ಸ್ಟಾಪ್ ಗೇಟ್ ಅಳವಡಿಕೆ ಆರಂಭ. ಜಲಾಶಯ ಪ್ರವೇಶಿಸಿದ ಗೇಟ್
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಆ15: ಜಲಾಶಯದ ನೀರು ಉಳಿಸಿಕೊಂಡೇ, ಗೇಟ್ ಅಳವಡಿಕೆ ಮಾಡುವ ಸರ್ಕಾರದ ಯೋಚನೆಗೆ ಪೂರಕ ಎಂಬಂತೆ ಸ್ಟಾಪ್ ಗೇಟ್ ತುಂಗಭದ್ರಾ ಜಲಾಶಯವನ್ನು ಪ್ರವೇಶಿಸಿದೆ.
ಕಳೆದ ಆಗಷ್ಟ್ 10 ರ ರಾತ್ರಿ ಜಲಾಶಯದ 19ನೇ ಗೇಟ್ ಚೈನ್ ಕಟ್ ಆಗುವ ಮೂಲಕ ಲಕ್ಷಾಂತರ ಕ್ಯುಸೆಕ್ ನೀರು ಹೊರಬಿಡುವ ಮೂಲಕ ಜಲಾಶಯ ರಕ್ಷಣೆಗೆ ಮುಂದಾಗಿದ್ದ ತುಂಗಭದ್ರಾ ಮಂಡಳಿ 60 ಟಿಎಂಸಿ ನೀರು ಹೊರಬಿಡುವ ಮೂಲಕ ಕ್ರಸ್ಟ್‍ಗೇಟ್ ಅಳವಡಿಸಲು ಯೋಚಿಸಿತು. ನಂತರ ಬಂದ ತಜ್ಞರ ತಂಡ ವಿನೂತನ ಮಾಗೋಪಾಯಗಳ ಮೂಲಕ ನೀರು ಉಳಿಸಿಕೊಂಡೆ ಅಳವಡಿಕೆಗೆ ಕೆಲ ಸೂತ್ರಗಳನ್ನು ಮುಂದಿಟ್ಟಿದ್ದು ಅಷ್ಟೇ ಬೃಹದಾಕಾರದ ಸ್ಟಾಪ್‍ಗೇಟ್ ಅಳವಡಿಕೆ ಸೂತ್ರಕ್ಕೆ ಮುಂದಾಗುತ್ತಾ ಕ್ರಸ್ಟ್ ಗೇಟ್ ನಿರ್ಮಾಣಕ್ಕೂ ಕಾರ್ಯಾರಂಭ ಮಾಡಿದ್ದು ಇದೀಗ ಸ್ಟಾಪ್ ಗೇಟ್‍ಗಳನ್ನು ನಿರ್ಮಾಣ ಕಾರ್ಯ ಪೂರ್ಣಗೊಡಿದ್ದು ಇದು ಯಶಸ್ವಿಯಾದಲ್ಲಿ ಒಂದು ಸಾಧನೆ ಎನ್ನುವ ಮೂಲಕ ನೀರು ಉಳಿಸಿಕೊಂಡು ಕ್ರಸ್ಟ್ ಗೇಟ್ ಅಳವಡಿಸಲು ಮುಂದಾಗಲಿದ್ದು, ಇಂದು ಕಾರ್ಯಾರಂಭವಾಗಲಿದೆ ಮೊದಲ ಹಂತದ ಸ್ಟಾಪ್‍ಗೇಟ್ ತುಂಗಭದ್ರಾ ಜಲಾಶಯವನ್ನು ಬಂದು ಸೇರಿವೆ.