ರೈತ ಆತಂಕ ಪಡುವ ಪ್ರಮೇಯವೇ ಇಲ್ಲಾ.. ಎಲ್ಲಾ ಗ್ಯಾರಂಟಿಗಳು ಮುಂದುವರೆಕೆ78ನೇ ಸ್ವಾತಂತ್ರೋತ್ಸವದಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಆ15: ತುಂಗಭದ್ರಾ ಜಲಾಶಯದ ಕ್ರಸ್ಟ್‍ಗೇಟ್ ಅಳವಡಿಕೆ ಕಾರ್ಯ ನಾಳೆಯಿಂದಲೇ ಆರಂಭವಾಗಲಿದ್ದು ರೈತರು, ತುಂಗಭದ್ರಾ ಆಶ್ರಯಿತ ಜನರು ಆತಂಕಪಡಬೇಕಾಗಿಲ್ಲಾ, ಎಂತಹ ಪರಿಸ್ಥಿತಿಯಲಿಯೂ ಸರ್ಕಾರ ಗ್ಯಾರಂಟಿಯೋಜನೆಗಳನ್ನು ನಿಲ್ಲಿಸೋಲ್ಲಾ ಎಂದು ವಿಜಯನಗರ ಉಸ್ತುವಾರಿ ಹಾಗೂ ವಸತಿ ಸಚಿವ ಬಿ.ಝಡ್, ಜಮೀರ್ ಅಹಮ್ಮದ್ ಖಾನ್ ಹೇಳಿದರು.
ಹೊಸಪೇಟೆ ಡಾ.ಪುನೀತ್ ರಾಜಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು  ಅನೇಕ ತ್ಯಾಗ ಬಲಿದಾನಗಳಿಂದ ದೊರೆತ ಸ್ವಾತಂತ್ರ್ಯವನ್ನು ನಾವು ಕಾಪಾಡಿಕೊಂಡು ಹೋಗಬೇಕಿದೆ ಎಂದರು.
ರೈತರು ಆತಂಕಪಡಬೇಕಾಗಿಲ್ಲಾ :
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿಬಿದಿರುವುದು ಆಕಸ್ಮಿಕ, ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ತ್ವರಿ ಕ್ರಮಕ್ಕೆ ಮುಂದಾಗಲಿದೆ, ಜಲಾಶಯದ ನೀರು ಉಳಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು ಆಂದ್ರ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯತೆಯನ್ನು ಸಾಧಿಸಿ ನೀರನ್ನು ಉಳಿಸುವದರೊಂದಿಗೆ ಗೇಟ್ ಅಳವಡಿಸುವ ಪ್ರಯತ್ನದಲ್ಲಿದ್ದು ಸಾಧ್ಯವಾಷ್ಟು ಯಶ ಸಾಧಿಸಲಿದ್ದೇವೆ ಎಂದರು.  ರೈತರು ಆತಂಕಪಡಬೇಕಾದ ಕಾರಣವಿಲ್ಲಾ, ಇನ್ನು ಮಳೆಗಳು ಆಗವ ಮುನ್ನೂಸೂಚನೆ ಇದ್ದು ನೀರು ಭರ್ತಿಯಾಗಲಿದೆ ಎಂಬ ಭರವಸೆ ಇದೆ, ರೈತರ ಹಿತಕಾಯುವುದು, ಜಲಾಶಯವನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಗ್ಯಾರಂಟಿ ನಿಲ್ಲೋಲಾ..
ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿಯೋಜನೆಗಳನ್ನು ಯಾವುದೆ ಕಾರಣಕ್ಕೂ ಇಲ್ಲಿಸೋಲ್ಲಾ, ಅನಗತ್ಯ ಗೊಂದಲ ಬೇಡ, ತಾಂತ್ರಿಕ ಕಾರಣಗಳಿಂದ ಸ್ವಲ್ಪ ವಿಳಂಬವಾಗಿರಬಹುದೆ ಹೊರತು ಗ್ಯಾರಂಟಿ ಯೋಜನೆಗಳ ಯಾವುದೆ ಕಾರಣಕ್ಕೂ ನಿಲ್ಲಸೋಲ್ಲಾ ಎಂದು ಸ್ಪಷ್ಟಪಡಿಸಿದರು. ಸರ್ಕಾರ ಇರುವವರೆಗೂ ಗ್ಯಾರಂಟಿಯೋಜನೆಗಳು ಮುಂದವರೆಯಲಿವೆ ಎಂದರು. 
78ನೇ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ, ಪಥ ಸಂಚಲನೆ, ಸಾಮೂಹಿಕ ಕವಾಯತ್, ಪೊಲೀಸ್, ಮೀಸಲು ತುಕುಡಿಗಳಿಂದ ಗಳಿಂದ ಗೌರವ ವಂದನೆ ಸ್ವೀಕರಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ ಗಣ್ಯರನ್ನು ಸನ್ಮಾನಿಸುವುದು, ಎಸ್‍ಎಸ್‍ಎಲ್‍ಸಿ, ಪಿಯುಸಿ ಸೇರಿದಂತೆ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಾಸಕ ಹೆಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ,ಎಸ್,ದಿವಾಕರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಳ್ಗೊಂಡಿದ್ದರು