ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯೋತ್ಸವ
ಕಲಬುರಗಿ:ಆ.15:ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯುಕಾಲೇಜು, ಸರ್ಕಾರಿ ಪ್ರೌಢಶಾಲೆ ಮತ್ತು ಮೌಲಾನಾಆಜಾದ್ ಮಾದರಿ ಶಾಲೆಗಳಸಂಯುಕ್ತಆಶ್ರಯದಲ್ಲಿದೇಶದ 78ನೇ ಸ್ವಾತಂತ್ಯ ದಿನಾಚರಣೆಯನ್ನುಅತ್ಯಂತ ಭಕ್ತಿ, ಸಡಗರ, ಸಂಭ್ರಮದಿಂದ ಗುರುವಾರ ಆಚರಿಸಲಾಯಿತು.
ಕಾಲೇಜಿನ ಪ್ರಾಚಾರ್ಯರವೀಂದ್ರಕುಮಾರಸಿ.ಬಟಗೇರಿಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಭಾಷಣ, ಗಾಯನಜರುಗಿತು. ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಧರಿಸಿ ಸಂಭ್ರಮಿಸಿದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶಕುಮಾರ ಚಿಂಚೋಳಿ, ಮೌಲಾನಾ ಶಾಲೆಯ ಪ್ರಾಂಶುಪಾಲೆ ಲಕ್ಷ್ಮೀಬಿ.ನಾಯಕ, ಕಾಲೇಜಿನಎನ್.ಎಸ್.ಎಸ್‍ಅಧಿಕಾರಿಎಚ್.ಬಿ.ಪಾಟೀಲ, ಉಪನ್ಯಾಸಕರಾದಆಸ್ಮಾಜಬೀನ್, ಮಲ್ಲಿಕಾರ್ಜುನದೊಡ್ಡಮನಿ, ನಯಿಮಾ ನಾಹಿದ್, ಶರಣಮ್ಮ ಭಾವಿಕಟ್ಟಿ, ಶಂಕ್ರೆಪ್ಪ ಹೊಸದೊಡ್ಡಿ, ಮಲ್ಲಪ್ಪರಂಜಣಗಿ, ರೇಣುಕಾಚಿಕ್ಕಮೇಟಿ, ದುಂಡಪ್ಪ ಯರಗೋಳ, ಗ್ರಂಥಪಾಲಕ ಲಿಂಗರಾಜ ಹಿರೇಗೌಡದ್, ಸುರಪೂರ ಬಾಲಕರ ಸರ್ಕಾರಿ ಪಿಯುಕಾಲೇಜಿನಗ್ರಂಥಪಾಲಕ ಪ್ರಕಾಶ ಪಾಟೀಲ ಹಾಗೂ ಕಾಲೇಜು, ಪ್ರೌಢಶಾಲೆ, ಮೌಲಾನಾ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.