ವಾರ್ತಾ ಇಲಾಖೆಯಲ್ಲಿ 78ನೇ ಸ್ವತಂತ್ರ ದಿನಾಚರಣೆ
ಬೀದರ್: ಆ.15:ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರಣದಲ್ಲಿ ಇಂದು 78ನೇ ಸ್ವತಂತ್ರ ದಿನಾಚರಣೆ ಜರುಗಿತು.
ಇದಕ್ಕೂ ಮೊದಲು ವಾರ್ತಾ ಇಲಾಖೆಯ ಮೊದಲ ಮಹಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಅರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಜಿ.ಸುರೇಶ ಅವರು ಪೂಜೆ ಸಲ್ಲಿಸಿದರು. ನಂತರ ರಾಷ್ಟ್ರಧ್ವಜಾರೊಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಇಲಾಖೆಯ ಅಧಿಕಾರಿಗಳಾದ ವಿಜಯಕೃಷ್ಣ ಸೋಲಪುರ, ನರೇಶ, ತನ್ವಿರ್ ಇಕ್ಬಾಲ್, ಆಶಿಷ್, ಸಿಬ್ಬಂದಿಗಳಾದ ಬಿಂದುಸಾರ್, ನಾಗಶೆಟ್ಟಿ, ಗೀತಾಬಾಯಿ, ಅವಿನಾಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.