ಮಹಾತ್ಮರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಆ.15 ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮನ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ  ಎಂದು ತಹಸೀಲ್ದಾರ್ ಆರ್. ಕವಿತ  ಹೇಳಿದರು
ಪಟ್ಟಣದ ಗಂ. ಭೀ ಪದವಿಪೂರ್ವ ಕಾಲೇಜ್ ಮೈದಾನದಲ್ಲಿ 78 ನೇ ಸ್ವತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಅಖಂಡ ಬಳ್ಳಾರಿ ಜಿಲ್ಲೆಯ ಸ್ವಾತಂತ್ರ ಹೋರಾಟಗಾರನ್ನು ನೆನೆದು ಅವರಿಗೆ ಗೌರವ  ಸಲ್ಲಿಸಿದರು..ಇಂದಿನ ಮಕ್ಕಳು ನಾಳೆನ ಪ್ರಜೆಗಳು ಅವರಿಗೆ ಒಳ್ಳೆಯ ಶಿಕ್ಷಣ. ಅರೋಗ್ಯ  ನೀಡುವ ಮೂಲಕ ನಾವೆಲ್ಲರೂ ಶ್ರಮಿಸೋಣ ಎಂದರು.
ಅಧ್ಯಕ್ಷತೆ ವಹಿಸಿ ಶಾಸಕ  ಕೆ. ನೇಮಿರಾಜ್ ನಾಯ್ಕ ಮಾತನಾಡಿ ನನ್ನ ಅಧಿಕಾರ ಅವಧಿ ಯಲ್ಲಿ  ಮಾದರಿ ಕ್ಷೇತ್ರವನ್ನಾಗಿ ನಿರ್ಮಿಸುವುದೇ ನನ್ನ ಮುಂದಿನ ಗುರಿ :. ಮುಂದಿನ 4 ವರ್ಷ ದಲ್ಲಿ ಕ್ಷೇತ್ರ ವನ್ನು ನೀರಾವರಿ ಯೋಜನೆ ಗೆ ಸಂಬಂದಿಸಿದಂತೆ  ಅಭಿವೃದ್ಧಿ ಮಾಡಿ ರೈತರ ಋಣ  ತಿರುಸುತ್ತೇನೆ. ಸ್ವಾತಂತ್ರ ಹೋರಾಟದಲ್ಲಿ ಮಹಾತ್ಮರ ಕೊಡುಗೆಯಿಂದ ದೇಶ ಸ್ವತಂತ್ರವಾಗಿ 78 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ  ಗುಣಮಟ್ಟದ ಆರೋಗ್ಯ ಶಿಕ್ಷಣ ದೊರೆಯುವಂತಹ  ಕೆಲಸವಾಗಬೇಕಾಗಿದೆ ಎಂದರು.
 ಈ ಸಂದರ್ಭದಲ್ಲಿ ತಾ ಪಂ ಇ ಒ ಪರಮೇಶ್ವರ್, ಸಿಪಿಐ ವಿಕಾಸ್ ಲಂಬಾಣಿ ಪುರಸಭೆ  ಮುಖ್ಯ್ಯಾಧಿಕಾರಿ ಪ್ರಭಾಕರ್,,ಬಿ ಇ ಒ ಮೈಲೇಶ್  ಬೇವೂರ್  ತಾ ಪಂ ನರೇಗಾ ಯೋಜನೆ ಎಡಿ ರಮೇಶ್ ಮಹಾಲಿಂಗಪುರ್ ಸಿಡಿಪಿಒ ಬೋರೇಗೌಡ, ಬಿಸಿಎಂ  ರಮೇಶ್, ಸಮಾಜ ಕಲ್ಯಾಣ ಇಲಾಖೆ ಯ ಆಂಜೆನೇಯ ಹೆಚ್. ಹುಲ್ಲಾಳ್,  ಪುರಸಭೆ ಸದಸ್ಯರಾದ ಬಿ. ಗಂಗಣ್ಣ, ಬೋವಿ ವೀರಣ್ಣ, ನಾಗರಾಜ್ ಜನ್ನು, ದೀಪಕ್ ಕಠಾ ರೆ  ಇತರರಿದ್ದರು.