ಶಿಕ್ಷಣದ ಜೊತೆಗೆ ಸಂಸ್ಕೃತಿಯನ್ನು ಕಲಿಸಬೇಕಿದೆ
ಸಂಜೆವಾಣಿ ವಾರ್ತೆ
ಹರಪನಹಳ್ಳಿ:ಅ,15- ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಸಾಹಿತಿ ಎಸ್.ಎಚ್.ಹೂಗಾರ್ ಹೇಳಿದರು.
ಪಟ್ಟಣದ ಅಂಬ್ಲಿ ದೋಡ್ದ ಭರಮಪ್ಪ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಾ ದಿನಾಚರಣೆ ಹಾಗೂ ವಿವಿಧ ಸಾಂಸ್ಕೃತಿಕ ಸಂಘಗಳ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ನಡೆ-ನುಡಿ ಸಂಸ್ಕೃತಿ ಮೈಗೂಡಿಸಿಕೊಂಡರೇ ಪರಿಪೂರ್ಣ ವ್ಯಕ್ತಿಯಾಗಿ ಹೊರಹೊಮ್ಮಬಹುದು, ಇಂದಿನ ಸ್ಪಾರ್ಧತ್ಮಕ ಯುಗದಲ್ಲಿ ಯುವಕರು ಸರ್ಕಾರಿ ನೌಕರಿಯನ್ನೇ ಆವಲಂಬಿಸದೆ ಸ್ವಯಂ ಉದ್ಯೋಗ ಕಲ್ಪಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಬಳ್ಳಾರಿ ವೀ.ವಿ.ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕೆಂದು ತಿಳಿಸಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಆರ್.ಗಂಗಪ್ಪ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿ ತಂದೆ-ತಾಯಿ ಗುರು ಹಿರಿಯರನ್ನು ಗೌರವಿಸಬೇಕು ಎಂದು ಹೇಳಿದರು 
ಕಾಲೇಜು ಆಡಳಿತ ಮಂಡಳಿ ನೂತನ ಅಧ್ಯಕ್ಷ ಮೋಹನ್ ರೆಡ್ಡಿ ಮಾತನಾಡಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆಗೈದಿದ್ದು, ಮುಂದಿನ ವರ್ಷದಿಂದ ವಿಶ್ವವಿದ್ಯಾಲಯ ಮಟ್ಟದ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ 25 ಸಾವಿರ ದತ್ತಿ ನಿಧಿ ನೀಡುವುದಾಗಿ ಘೊಷಿಸಿದರು.
ವೀ.ವಿ ಸಂಘದ ಉಪಾಧ್ಯಕ್ಷ ಜಾನಕುಂಟೆ ಬಸವರಾಜ, ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್, ಯಾಳ್ವಿ ಮೇಟಿ ಪಂಪನಗೌಡ, ಕೋಶಾಧಿಕಾರಿ ಎರ್ರಿಸ್ವಾಮಿ, ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಂ.ಸಿದ್ದಲಿಂಗಮೂರ್ತಿ, ಡಾ.ಡಿ.ತಿಪ್ಪೇಸ್ವಾಮಿ, ಡಾ.ಎ.ಎಂ.ರಾಜಶೇಖರಯ್ಯ ಡಾ.ಗೋವರ್ಧನ್, ಡಾ.ಮಧುಕುಮಾರ, ಎಚ್.ಆಶಾ, ಎಸ್.ಆನಂದ, ಅಣ್ಣೇಶ, ಬಸವಂಗಪ್ಪ, ನವಾಜ್ ಬಾಷ, ರೇಣುಕಾ ಪ್ರಸಾದ ಕಲ್ಮಠ, ದರ್ಶನ್, ಜೆ.ಪಾಟೀಲ್, ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.
14ಎಚ್‍ಪಿಎಲ್1-ಪೋಟೋ-
ಹರಪನಹಳ್ಳಿ: ಪಟ್ಟಣದ ಎಡಿಬಿ ಕಾಲೇಜಿನಲ್ಲಿ ನಡೆದ ಪ್ರತಿಭಾ ದಿನಾಚರಣೆ ಹಾಗೂ ವಿವಿಧ ಸಾಂಸ್ಕೃತಿಕ ಸಂಘಗಳ ಸಮಾರೋಪ ಸಮಾರಂಭವನ್ನು ವೀ.ವಿ ಸಂಘದ ಉಪಾಧ್ಯಕ್ಷ ಜಾನಕುಂಟೆ ಬಸವರಾಜ ಉದ್ಘಾಟಿಸಿದರು.