ಸ್ವಾತಂತ್ರ್ಯ ಹೋರಾಟದಲ್ಲಿ ವಿಜಯಪುರ ಜಿಲ್ಲೆಯ ಕೊಡುಗೆ ಅನನ್ಯ: ಸಚಿವ ಎಂ.ಬಿ. ಪಾಟೀಲ
ವಿಜಯಪುರ, ಆ.15:ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಭಾರತ ದೇಶ ಬಂಧಮುಕ್ತಗೊಂಡು ಇಂದಿಗೆ 77 ವಸಂತಗಳು ಪೂರ್ಣಗೊಂಡವು. ಅಂತೆಯೇ ಇಂದು ಇಡೀ ರಾಷ್ಟ್ರವು 78ನೇ ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮ ಸಡಗರಗಳಿಂದ ತುಂಬಿ ತುಳುಕುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ನಗರದ ಡಾ. ಬಿ.ಆರ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಶುಭ ಸಂದರ್ಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಲೆ, ಶಿಲ್ಪಕಲೆ, ಸಾಹಿತ್ಯ, ಸಂಸ್ಕøತಿ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾದ ವಿಜಯಪುರ ಜಿಲ್ಲೆಯಲ್ಲಿ ಜನಿಸಿದ ವಿಶ್ವಗುರು ಬಸವಣ್ಣನವರು ನಮ್ಮ ರಾಜ್ಯದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಬಸವಾದಿ ಪ್ರಮಥರು, ಶರಣರು, ಸಂತರು, ಸೂಫಿಗಳು, ದಾರ್ಶನಿಕರು ಮತ್ತು ಶೂರ ಸೇನಾನಿಗಳು ಹಾಗೂ ಅಪ್ರತಿಮ ರಾಷ್ಟ್ರಭಕ್ತರು ಎಂದೆಂದಿಗೂ ಪ್ರಾತಃಸ್ಮರಣೀಯರಾಗಿದ್ದಾರೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ವಿಜಯಪುರ ಜಿಲ್ಲೆಯ ಕೊಡುಗೆಯೂ ಕೂಡ ಅನನ್ಯವಾಗಿದೆ. ಪ್ರಾತಃಸ್ಮರಣೀಯರಾದ ಚನ್ನಬಸಪ್ಪ ಅಂಬಲಿ, ಕಾಕಾ ಕಾರ್ಖಾನಿಸ್, ತಾಮಜಿ ಕುಶಾಜಿ ಮಿರಜಕರ್, ಇಂಚಗೇರಿಯ ಸಾ.ಸಾ ಮಾಧವನಂದ ಪ್ರಭುಗಳು, ಸುರಪುರ ಮಲ್ಲಪ್ಪ, ಜೀವರಾಜ ದೋಶಿ, ಮೊಹರೆ ಹನುಂತರಾಯರು, ದೇವರ ನಾವದಗಿಯಲ್ಲಿ ನೆಲೆಸಿದ್ದ ವಾಸುದೇವ ಬಲವಂತ ಫಡ್ಕೆ, ಮಹಾನ್ ಸೇನಾನಿ ರಮಾನಂದ ತೀರ್ಥರು, ರಾಚಪ್ಪ ಗುರುಲಿಂಗಪ್ಪ ಹೊಳಗಿ, ನಾರಾಯಣ ರಾಘವೇಂದ್ರ ದೇಸಾಯಿ, ರತನಚಂದ ಪಾಯಪ್ಪ ಜಗಶೆಟ್ಟಿ, ಶಂಕರಗೌಡ ಪಾಟೀಲ್, ಭಗವಾನ ಸಿಂಗ್ ಅಂಗಡಿ, ಶಿವಾನಂದ ಶಿವಯೋಗಿಗಳು, ತಿಪ್ಪಣ್ಣ ಶಂಕ್ರಪ್ಪ ಗುದ್ದಿ, ಬಾಳಪ್ಪ ನರಸಪ್ಪ ಬೋಸಗಿ, ಮಲ್ಲಪ್ಪ ಬಸಪ್ಪ ಕುಂಬಾರ, ಈರಪ್ಪ ಕಾಳಪ್ಪ ಬಡಿಗೇರ, ಹಲಸಂಗಿಯ ಮಧುರಚೆನ್ನರು, ಪಿ. ಧೂಲಾಸಾಹೇಬ್, ಲಾವಣಿರತ್ನ ಖಾಜಾಬಾಯಿ, ರೇವಪ್ಪ ಕಾಪಸೆ, ಗಿರಿಮಲ್ಲಪ್ಪ ಶಿವಪ್ಪ ವಾಲಿ, ಬಸಪ್ಪ ಬಳಗಲಿ, ಶಂಕ್ರಯ್ಯ ಮಲ್ಲಯ್ಯ ಪೂಜಾರಿ, ಶೀಲವಂತ ಮಲಕಾಜಪ್ಪ, ಹೊನ್ನಳ್ಳಿ ಸಿದ್ರಾಮಯ್ಯ, ನಾಗೇಂದ್ರಪ್ಪ ಕಪಟಕರ, ರೇವಣಸಿದ್ದಯ್ಯ ಲದ್ದಿಮಠ, ಬಸಪ್ಪಣ್ಣ ಶಿರೂರು, ಸುಗಂಧಿ ಮುರಿಗೆಪ್ಪ, ಬಾಬುರಾವ್ ಹುಜರೆ, ರಾ???ಬಹಾದ್ದೂರ ಡಾ. ಫ.ಗು. ಹಳಕಟ್ಟಿ, ಶಿಕ್ಷಣ ದಾಸೋಹಿ ಬಂಥನಾಳ ಶಿವಯೋಗಿಗಳು, ಬಸಲಿಂಗಪ್ಪ ದೇಸಾಯಿ, ವೆಂಕಪ್ಪ ಕೂಸಪ್ಪ ದೇಸಾಯಿ ಹಾಗೂ ಅಗರಖೇಡದ ಜಹಾಗೀರದಾರ ಮತ್ತಿತರರು ಈ ನಾಡಿನ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟವು ಇತಿಹಾಸದ ಪುಟಗಳಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದು, ಅವರನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಒಡೆದು ಆಳುವ ನೀತಿಯನ್ನು ಅನುಸರಿಸಿ ಭಾರತದಿಂದ ಸಾರ್ವಭೌಮತೆಯ ಮೇಲೆ ನಿರಂತರವಾಗಿ ದೌರ್ಜನ್ಯವೆಸಗಿದ ಬ್ರಿಟಿಷರ ಕುಟೀಲ ನೀತಿಯನ್ನು ವಿರೋಧಿಸಿ ಸ್ವತಂತ್ರ ಭಾರತದ ಕನಸಿಗೆ ನೀರೆರೆದು ಪೆÇೀಷಿಸಿ, ಬ್ರಿಟಿಷರು ನೀಡಿದ ಕಠಿಣಾತಿ-ಕಠಿಣ ಶಿಕ್ಷೆ, ಹಿಂಸೆ ಮತ್ತು ನೋವುಗಳನ್ನು ಸಹಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವಿರಾರು ದೇಶಭಕ್ತರನ್ನು ಸದಾ ಸ್ಮರಿಸಬೇಕು ಎಂದರು.
ಸಾಮಾಜಿಕ ನ್ಯಾಯ, ಶೈಕ್ಷಣಿಕ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ ಒಳಗೊಂಡಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧವಾಗಿರುವ ನಮ್ಮ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜನಪರ ಕಾಳಜಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ದೇಶದಾದ್ಯಂತ ಸಂಚಲನ ಉಂಟು ಮಾಡಿರುವ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳ ಬದುಕಿನಲ್ಲಿ ಬೆಳಕು ಮತ್ತು ಭರವಸೆ ತುಂಬುವಲ್ಲಿ ಸಫಲವಾಗಿವೆ ಎಂದು ತಿಳಿಸಿದರು.
ಮಳೆಯ ಅನಾಹುತದಿಂದಾಗಿ 95 ಜಾನುವಾರುಗಳ ಜೀವಹಾನಿಯಾಗಿದ್ದು, ಈ ಬಾಬತ್ತಿನಲ್ಲಿ 15 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ವಿತರಿಸಲಾಗಿದೆ.
ಅದರಂತೆಯೇ 129.20 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿದ್ದ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿದ್ದು ಇದಕ್ಕಾಗಿ 323 ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುವುದು.ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಸಿ.ಎಸ್.ಆರ್. ಅನುದಾನದಲ್ಲ್ಲಿ ವಿಜಯಪುರ ನಗರದಲ್ಲಿರುವ ತಾ???ಬಾವಡಿ, ಗೋಲಗುಮ್ಮಟ, ಬಬಲೇಶ್ವರ ತಾಲೂಕಿನಲ್ಲಿರುವ ಮಮದಾಪುರ ಕೆರೆ ಮತ್ತು ಅದರ ಸುತ್ತಲಿನ ಅರಣ್ಯ ಪ್ರದೇಶ, ಕುಮಟಗಿಯಲ್ಲಿರುವ ಬೇಸಿಗೆ ಅರಮನೆ, ಕಪ್ಪು ತಾ???ಮಹಲ್ ಎಂದು ಪ್ರಸಿದ್ಧಿಯಾಗಿರುವ ಇಬ್ರಾಹಿಂ ರೋಜಾ ಹಾಗೂ ಇನ್ನಿತರ ಸ್ಮಾರಕಗಳನ್ನು ಮತ್ತು ಅವುಗಳ ಆವರಣದಲ್ಲಿರುವ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸುವ ಮತ್ತು ಸೌಂದರ್ಯೀಕರಣಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ವಿಜಯಪುರ ನಗರದಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ಅನುಮೋದನೆಯಾಗಿದ್ದು, ಸರ್ಕಾರದಿಂದ 49 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆಯಾಗಿದೆ. ಅಂದಾಜು ಪತ್ರಿಕೆ ಅನುಮೋದನೆ ಪಡೆದುಕೊಂಡು ಅತೀ ಶೀಘ್ರದಲ್ಲಿಯೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಕೆ.ಐ.ಎ.ಡಿ.ಬಿ ಅಲಿಯಾಬಾದ ಹಂತ-3 ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆಗಾಗಿ 1870 ಎಕರೆ ಜಮೀನು ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ.
ಕೈಗಾರಿಕೆ ಅಭಿವೃದ್ಧಿಗಾಗಿ ಒಟ್ಟು 3239 ಎಕರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಕ್ರಮವಹಿಸಲಾಗಿದ್ದು, ಈಗಾಗಲೆ 245 ಕೋಟಿ ರೂಪಾಯಿಗಳ ಬಂಡವಾಳ ಹೂಡಿ ಕೊಲ್ಹಾರ ತಾಲೂಕಿನಲ್ಲಿ 614 ಎಕರೆ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಹೊಸ ಕೈಗಾರಿಕೆಗಳ ಸ್ಥಾಪನೆಗಾಗಿ 411 ನಿವೇಶನಗಳು ಲಭ್ಯವಿರುತ್ತವೆ. ಅದರಂತೆಯೇ ಇಂಡಿ ತಾಲೂಕಿನ ಬೂದಿಹಾಳ ಹಾಗೂ ಮುದ್ದೇಬಿಹಾಳ ತಾಲೂಕಿನಲ್ಲಿ ಕ್ರಮವಾಗಿ 19 ಹಾಗೂ 06 ಎಕರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಹಂತದಲ್ಲಿರುತ್ತವೆ ಎಂದರು.
ಗಾಳಿಯಿಂದ ವಿದ್ಯುತ್ ತಯಾರಿಸಲು ವಿಜಯಪುರ ಜಿಲ್ಲೆಯು ದೇಶದಲ್ಲೇ ಅತ್ಯಂತ ಪ್ರಶಸ್ತವಾದ ತಾಣವಾಗಿದೆ. ಇದನ್ನು ಮನಗಂಡಿರುವ ಸುಜ್ಲಾನ್ ಕಂಪನಿಯು ಜಿಲ್ಲೆಯಲ್ಲಿ 5,000 ಮೆಗಾವ್ಯಾಟ್ ಸಾಮಥ್ರ್ಯದ ಪವನ ವಿದ್ಯುತ್ ಘಟಕ ಸ್ಥಾಪಿಸಲು ಮುಂದಾಗಿದೆ. ಈಗಾಗಲೇ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಇದಕ್ಕಾಗಿ 100 ಎಕರೆ ಭೂಮಿಯನ್ನು ಕಂಪನಿಗೆ ಒದಗಿಸಲಾಗುವುದು.
