ರಾಜ್ಯದ ಜನತೆಗೆ ನೀಡಿದ್ದ ಭರವಸೆ ಈಡೇರಿಸಿ ಬದ್ದತೆ ತೋರಿದ್ದೇವೆ; ಸಚಿವ ಎಸ್ ಎಸ್ ಮಲ್ಲಿಕಾರ್ಜುನ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೧೫; ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದು, ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳೊಂದಿಗೆ ಜನ ಸಾಮಾನ್ಯರಿಗಾಗಿ ಅನೇಕ ಯೋಜನೆ, ಕಾರ‍್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಟಾನ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ೭೮ ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಮೂರು ಶತಮಾನಗಳ ಕಾಲ ಬ್ರಿಟೀಷರ ದಾಸ್ಯದಲ್ಲಿದ್ದ ಭಾರತ ದೇಶ  ಸ್ವಾತಂತ್ರ‍್ಯ ಹೊಂದಿದ ಮಹತ್ವದ ದಿನ ಇಂದು, ನಮ್ಮ ಹಿರಿಯರು ತ್ಯಾಗ, ಹೋರಾಟ ಮತ್ತು ಪ್ರಾಣಾರ್ಪಣೆ ಮೂಲಕ ನಮಗೆ ಸ್ವಾತಂತ್ರ‍್ಯವನ್ನು ತಂದುಕೊಟ್ಟಿದ್ದು, ಅವರೆಲ್ಲರನ್ನೂ ಈ ದಿನ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.ಪಂಚ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ.ದಾವಣಗೆರೆ ವಿಭಾಗದ ವತಿಯಿಂದ ಜುಲೈ-2023 ರಿಂದ ಇಲ್ಲಿಯವರೆಗೆ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಒಟ್ಟು 4.35 ಲಕ್ಷ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು ಇದರ ವೆಚ್ಚವಾಗಿ ರೂ. 118.14 ಕೋಟಿ ಹಣವನ್ನು ದಾವಣಗೆರೆ ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ರ‍್ಕಾರ ಪಾವತಿಸಿದೆ. 2023 ರ ಜುಲೈನಿಂದ ಪ್ರಾರಂಭಗೊಂಡ ಈ ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ಮತ್ತು 5 ಕೆಜಿ ಅಕ್ಕಿ ಬದಲಿಗೆ ನಗದನ್ನು ಡಿಬಿಟಿ ಮೂಲಕ ಪಾವತಿಸುತ್ತಿದೆ. ಪ್ರತಿ ತಿಂಗಳು 3,41,895 ಪಡಿತರ ಕಾರ್ಡ್  12.26 ಲಕ್ಷ ಸದಸ್ಯರಿಗೆ ರೂ 19.66 ಕೋಟಿ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ. ಯೋಜನೆ ಆರಂಭದಿಂದ ಇಲ್ಲಿಯವರೆಗೆ ರೂ. 228 ಕೋಟಿ ಪಾವತಿಸಿದೆ. ದಾವಣಗೆರೆ ಜಿಲ್ಲೆಯಲ್ಲಿ 2023 ರ ಆಗಸ್ಟ್‌ನಿಂದ 2024 ರ ಜೂನ್‌ವರೆಗೆ ಗೃಹಲಕ್ಷ್ಮೀಗೆ ನೋಂದಾಯಿಸಿದ 3,55,121 ಕುಟುಂಬದ ಯಜಮಾನಿ ಮಹಿಳೆಯರಿಗೆ ರೂ. 662 ಕೋಟಿ  ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 9035 ಯುವಕ-ಯುವತಿಯರಿಗೆ ಈವರೆಗೆ ರೂ. 2.70 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ. ಹೀಗೆ ಐದು ಗ್ಯಾರಂಟಿಗಳನ್ನು  ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ಕಳೆದ ಮುಂಗಾರಿನಲ್ಲಿ ತೀವ್ರ ಮಳೆ ಕೊರತೆಯಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಬೆಳೆ ಪರಿಹಾರವಾಗಿ ಒಟ್ಟು 85,947 ರೈತರಿಗೆ ಒಟ್ಟು ರೂ. 