ಬಿಇಡಿ ಕಾಲೇಜಿಗೆ ಉತ್ತಮ ಫಲಿತಾಂಶ
ಕೋಲಾರ,ಆ,೧೫- ಬೆಂಗಳೂರು ಉತ್ತರ ವಿವಿಯಿಂದ ೨೦೨೪-೨೫ನೇ ಸಾಲಿನ ೧ನೇ ಸೆಮಿಸ್ಟರ್ ಬಿಎಡ್ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ರವಿ ಬಿಇಡಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ ಲಭ್ಯವಾಗಿದ್ದು, ಸಾಧಕರನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಇ.ಗೋಪಾಲಪ್ಪ, ನಿರ್ದೇಶಕ ಜಿ.ನರೇಶಬಾಬು ಹಾಗೂ ಪ್ರಾಂಶುಪಾಲ ಸಿ.ಎಸ್.ಮಂಜುನಾಥರೆಡ್ಡಿ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.
ಕಾಲೇಜಿನ ವೈ.ಭವಾನಿ ಅವರಿಗೆ ಶೇ.೯೩, ಕೆ.ಎನ್.ಸುಷ್ಮಶ್ರೀ-೯೧.೮೩, ಎಸ್.ಡಿ.ಅನುಷ-೯೧.೩೩, ವಿ.ಮೋನಿಕಾ-ಶೇ.೯೦, ಜಿ.ಸ್ವಾತಿ-ಶೇ.೮೯.೫೦ ಹಾಗೂ ಎನ್.ನಿವೇದಿತಾ ಶೇ.೮೯.೩೩ ಅಂಕಗಳೊಂದಿಗೆ ಕಾಲೇಜಿಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.
ಭವಿಷ್ಯದಲ್ಲಿ ನೂರಾರು ಮಕ್ಕಳಿಗೆ ಬೋಧನೆ ಮಾಡುವ ಗುರುವೃಂದವಾಗುವ ಈ ವಿದ್ಯಾರ್ಥಿಗಳು ಮುಂದಿನ ಎಲ್ಲಾ ಸೆಮಿಸ್ಟರ್‌ಗಳಲ್ಲೂ ಅತ್ಯುತ್ತಮ ಸಾಧನೆ ಮಾಡಲಿ ಎಂದು ಡಾ.ಇ.ಗೋಪಾಲಪ್ಪ ಹಾರೈಸಿದ್ದಾರೆ.