ವಿದ್ಯಾರ್ಥಿಗಳು ಸ್ವತಂತ್ರ ಹೋರಾಟಗಾರರ ತ್ಯಾಗ ಬಲಿದಾನ ಅರಿಯಬೇಕು
ಕಲಬುರಗಿ:ಆ.15:ವಿದ್ಯಾರ್ಥಿಗಳು ಸ್ವತಂತ್ರ ಹೋರಾಟಗಾರರ ತ್ಯಾಗ ಬಲಿದಾನ ಅರಿತುಕೊಂಡು ಪ್ರತಿಯೊಬ್ಬರೂ ರಾಷ್ಟ್ರ ಸಮರ್ಪಣೆಗಾಗಿ ದುಡಿಯುವಂತಾಗಬೇಕು. ಇಂದಿನ ಯುವಕರು ದುಷ್ಟಗಳಿಗೆ ಬಲಿಯಾಗಿದ್ದು ಅಂತ ದುಷ್ಟ ಚಟಗಳಿಂದ ದೂರಿದ್ದು ಪರಿಶ್ರಮ ಪಟ್ಟು ಮುಂದೆ ಬಂದಾಗ ರಾಷ್ಟ್ರ ಸದೃಢವಾಗಿ ನಿರ್ಮಾಣವಾಗುತ್ತದೆ ಎಂದು ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಸ್ಟೇಷನ್ ಬಜಾರ್ ಕಲ್ಬುರ್ಗಿಯಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಮಾಡಿ ಪ್ರಾಂಶುಪಾಲರಾದ ಸುಜಾತ ಬಿರಾದರ್ ಮಾತನಾಡಿದರು.
ವಿದ್ಯಾರ್ಥಿಗಳು ವಿವಿಧ ನಶೆಗಳಲ್ಲಿ ತೋಳಲಾಡುತ್ತಿದ್ದು ನಶೆ ಮುಕ್ತ ಸಮಾಜ ನಿರ್ಮಾಣವಾಗಲು ಪ್ರತಿಯೊಬ್ಬರು ಕೈಜೋಡಿಸಬೇಕು ಹಾಗೂ ಸಮಾಜದಲ್ಲಿ ತಾವು ರಾಯಭಾರಿಯಾಗಿ ಕೆಲಸ ಮಾಡಬೇಕು.ನಮ್ಮ ದೇಶದಲ್ಲಿ ಸಂಪತ್ತಿನ ಅಸಮಾನತೆ ಹೆಚ್ಚಾಗಿದ್ದು ಸಂಪತ್ತು ಕೆಲವೇ ಕೆಲವು ಶಕ್ತಿಗಳ ಹತ್ತಿರ ಕೇಂದ್ರೀಕರಣವಾಗಿದೆ ಇದು ಹೋಗಲಾಡಬೇಕು ಈ ನಿಟ್ಟಿನಲ್ಲಿ ಎಲ್ಲರಿಗೂ ಸಂಪತ್ತು ಸಮಾನವಾಗಿ ಹಂಚಿಕೆಯಾಗಿ ಘನತೆ ಗೌರವದಿಂದ ಬದುಕಲು ಅವಕಾಶ ಪ್ರತಿಯೊಬ್ಬರಿಗೂ ಸಿಕ್ಕಾಗ ಭಾರತ ಭವ್ಯವಾಗಿ ನಿರ್ಮಾಣವಾಗುತ್ತದೆ.ನಮ್ಮ ದೇಶವು ವಿಶ್ವದ ಆರ್ಥಿಕತೆಯಲ್ಲಿ ನಾಲ್ಕನೆಯ ಸ್ಥಾನದಲ್ಲಿ ದಾಪುಗಾಲು ಇಡುತ್ತಿದ್ದು ಇಂಥ ಸುಸಂದರ್ಭದಲ್ಲಿ ಮಹಿಳೆಯರಿಗೂ ಸಮಾನವಾದ ಅವಕಾಶ ಸಿಗಬೇಕು ಅಭದ್ರತೆಯ ವಾತಾವರಣ ತೊಲಗಬೇಕು ಅಂದಾಗ ಒಂದು ಸ್ವಾಸ್ಥ್ಯ ಸಮಾಜ ಹಾಗೂ ರಾಷ್ಟ್ರ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಸ್ಪೂರ್ತಿ, ಮೈಗೂಡಿಸಿಕೊಂಡು ತಮ್ಮನ್ನು ತಾವು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಾಷ್ಟ್ರದ ಉನ್ನತಿಗೆ ಶ್ರಮಿಸಬೇಕು ಎಂದರು. ಇಂದು ಯುವ ಪೀಳಿಗೆಯಲ್ಲಿ ರಾಷ್ಟ್ರದ ಬಗ್ಗೆ ಅಭಿಮಾನ ಹಾಗೂ ಕಾಳಜಿ ಕಡಿಮೆಯಾಗಿದ್ದು ಇಂಥ ಸಂಸ್ಕøತಿ ಹೋಗಬೇಕು ರಾಷ್ಟ್ರದ ಬಗ್ಗೆ ಅಭಿಮಾನ ಹೆಮ್ಮೆ ಪಡುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಎನ ಎಸ್ ಎಸ್ ವಿಭಾಗೀಯ ಅಧಿಕಾರಿ ಡಾ ಚಂದ್ರಶೇಖರ್ ದೊಡ್ಡಮನಿ ,ಎನ ಎಸ್ ಎಸ್ ಅಧಿಕಾರಿ ಪಾಂಡು ಎಲ್ ರಾಠೋಡ್ ,ಹಿರಿಯ ಉಪನ್ಯಾಸಕರಾದ ಚಂದ್ರಕಾಂತ್ ಸನದಿ, ಬಲರಾಮ ಚವ್ಹಾಣ ಮಲ್ಲಯ್ಯ ಮಠಪತಿ ಸಿದ್ದಲಿಂಗಪ್ಪ ಪೂಜಾರಿ ಶ್ರೀಮತಿ ರೇಖಾ ರಾಯಚೂರ್ , ವಿಜಯಲಕ್ಷ್ಮಿರೆಡ್ಡಿ ಡಾ.ಶೀಲಾವತಿ ವಾಡೇಕರ್ ಶ್ರೀನಿವಾಸ್ ಐ ಜಿ ,ಶಿವಪ್ಪ ಶಶಿಧರ್ ಭೂಸನೂರ್ ಹಂಚಿನಾಳ, ಶ್ರೀಶೈಲ ಖುರ್ದು , ನೇಸರ್, ರಾಕೇಶ್ ಕೆಜೆ, ಮುಂತಾದವರು ಉಪಸ್ಥಿತರಿದ್ದರು.