ವಿ ಜಿ ಪದವಿ ಪೂರ್ವ ಮಹಾವಿದ್ಯಾಲಯ ವತಿಯಿಂದ “ಹರ್ ಘರ್ ತಿರಂಗ” ಅಭಿಯಾನ
ಕಲಬುರಗಿ:ಆ.15: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯವು ನಮ್ಮ ದೇಶದ 78 ನೇ ಸ್ವಾತಂತ್ರ್ಯದ ಭಾರತೀಯ ಸರ್ಕಾರದ “ಹರ್ ಘರ್ ತಿರಂಗ ಅಭಿಯಾನ” ದ ಭಾಗವಾಗಿ ಆಗಸ್ಟ್ 14 ರಂದು ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಗೋಸ್ಕರ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ನಮ್ಮ ಹುತಾತ್ಮರ ಅತ್ಯುನ್ನತ ತ್ಯಾಗ ಮತ್ತು ಭಾರತವೆಂಬ ಮಹಾನ್ ದೇಶವನ್ನು ನಮ್ಮ ವಿದ್ಯಾರ್ಥಿನಿಯರಿಗೆ ಮತ್ತು ಅವರಿಂದ ಜನರಿಗೆ ಅರಿವು ಮೂಡಿಸುವುದು ಮತ್ತು ಅಂಗೀಕರಿಸುವುದು ಇದರ ಉದ್ದೇಶವಾಗಿತ್ತು.
ಪ್ರಥಮ ಮತ್ತು ದ್ವೀತಿಯ ವರ್ಷದ ಪದವಿ ಪೂರ್ವ ತರಗತಿಗಳ ವಿದ್ಯಾರ್ಥಿಗಳಲ್ಲಿ ಮಹಾವಿದ್ಯಾಲಯವನ್ನು ಪ್ರತಿನಿಧಿಸಲು ಮತ್ತು ಸಂದೇಶವನ್ನು ಹರಡಲು ಆಯ್ಕೆ ಮಾಡಲಾಯಿತು. ಹರ್ ಘರ್ ತಿರಂಗ ಅಭಿಯಾನದ ಉದ್ದೇಶ ದೇಶದ ಜನರನ್ನು ಒಗ್ಗೂಡಿಸುವುದು. ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ವಿದ್ಯಾರ್ಥಿಗಳಾದ ನೀವು ಜನರಿಗೆ ಪ್ರೇರೇಪಿಸಬೇಕು. ಇದರಿಂದ ಜನರಲ್ಲಿ ದೇಶಭಕ್ತಿಯ ಭಾವನೆ ಮೂಡುತ್ತದೆ. ಇದರಿಂದ ಜನರಲ್ಲಿ ತ್ರಿವರ್ಣ ಧ್ವಜದ ಬಗ್ಗೆ ಜಾಗೃತಿ ಮೂಡುತ್ತದೆ ಎಂದು ತಿಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಾಡಿನ ಸ್ಪರ್ಧೆಯ ವಿಶೇಷ ತೀರ್ಪುಗಾರರಾಗಿ ಉಪನ್ಯಾಸಕರಾದ ಶ್ರೀಮತಿ. ಅನೀತಾ ಪಾಟೀಲ ಮತ್ತು ಶ್ರೀಮತಿ ಜಗದೇವಿ ಚಿಕ್ಕೆಗೌಡ ಮತ್ತು ಕಥೆ/ಭಾಷಣ ಸ್ಪರ್ಧೆಯ ತೀರ್ಪುಗಾರರಾಗಿ ಉಪನಾಸ್ಯಕರಾದ ಶ್ರೀ. ಬಸವರಾಜ ಗೋಣಿ ಮತ್ತು ಶ್ರೀಮತಿ ಶೈಲಜಾ ನಾಕೇದಾರ ವಿಜೇತರಾದ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿದರು. ಆಯ್ಕೆಯಾದ ವಿದ್ಯಾರ್ಥಿನಿಯರ ವಿವರ ಈ ಕೆಳಗಿನಂತಿದೆ.
ಹಾಡಿನ ಸ್ಪರ್ಧೆ: