ಆರ್.ಜೆ ಕಾಲೇಜನಲ್ಲಿ ಧ್ವಜಾರೋಹಣ
ಕಲಬುರಗಿ:ಆ.15:ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಭೂತಪೂರ್ಣವಾಗಿ ಆಚರಿಸಲಾಯಿತು.
ಸರದಾರ ವಲ್ಲಭಭಾಯಿ ಪಟೇಲ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ಆರ್.ಜಿ ಕುಲಕರ್ಣಿ ಅವರು ಧ್ವಜಾರೋಹಣವನ್ನು ನೆರವೇರಿಸಿ ಮಾತಾಡುತ್ತಾ ವಿದ್ಯಾರ್ಥಿಗಳು ದೇಶದ ಪ್ರಗತಿಯನ್ನು ಗಮನಿಸಿ ಒಳ್ಳೆಯ ವಿದ್ಯಾವಂತರಾಗಿ ಮುನ್ನಡೆಯಬೇಕು ಎಂದು ಮಕ್ಕಳಿಗೆ ಕರೆನೀಡಿದರು. ಉಪ ಪ್ರಾಂಶುಪಾಲರಾದ ಕೇದಾರ ದೀಕ್ಷಿತ್ ಅವರು ಭಾರತ ದೇಶದ ಶ್ರೇಷ್ಠತೆಯನ್ನು ಪುರಾತನ ಕಾಲದಿಂದಲೇ ಋಷಿಮುನಿಗಳು ಸಂಸ್ಕøತಿ, ಪರಂಪರೆ, ಬದುಕಿನ ಉಜ್ವಲ ಭವಿಷ್ಯತೆಯನ್ನು ಕಾಪಾಡಿಕೊಂಡುಬಂದವರು. ಆದರೆ ವ್ಯಾಪಾರಕ್ಕಾಗಿ ಬಂದ ಆಂಗ್ಲರು ಇವೆಲ್ಲವನ್ನು ನಾಶ ಮಾಡಲು ಪ್ರಯತ್ನಿಸಿದರು ಆದರೆ ಈಗ ವಿದ್ಯಾರ್ಥಿಗಳು ಪುನಃ ಭವ್ಯ ಭಾರತದ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕೆಂದು ಹೇಳೀದರು. ಉಪನ್ಯಾಸಕರಾದ ಮಳೇಂದ್ರ ಹಿರೇಮಠ ಅವರು ಈಗ ಭಾರತ ವಿಕಾಸವು ಅತ್ಯುನ್ನತ ಮಟ್ಟದಿಂದ ದೇಶ ವಿದೇಶಗಲ್ಲಿ ರಾರಾಜಿಸುತ್ತದೆ. ಇಂದಿನ ಈ ಸ್ವಾತಂತ್ಯ್ರೋತ್ಸವವು ದಏಶದ ಮನೆ ಮನೆಗಳಲ್ಲಿ ಹಬ್ಬದ ವಾತಾವರಣದಂತೆ ಇರಬೇಕೆಂದು ಆಶಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ಬಳಗ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.