ಭಾರತಾಂಬೆ ವಿಕಾಸದ ದಾರಿಯಲ್ಲಿ
ಕಲಬುರಗಿ : ಆ.15:ಭಾರತವು ವಿಕಾಸದ ದಾರಿಯಲ್ಲಿ ದಾಪುಗಾಲಿಡುತ್ತಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಡಾ.ದಾಕ್ಷಾಯಣಿ ಎಸ್.ಅಪ್ಪ ಹೇಳಿದರು.
ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ 78 ನೇ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 2047 ರ ವಿಕಸಿತ ಭಾರತವನ್ನು ಕಟ್ಟುವುದು ನಮ್ಮೇಲ್ಲರ ಜವಾಬ್ದಾರಿಯಾಗಿದೆ. ಪೂಜ್ಯ ಡೊಡ್ಡಪ್ಪ ಅಪ್ಪ ಅವರು 1934 ರಲ್ಲಿ ಮಹಾದೇವಿ ಕನ್ಯಾಪ್ರೌಢ ಶಾಲೆ ಆರಂಭಿಸಿ 2034 ರಲ್ಲಿ ಶತಮಾನೋತ್ಸವ ಆಚರಿಸುವ ಸಂದರ್ಭ. ನಾವೆಲ್ಲರೂ ಇನ್ನೂ ಹೆಚ್ಚು ಹೆಚ್ಚು ಕಾರ್ಯಪ್ರವೃತರಾಗಬೇಕು ಎಂದು ಸಲಹೆ ನೀಡಿದರು. ಅನೇಕ ವೀರರ ತ್ಯಾಗ ಬಲಿದಾನಗಳ ಮೂಲಕ ದೇಶ ಸ್ವಾತಂತ್ರ್ಯ ಪಡೆಯಿತು. ದೇಶದ ಪ್ರಗತಿಗೆ ನಮ್ಮೇಲ್ಲರ ಕೊಡುಗೆ ಬಹಳ ಮುಖ್ಯವಾಗಿದೆ ಎಂದು ಹೇಳಿದರು. 9ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಮಾತನಾಡಿ, ಅಸಂಖ್ಯಾತ ದೇಶ ಪ್ರೇಮಿಗಳ ಫಲವಾಗಿ ಇಂದು ನಾವು ಸ್ವತಂತ್ರವಾಗಿದ್ದೇವೆ ಎಂದರು. ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ, ಸಂಸಸ್ಥೆಯ ತಂಗಿಯರಾದ ಕು.ಶಿವಾನಿ ಎಸ್.ಅಪ್ಪ, ಕು.ಭವಾನಿ ಎಸ್.ಅಪ್ಪ, ಕು.ಮಹೇಶ್ವರಿ ಎಸ್.ಅಪ್ಪ , ಡಾ.ಅಲ್ಲಪ್ರಭುದೇಶಮುಖ, ಕುಮಾರ ದೇಶಮುಖ ವೇದಿಕೆ ಮೇಲಿದ್ದರು. ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ ಕಾಲೇಜುಗಳ ನಿರ್ದೇಶಕ ಡಾನೀಲಾಂಬಿಕಾ ಶೇರಿಕಾರ, ಪ್ರಾಚಾರ್ಯರಾದ ಡಾ.ಎಂ.ಆರ್.ಹುಗ್ಗಿ, ಡಾ.ಪ್ಟಮಣಿ ದೇವಿದಾಸ, ಶ್ರೀಮತಿ ಕಲ್ಪನಾ ಭೀಮಳ್ಳಿ, ಬಾಬುರಾವ ಚವ್ಹಾಣ, ಕಂಡೇರಾವ, ಶ್ರೀಮತಿ ಅನಿತಾ ಕನಶೆಟ್ಟಿ, ಜಗದೇಶ ಬಿಜಾಪೂರೆ, ವಿನೋದ ಪತಂಗೆ ಎಲ್ಲಾ ಶಿಕ್ಷಕ, ಶಿಕ್ಷಕೇರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.