಮರತೂರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್‍ಆಲಂಖಾನ್, ಕೆ.ಕೆ.ಆರ್.ಡಿ.ಬಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿಫೌಜಿಯಾ ತರನ್ನುಮ್, ಐ.ಜಿ.ಪಿ ಅಜಯ್ ಹಿಲೋರಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಶಾಲಾ ಶಿಕ್ಷಣ ಇಲಾಖೆ ಅಪರಆಯುಕ್ತ ಆಕಾಶ ಶಂಕರ್, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್‍ದೇವಿದಾಸ್,ಡಿ.ಸಿ.ಎಫ್ ಸುಮಿತ್ ಪಾಟೀಲ್, ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕಎಂ.ರಾಚಪ್ಪ, ಅಪರಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಇತರರಿದ್ದರು.