ಗಣಿನಾಡು ಬಳ್ಳಾರಿಯಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ರಾಷ್ಟ್ರ ಧ್ವಜಾರೋಹಣ
* 30 ತುಕಡಿಗಳಿಂದ ಧ್ವಜವಂದನೆ
* ಸಾಧಕರಿಗೆ ಸನ್ಮಾನ
* ನೃತ್ಯ ಪ್ರದರ್ಶನ
* ನಗರದ ಗಣ್ಯರ ಉಪಸ್ಥಿತಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,15-  ನಗರದ ಬಿಮ್ಸ್ ಮೈದಾನದಲ್ಲಿ ಇಂದು ನಡೆದ 58 ನೇ ಸ್ವಾತಂತ್ರ್ಯ ಮಹೋತ್ಸವ ಸಮಾರಂಭದಲ್ಲಿ  ಕಂದಾಯ ಸಚಿವ ಕೃಷ್ಣ ಭೈರೇಗೌಡ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ನಂತರ ಅವರುಪಥ ಸಂಚನೆ ನಡೆಸಿ  ಪೊಲೀಸ್ ಶಸ್ತ್ರಪಡೆ, ಗೃಹರಕ್ಷಕ ದಳ,  ಎನ್ ಸಿಸಿ, ಭಾರತ್ ಸ್ಕೌಟ್ಸ್, ಸೇವಾದಳ, ಶಾಲಾ ಮಕ್ಕಳ 30 ತುಕಡಿಗಳಿಂದ  ಧ್ವಜವಂದನೆ ಸ್ವೀಕರಿಸಿದರು.
ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸಿದರು. ಸರ್ವರಿಗೂ ರಾಜಕೀಯ, ಆರ್ಥಿಕ, ಸಾಮಾಜಿಕ ಸಮಾನತೆ ದೊರೆತಾಗ ಮಾತ್ರ ನಿಜವಾದ ಸ್ವಾತಂತ್ರ್ಯ, ಈಗ ಅಧುನಿಕ ತಂತ್ರಜ್ಞಾನದೊಂದಿಗೆ  ಸಾಕಷ್ಟು ಪ್ರಗತಿ ಸಾಧಿಸಿದೆ.
ಅನೇಕ ದೇಶಗಳಿಗೆ ನೆರವು ನೀಡುವ ಶಕ್ತಿ ಸಾಮರ್ಥ್ಯ ಹೊಂದಿದೆ. ಆದರೆ ಇನ್ನೂ ಸಾಕಷ್ಟು
ಭವಿಷ್ಯದ ಸವಾಲುಗಳನ್ನು ಎದುರಿಸಬೇಕಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವಕ್ಕೆ  ಧಕ್ಕೆ ತರುವ ರೀತಿಯಲ್ಲಿದೆ ಎಂದ ಅವರು ಬಡವರು ಶ್ರೀಮಂತರ ನಡುವೆ ಅಂತರ ಹೆಚ್ಚುತ್ತಿರುವುದು ಆತಂಕವಾಗಿದೆ. ದೇಶದ ಆದಾಯ ಎಲ್ಲರಿಗೂ ಸಮಾನವಾಗಿ ದೊರೆಯುವಂತಾಗಬೇಕಿದೆ. ಭಾರತ ಶ್ರೀಮಂತವಾಗಿ ಭಾರತೀಯರು ಬಡವರಾಗಬಾರದು. ದುಡಿಯುವ ವರ್ಗಕ್ಕೂ ಆದಾಯ ದೊರೆಯ ಬೇಕೆಂದು ಗ್ಯಾರೆಂಟಿ ಯೋಜನೆ ಜಾರಿಗೆ ತಂದಿದೆಂದು ಅವುಗಳಿಂದ ಇಲ್ಲಿವರೆಗೆ ರಾಜ್ಯದ ಐದು ಕೋಟಿ ಜನತೆ ಲಾಭ  ಪಡೆದಿದ್ದಾರೆಂದು ಅಂಕೆ ಸಂಖ್ಯೆ ಸಮೇತ ತಿಳಿಸಿದರು.
ಸಮವಸ್ತ್ರ ವಿಭಾಗದಲ್ಲಿ:
ಎನ್ ಸಿಸಿ ಮಹಿಳಾ ತಂಡಕ್ಕೆ ಪ್ರಥಮ, ಗೃಹರಕ್ಷದಳ ಮಹಿಳೆಯರ ವಿಭಾಗ ದ್ವಿತೀಯ,  ಸಂತಜಾನಾ ಶಾಲೆಯ  ಸ್ಕೌಟ್ಸ್  ವಿಭಾಗ ತೃತೀಯ ಸ್ಥಾನ ಪಡೆಯಿತು.
ಕವಾಯತ್ ಪ್ರಾಥಮಿಕ ಶಾಲೆಯ ವಿಭಾಗದಲ್ಲಿ 
ಪ್ರಥಮ ಸ್ಥಾನ ಸರ್ಕಾರಿ ಕಿವುಡ ಮತ್ತು ಮೂಗ ಶಾಲೆ, ದ್ವಿತೀಯ ಸ್ಥಾನ ಸಂತಮೇರಿ ಶಾಲೆ, ತೃತೀಯ ಸ್ಥಾನ ಎಂಜಿಎಂ ಶಾಲೆ ಪಡೆಯಿತು.
ನಂತರ ಕ್ರೀಡೆ, ಕಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಗೌರವ ಸನ್ಮಾನ ಮಾಡಲಾಯ್ತು. ಬಳಿಕ ಮಕ್ಕಳಿಂದ ಆಕರ್ಷಕ ಕವಾಯತ್ ನಡೆಯಿತು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ನಗರ ಶಾಸಕ  ಭರತ್ ರೆಡ್ಡಿ,  ಮೇಯರ್  ಮುಲ್ಲಂಗಿ ನಂದೀಶ್, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಸಿದ್ದಮ್ಮನಹಳ್ಳಿ ತಿಮ್ಮನಗೌಡ, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್,  ಡಿಸಿ ಪ್ರಶಾಂತ್ ಕುಮಾರ್ ಮಿಶ್ರ, ಎಸ್ಪಿ ಡಾ.ಶೋಭಾರಾಣಿ, ಜಿಪಂ ಸಿ ಈಓ ರಾಹುಲ್ ಶರಣಪ್ಪ ಸಂಕನೂರು, ಎಡಿಸಿ ಮಹಮ್ಮದ್ ಜುಬೇರ, ಎಎಸ್ಪಿ ರವಿಕುಮಾರ್, ಪಾಲಿಕೆ ಆಯುಕ್ತ ಖಲೀಲ್ ಸಾಬ್, ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.
One attachment • Scanned by Gmail