66.67 ಕೋಟಿ ಬೆಳೆ ನಷ್ಟ ಬರ ಪರಿಹಾರ ನೀಡಲಾಗಿರುತ್ತದೆ. ಮತ್ತು ಬೇಸಿಗೆ ಹಂಗಾಮಿನ ಕುಡಿಯುವ ನೀರಿಗಾಗಿ ರೂ. 2.16 ಕೋಟಿ ವೆಚ್ಚ ಮಾಡಲಾಗಿದೆ. ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 2,53,923 ಜನರು ಮಾಸಾಶನ ಪಡೆಯುತ್ತಿದ್ದು, ಪ್ರತಿ ತಿಂಗಳು 27 ಕೋಟಿ ಮೊತ್ತವನ್ನು ಪಾವತಿಸಲಾಗುತ್ತಿದೆ. ಕೊನೆಯ ಭಾಗದ ರೈತರಿಗೂ ನೀರು ಸಿಗಬೇಕೆಂದು ಕಾಲುವೆಯಲ್ಲಿನ ಹೂಳು ಮತ್ತು ಜಂಗಲ್ ತೆಗೆಯಲು ಉದ್ಯೋಗ ಖಾತರಿ ಯೋಜನೆಯಡಿ 281 ಕಾಮಗಾರಿಗಳನ್ನು ಕೈಗೊಂಡು ಕಾಲುವೆಗಳನ್ನು ಸ್ವಚ್ಛತೆ ಮಾಡಲಾಗಿದೆ. ಒಟ್ಟು 263 ಕೆರೆಗಳ ಹೂಳು ತೆಗೆಸುವ ಕಾಮಗಾರಿ ಕೈಗೊಳ್ಳಲಾಗಿದೆ. ಸರ್ಕಾರಿ ಶಾಲೆಗಳಲ್ಲಿ 171 ಶೌಚಾಲಯ, 52 ಆಟದ ಮೈದಾನ, 45 ಅಡುಗೆಕೋಣೆ ನಿರ‍್ಮಾಣ ಮಾಡಲಾಗಿದೆ. ಇದಲ್ಲದೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 46 ಸ್ಮಶಾನಗಳನ್ನು ಅಭಿವೃದ್ದಿ ಪಡಿಸುವ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಜಿಲ್ಲೆಯಲ್ಲಿ 150 ಶಿಶುಪಾಲನಾ ಕೇಂದ್ರ ಸ್ಥಾಪನೆ ಮಾಡಿ ಇದಕ್ಕಾಗಿ ಇದುವರೆಗೂ ರೂ.2.72 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.ಜಿಲ್ಲೆಯ 145 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ‍್ವಹಣೆ ಘಟಕಗಳನ್ನು ಪೂರ್ಣಗೊಳಿಸಿದ್ದು ಉಳಿದ 49 ಗ್ರಾಮ ಪಂಚಾಯಿತಿಗಳಲ್ಲಿಯೂ ಘನ ತ್ಯಾಜ್ಯ ವಿಲೇವಾರಿ ಘಟಕ ನರ‍್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಜಿಲ್ಲೆಯ 14 ಗ್ರಾಮಗಳಲ್ಲಿ ನರೇಗಾ, ಎಸ್.ಬಿ.ಎಂ. ಹಾಗೂ 15ನೇ ಹಣಕಾಸು ಯೋಜನೆಯ ಅನುದಾನವನ್ನು ಒಗ್ಗೂಡಿಸಿಕೊಂಡು ಕಾಮಗಾರಿಗಳನ್ನು ನಿರ್ವಹಿಸಲು ಮಂಜೂರಾತಿ ನೀಡಲಾಗಿದೆ. ಇದಕ್ಕಾಗಿ ರೂ.450 ಲಕ್ಷಗಳಲ್ಲಿ 433 ಕಾಮಗಾರಿ ತೆಗೆದುಕೊಂಡಿದ್ದು 239 ಕಾಮಗಾರಿಗಳು ಪೂರ‍್ಣಗೊಂಡು, 194 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ನಿತ್ಯ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಸಿಟಿ ಕಾಂಪೋಸ್ಟ್‌ ತಯಾರಿಸುವ ಸಲುವಾಗಿ ರೂ. 21.00 ಕೋಟಿ ವೆಚ್ಚದಲ್ಲಿ ವಿಂಡ್ರೋ ಕಾಂಪೋಸ್ಟಿಂಗ್‌ ಘಟಕವನ್ನು ನಿರ‍್ಮಾಣ ಮಾಡಲಾಗಿದೆ.ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಉತ್ತಮವಾಗಿದೆ. ಜಿಲ್ಲೆಯ ಜೀವನಾಡಿಯಾದ ಭದ್ರಾ ಜಲಾಶಯ ರ‍್ತಿಯಾಗಿದೆ. ವಾಡಿಕೆಗಿಂತ ಶೇ.39 ರಷ್ಟು ಹೆಚ್ಚಿಗೆ ಮಳೆಯಾಗಿದ್ದು ಮುಂಗಾರು ಆಶಾದಾಯಕವಾಗಿದೆ. ಮುಂಗಾರು ಹಂಗಾಮಿನ 2.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇ 80 ರಷ್ಟು ಬಿತ್ತನೆಯಾಗಿದೆ. ಜಿಲ್ಲೆಗೆ ಅವಶ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಿ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಕೃಷಿ ಸಮ್ಮಾನ್ ಯೋಜನೆಯಡಿ ರೈತರಿಗೆ ಪ್ರತಿ ಕಂತಿಗೆ ರೂ.2000 ರಂತೆ ಒಟ್ಟು 593 ಕೋಟಿ ಮೊತ್ತ ರೈತರ ಖಾತೆಗೆ ಜಮೆ ಆಗಿದೆ.ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳ ಸ್ಥಾಪನೆಗೆ ಜಿಲ್ಲೆಯ 123 ಫಲಾನುಭವಿಗಳಿಗೆ ಬ್ಯಾಂಕ್‌ ಮೂಲಕ ರೂ.10 ಕೋಟಿ ಸಾಲ ಮಂಜೂರಾತಿಯಾಗಿದೆ.ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ರೂ. 5 ಕೋಟಿ ಅನುದಾನದಲ್ಲಿ ನಗರದಲ್ಲಿ 10 ಉದ್ಯಾನವನಗಳನ್ನು ನಿರ‍್ಮಿಸಲು ಯೋಜಿಸಿದೆ.ಕಳೆದ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಅಡಿಕೆ, ವಿಳ್ಯದೆಲೆ, ಬಾಳೆ, ದಾಳಿಂಬೆ, ಕಾಳುಮೆಣಸು, ಮಾವು ಮತ್ತು ಗುಲಾಬಿ ಇತ್ಯಾದಿ 6,124 ತೋಟಗಾರಿಕಾ ಬೆಳೆಗಾರರಿಗೆ 18.57 ಕೋಟಿ ಸಹಾಯಧನ ವಿತರಿಸಲಾಗಿದೆ. ಕೃಷಿ ವಿಕಾಸ ಯೋಜನೆಯಡಿ 432 ರೈತರಿಗೆ ನೀರಿನಲ್ಲಿ ಕರಗುವ ಗೊಬ್ಬರ, ಕೃಷಿಹೊಂಡ, ಪ್ಲಾಸ್ಟಿಕ್ ಕ್ರೇಟ್ಸ್ ಹಾಗೂ ಇತರೆ ಘಟಕಗಳಿಗಾಗಿ ರೂ. 1.18 ಕೋಟಿ ಸಹಾಯಧನ ನೀಡಲಾಗಿದೆ. ಜಿಲ್ಲೆಯ 3133 ರೈತರಿಗೆ, ರೂ. 10 ಕೋಟಿ ಸಹಾಯಧನ ನೀಡಲಾಗಿದೆ.  ತೋಟಗಾರಿಕೆ ಬೆಳೆಗಾರರನ್ನು ಪ್ರೋತ್ಸಾಹಿಸಲು ರೂ. 42 ಕೋಟಿ ಅನುದಾನದ ಗುರಿ ನಿಗಧಿಪಡಿಸಲಾಗಿದೆ.   ಸಾರ್ವಜನಿಕರಿಗೆ ಸರಳ ರೀತಿಯಲ್ಲಿ ಉಪ ಖನಿಜಗಳು ಮತ್ತು ಎಂ-ಸ್ಯಾಂಡ್‌ ದೊರಕುವಂತೆ ಕ್ರಮವಹಿಸಲಾಗಿದೆ.ಜಿಲ್ಲಾ ಆಸ್ಪತ್ರೆಯೊಂದಿಗೆ ಒಂದು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ತಾಲ್ಲೂಕು ಮಟ್ಟದಲ್ಲಿ ತಲಾ 100 ಹಾಸಿಗೆಗಳ ಸಾರ‍್ಥ್ಯದ 4 ಸಾರ್ವಜನಿಕ ಆಸ್ಪತ್ರೆಗಳಿದ್ದು, ಅದರಲ್ಲಿ ಹೊನ್ನಾಳಿ ಮತ್ತು ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಗಳನ್ನು 100 ಹಾಸಿಗೆಗಳಿಂದ 250 ಹಾಸಿಗೆಗಳ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಲಾಗಿದೆ  ಎಂದು ಜಿಲ್ಲೆಯ ಅಭಿವೃದ್ದಿಯ ಸಮಗ್ರ ಮಾಹಿತಿ‌ ನೀಡಿದರು.ವೇದಿಕೆಯಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಡಾ.ಗಂಗಾಧರಸ್ವಾಮಿ,ಎಸ್ಪಿ ಉಮಾಪ್ರಶಾಂತ್,ಮೇಯರ್ ವಿನಾಯಕ್ ಪೈಲ್ವಾನ್,ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ,ಸಿಇಒ ಸುರೇಶ್ ಇಟ್ನಾಳ್ ಸೇರಿದಂತೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.