ಘರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.15; ಜಿಲ್ಲಾ ಬಿಜೆಪಿ ಮೈನಾರಿಟಿ ಮೋರ್ಚಾ ವತಿಯಿಂದ  ಘರ್ ಘರ್ ತಿರಂಗಾ ( ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ) ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಚಿವರಾದ  ಎಸ್.ಎ.ರವೀಂದ್ರನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ  ರಾಜಶೇಖರ್ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ನಗರದ ವಿವಿಧ ನಾಗರೀಕರ ಮನೆಗಳಿಗೆ, ಪಾಲಿಕೆ ನೌಕರರ ಮನೆಗಳಿಗೆ, ಶ್ರೀ ಮುರುಘರಾಜೇಂದ್ರ ವಿರಕ್ತಮಠದ ಶಾಲೆಗೆ, ದಾರುಲ್-ಉಲೂಮ್ ರಹಾಮಿಯಾ ಮದರಸ ಹಾಗೂ ವಿವಿಧ ಕಡೆ ಭೇಟಿ ನೀಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮೈನಾರಿಟಿ ಮೋರ್ಚಾದ ಉಪಾಧ್ಯಕ್ಷ ಡಾ.ನಸೀರ್ ಅಹಮ್ಮದ್ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮೈನಾರಿಟಿ ಮೋರ್ಚಾ ಜಿಲ್ಲಾ ಕನ್ವೀನಿಯರ್ ಗೌತಮ್ ಜೈನ್, ರಾಜ್ಯ ಬಿಜೆಪಿ ಮೈನಾರಿಟಿ ಮೋರ್ಚಾ ಕಾರ್ಯಕಾರಿ ಸಮಿತಿ ಸದಸ್ಯ  ಟಿಪ್ಪು ಸುಲ್ತಾನ್,  ಮೈನಾರಿಟಿ ಮಾರ್ಚಾ ಮುಖಂಡ ಇಕ್ಬಾಲ್ ಅಹಮ್ಮದ್ ಉಪಸ್ಥಿತರಿದ್ದರು.