ಹೊಸಪೇಟೆ ವಿವಿಧಡೆ ಸಂಭ್ರಮದ ಸ್ವಾತಂತ್ರೋತ್ಸವ
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಆ15: 78ನೇ ಸ್ವಾತಂತ್ರೋತ್ಸವವನ್ನು ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ.
ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯಿತಿ ಕಛೇರಿ, ನಗರಸಭೆ ಸೇರಿದಂತೆ ಸಂಘ-ಸಂಸ್ಥೆಗಳು, ಸರ್ಕಾರಿ, ಅರೇ ಸರ್ಕಾರಿ ಕಛೇರಿಗಳು ಸೇರಿದಂತೆ ವಿವಿಧಡೆ ಸಂಭ್ರಮದಿಂದ ತಳಿರು ತೋರಣಗಳಿಂದ ಶೃಂಗರಿಸಿ ತ್ರಿವರ್ಣಧ್ವಜವನ್ನು ಹಾರಿಸಲಾಯಿತು.
ಸಾಮೂಹಿಕವಾಗಿ ನಗರದ 150 ಅಡಿ ಎತ್ತರದ ಡಾ.ಪುನೀತ್‍ರಾಜಕುಮಾರ ವೃತ್ತದಲ್ಲಿ ಹಾಗೂ ಎಸ್.ಕೆ.ಎಂ.ಪಿ.ಇ ಎಲ್. ಸ್ವಾತಂತ್ರ್ಯ ಉದ್ಯಾನವನದಲ್ಲಿ ಪತಂಜಲಿ ಯೋಗ ಸಮಿತಿಯ ಹಾಗೂ ನಗರಸಭೆಯ ಸಹಕಾರದೊಂದಿಗೆ ಶಾಸಕ ಎಚ್.ಆರ್.ಗವಿಯಪ್ಪ ಧ್ವಜವಂದನೆ, ಧ್ವಜಾರೋಹಣವನ್ನು ನಗರಸಭೆ ಸಹಯೋಗದಲ್ಲಿ ನೆರವೇರಿಸಿದರು.