ರೆನೈಸಾನ್ಸ್ ಕಂಪನಿಯು ಜಿಲ್ಲೆಯಲ್ಲಿ ಸೌರಫಲಕ ಬಿಡಿ ಭಾಗಗಳ ತಯಾರಿಕೆ ಘಟಕವನ್ನು ಪ್ರಾರಂಭಿಸಲು ತೀರ್ಮಾನಿಸಿದ್ದು, ಇದಕ್ಕಾಗಿ 6,000 ಕೋಟಿ ರೂ.ಗಳನ್ನು ಬಂಡವಾಳವಾಗಿ ಹೂಡಲಿದೆ. ಈ ನಿಟ್ಟಿನಲ್ಲೂ ಕಂಪನಿಯೊಂದಿಗೆ ಮಾತುಕತೆ ನಡೆದಿದ್ದು, ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಕಂಪನಿಯು ತನ್ನ ಚಟುವಟಿಕೆಗಳನ್ನು ಆರಂಭಿಸಲಿದೆ. ಮುಂದಿನ 6-7 ವರ್ಷಗಳಲ್ಲಿ ಕಂಪನಿಯು 20,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ ಎಂದು ಹೇಳಿದರು.
ಇಲ್ಲಿಗೆ ಸಮೀಪದ ಮುಳವಾಡದಲ್ಲಿ ಕೆಐಎಡಿಬಿ ವ್ಯಾಪ್ತಿಯಲ್ಲಿ ಇರುವ 300 ಎಕರೆ ಪ್ರದೇಶದಲ್ಲಿ ಉತ್ಪಾದನಾ ಕ್ಲಸ್ಟರ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಜಿಲ್ಲೆಯನ್ನು ಇಂಧನ ಕ್ಷೇತ್ರದ ಸಾಧನಗಳು, ಮೆಷಿನರೀಸ್ ಮತ್ತು ಎಕ್ವಿಪ್ಮೆಂಟ್, ನಾನ್-ಮೆಟಲಿಕ್ ಖನಿಜೋತ್ಪನ್ನಗಳು, ಕೃಷಿ ಮತ್ತು ಕೃಷಿ ಆಧಾರಿತ ಉತ್ಪನ್ನಗಳು, ನ್ಯೂಟ್ರಾಸೂಟಿಕಲ್ಸ್ ಮೆಡಿಸಿನಲ್ ಮತ್ತು ಬೊಟಾನಿಕಲ್ ಉತ್ಪನ್ನಗಳು, ವಿಶೇಷ ಅಲಾಯ್ ಮತ್ತು ಲೋಹೋತ್ಪನ್ನ- ಈ ಆರು ವಲಯಗಳ ಕೈಗಾರಿಕಾ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.
ಜನರಿಗೆ ಆರ್ಥಿಕ ಶಕ್ತಿ ಬಂದಂತೆ ವಿಮಾನ ಪ್ರಯಾಣ ಪ್ರಾಥಮಿಕ ಅಗತ್ಯವಾಗಿದೆ. ಇದಕ್ಕೆ ತಕ್ಕಂತೆ ವಿಜಯಪುರದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಎಲ್ಲವೂ ನಿಗದಿಯಂತೆ ನಡೆದಿದ್ದರೆ, ಇದು ಈ ವೇಳೆಗೆ ಉದ್ಘಾಟನೆ ಆಗಬೇಕಿತ್ತು. ಆದರೆ ಮಧ್ಯದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು, ಕೇಂದ್ರದ ಅನುಮತಿ ಸಿಕ್ಕ ನಂತರ ಆದಷ್ಟು ಬೇಗ ಉದ್ಘಾಟನೆ ಮಾಡಲಾಗುವುದು.
ಈ ಯೋಜನೆಗೆಂದು 347.92 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ. ಇಲ್ಲಿ ರಾತ್ರಿ ವೇಳೆಯೂ ವಿಮಾನಗಳ ಲ್ಯಾಂಡಿಂಗ್, ಎ-320 ಮಾದರಿಯ ವಿಮಾನಗಳ ಸೇವೆ ಎಲ್ಲವೂ ಇರಲಿವೆ. ಇದರಿಂದ ಕೃಷಿಪೂರಕ ಉದ್ಯಮಗಳು, ಕೃಷಿ ಉತ್ಪನ್ನಗಳ ಸಾಗಣೆ ಮತ್ತು ತೋಟಗಾರಿಕೆ ಬೆಳೆಗಳ ರಫ್ತು, ಶೈಕ್ಷಣಿಕ ಚಟುವಟಿಕೆಗಳು, ಪ್ರವಾಸೋದ್ಯಮ ಎಲ್ಲವೂ ಗರಿಗೆದರಲಿವೆ ಎಂದು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದ ಅಗತ್ಯಗಳಿಗಾಗಿ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ತೀರ್ಮಾನಿಸಿದ್ದು, ಈ ನಿಟ್ಟಿನಲ್ಲಿ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಬೆಂಗಳೂರಿನ ಯಾವ ಭಾಗದಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ ಒಳ್ಳೆಯದು ಎಂಬುದರ ಬಗ್ಗೆ ಅನೇಕ ಸಮಾಲೋಚಕರ ಜತೆಗೆ ಚರ್ಚಿಸಲಾಗುತ್ತಿದೆ. ಒಟ್ಟಿನಲ್ಲಿ 2033 ರ ವೇಳೆಗೆ ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ಕಾರ್ಯಾಚರಣೆ ನಡೆಸುವ ವಿಶ್ವಾಸ ಇದೆ ಎಂದರು.
ವಿಜಯಪುರ ನಗರದ ಸೌಂದರ್ಯಕ್ಕಾಗಿ ಅಮೃತ 2.0 ಯೋಜನೆಯಡಿಯಲ್ಲಿ 5 ಕೋಟಿ ಮೊತ್ತದಲ್ಲಿ ಉದ್ಯಾನಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. 400 ವರ್ಷಗಳ ಇತಿಹಾಸವಿರುವ ಐತಿಹಾಸಿಕ ತಾ???ಬಾವಡಿಯನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಜಿಲ್ಲಾಡಳಿತದ ವತಿಯಿಂದ ಟಾಟಾ ಕ????????ಟನ್ಸಿ ಸರ್ವಿಸಸ್ ಇವರ ಸಹಯೋಗದೊಂದಿಗೆ 8 ಕೋಟಿ ಮೊತ್ತದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ನಗರದಲ್ಲಿನ ವಿವಿಧ ಐತಿಹಾಸಿಕ ಬಾವಡಿಗಳನ್ನು ಈ ಹಿಂದೆ ಸ್ವಚ್ಚಗೊಳಿಸಲಾಗಿದ್ದು, ಇವುಗಳನ್ನು ಸುಸ್ಥಿತಿ ಇಟ್ಟುಕೊಳ್ಳಲು ಸಾರ್ವಜನಿಕರು ಇಲ್ಲಿನ ನೀರನ್ನು ತಮ್ಮ ನಿತ್ಯದ ಬಳಕೆಗೆ ಉಪಯೋಗಿಸಿದರೆ, ಕುಡಿಯುವ ನೀರು ಸರಬರಾಜು ಮೇಲಿನ ಒತ್ತಡ ಕಡಿಮೆಯಾಗಿ ನೀರಿನ ಲಭ್ಯತೆ ವಿಫುಲವಾಗುವುದು. ಇದಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ನಗರಾಭಿವೃದ್ಧಿ ಇಲಾಖೆಯಿಂದ ಮಹತ್ಮಾಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ವಿಜಯಪುರ ನಗರದ ಅಭಿವೃದ್ಧಿಗಾಗಿ 250-300 ಕೋಟಿ ಅನುದಾನ ಒದಗಿಸಲು ಕ್ರಮ ವಹಿಸಲಾಗುತ್ತಿದ್ದು, ಇದರಿಂದ ನಗರದ ಮುಖ್ಯರಸ್ತೆಗಳು, ವಿವಿಧ ವಾರ್ಡುಗಳ ರಸ್ತೆಗಳು, ಚರಂಡಿ, ಇತ್ಯಾದಿ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಮಾಡಲಾಗುವುದು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 2024-25 ನೇ ಸಾಲಿನಲ್ಲಿ ಜಿಲ್ಲೆಗೆ 42 ಲಕ್ಷ ಮಾನವ ದಿನಗಳ ಗುರಿ ನೀಡಿದ್ದು, ಜುಲೈ-2024 ರ ಅಂತ್ಯದವರೆಗೆ 17.60 ಲಕ್ಷ ಮಾನವ ದಿನಗಳನ್ನು ಸೃಜಿಸಿ, ಶೇಕಡಾ 93 ರಷ್ಟು ಸಾಧನೆ ಮಾಡಲಾಗಿದೆ ಎಂದರು.
2024-25 ನೇ ಸಾಲಿನ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕಬಡ್ಡಿ, ಖೋ ಖೋ, ಬಾಸ್ಕೆಟ್ ಬಾಲ್, ವಾಲಿಬಾಲ್ ಹಾಗೂ ರನ್ನಿಂಗ್ ಟ್ರ್ಯಾ???ಗಳೂ ಸೇರಿ ಒಟ್ಟು 189 ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ನುಡಿದರು.