ಸಂಭ್ರಮದ ಸ್ವಾತಂತ್ರ್ಯೋತ್ಸವ
ನವಲಗುಂದ,ಆ15: ನಗರದ ಸರ್ಕಾರಿ ಮಾದರಿ ಕೇಂದ್ರ ಶಾಲೆ ನಂ-3ರಲ್ಲಿ 78ನೇ ವರ್ಷದ ಸ್ವಾತಂತ್ರೋತ್ಸವ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮುತ್ತಪ್ಪ ಬಿಸನಾಳ ನೆರವೇರಿಸಿದರು.
ಇದೆ ವೇಳೆ ಸಿ.ಎ ಆನಂದ ಶಾಲೆಯ ಇಪ್ಪತ್ತು ಮಕ್ಕಳಿಗೆ ಕ್ರೀಡಾ ಸಮವಸ್ತ್ರ ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶಾಲೆ ಮುಖ್ಯಶಿಕ್ಷಕ ಎಸ್.ಎಸ್.ಜೋಶಿ,ಮಬೂಸಾಬ ಯರಗುಪ್ಪಿ, ಕಾಶೀಮಸಾಬ ಮಚಲಿಬಂದರ್, ಹಜರೇಸಾಬ ಗೋವನಕೊಪ್ಪ, ಮಹಮ್ಮದತಾಜುದ್ದೀನ ಹುನಗುಂದ, ಬಾಬುಶ್ಯಾ ಮಕಾಂದಾರ, ಉಮೇಶಗೌಡ ಗದಗಿನ,ಅಡಿವೆಪ್ಪ ಶಿರಸಂಗಿ, ಸಹ ಶಿಕ್ಷಕರಾದ ಆರ್.ಬಿ.ಹಳ್ಳಿಕೇರಿ, ಟಿ.ಎಪ್.ಮರೆಪ್ಪಗೌಡ್ರ, ಎಂ.ಸಿ.ಚನ್ನಪಗೌಡ್ರ, ಶಿವಯೋಗಿ ಜಂಗಣ್ಣವರ, ಎ.ಎಸ್ ಹುಂಡೆಕಾರ, ಕೆ.ಕೆ ಮಂಕಣಿ, ಕೆ.ಎಫ್. ಬಂಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.