ದೇಶಾಭಿಮಾನ ಮೂಡಿಸಬೇಕಿದೆ
ಧಾರವಾಡ,ಆ15: ದೇಶ ನಮಗೇನು ಮಾಡಿದೆ? ಎನ್ನುವ ಬದಲು ದೇಶಕ್ಕಾಗಿ ನಾವು ಏನು ಮಾಡಿದ್ದೇವೆ? ಎಂಬ ಬಗ್ಗೆ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯುವಕರಿಗೆ ದೇಶದ ಕುರಿತು ಅಭಿಮಾನ ಮೂಡಿಸಬೇಕಾಗಿದೆ. ಯುವಕರು ಒಗ್ಗಟ್ಟಾಗಿ ದೇಶದ ಉನ್ನತಿಯಲ್ಲಿ ತೊಡಗಿದರೆ ದೇಶದ ಅಭಿವೃದ್ಧಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜವಾಬ್ದಾರಿ ಹೊಂದಿರುವ ನಾಗರಿಕರಾದ ನಾವು ದೇಶಕ್ಕಾಗಿ ನಾಡು, ನುಡಿಗಾಗಿ ಎಲ್ಲರು ಸೇರಿ ಜಾತಿಯತೆ ಮಾಡದೆ, ನಾವೆಲ್ಲರೂ ಕೆಲಸ ಮಾಡೋಣ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ 78ನೇ ಸ್ವಾತಂತ್ರ್ಯೋತ್ಸವ ನಿಮಿತ್ಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಆರಂಭದಲ್ಲಿ ಸಂಘದ ಸಂಸ್ಥಾಪಕರಾದ ರಾ. ಹ. ದೇಶಪಾಂಡೆ ಅವರ ಪುತ್ಥಳಿಗೆ ಶಂಕರ ಹಲಗತ್ತಿ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಪುತ್ಥಳಿಗೆ ಕೋಶಾಧ್ಯಕ್ಷ ಸತೀಶ ತುರಮರಿ ಮಾಲಾರ್ಪಣೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಂಕರ ಕುಂಬಿ, ಗುರು ಹಿರೇಮಠ, ಡಾ. ಶ್ರೀಶೈಲ ಹುದ್ದಾರ, ಶಿವಾನಂದ ಭಾವಿಕಟ್ಟಿ, ಸುಜಾತ ಹಡಗಲಿ, ಬಿ.ಕೆ. ಹೊಂಗಲ, ನಾಗಭೂಷಣ ಹಿರೇಮಠ, ಆಶಾ ಸಯ್ಯದ ಹಾಗೂ ಸಂಘದ ಸಕಲ ಸಿಬ್ಬಂದಿ ವರ್ಗ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.