ಎಸ್.ಬಿ. ಪಾಟೀಲ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸಂಭ್ರಮದ ಸ್ವಾತಂತ್ರö್ಯ ದಿನಾಚರಣೆ
ಬೀದರ:ಆ.೧೫: ನಗರದ ಎಸ್.ಬಿ. ಪಾಟೀಲ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ೭೮ನೇ ಸ್ವಾತಂತ್ರö್ಯದಿನಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊAಡಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ಅಧ್ಯಕ್ಷರಾದ ಡಾ. ಸೂರ್ಯಕಾಂತ ಜಿ. ಪಾಟೀಲ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ರಾಷ್ಟçಗೀತೆಯ ನಂತರ ವಿದ್ಯಾರ್ಥಿಗಳಿಂದ ಕವಾಯಿತು ಪ್ರದರ್ಶನ ನಡೆಯಿತು. ಡಾ. ಸೂರ್ಯಕಾಂತ ಜಿ. ಪಾಟೀಲ ಅವರು ಮಾತನಾಡಿ ಎಲ್ಲರಿಗೂ ಸ್ವಾತಂತ್ಯ ದಿನದ ಶುಭಾಷಯಗಳನ್ನು ಕೋರಿದರು. ಸ್ವಾತಂತ್ರö್ಯವು ನಮಗೆ ಅನೇಕ ಮಹಾ ಪುರುಷರ ಬಲಿದಾನದಿಂದ ಬಂದಿದೆ. ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಈ ದಿನಾಚರಣೆಯನ್ನು ಪ್ರತಿಯೊಬ್ಬರು ಧಾರ್ಮಿಕ ಹಬ್ಬದಂತೆಯೇ ಸಂತೋಷ ಸಡಗರದಿಂದ ಆಚರಿಸಬೇಕು. ವಿದ್ಯಾರ್ಥಿಗಳಲ್ಲಿ ರಾಷ್ಟç ಭಕ್ತಿ, ರಾಷ್ಟç ಪ್ರೇಮ ಬೆಳೆಸಬೇಕು. ದೇಶ ಸೇವೆಗಾಗಿ ಸದಾ ಸಿದ್ದರಾಗಿರಬೇಕೆಂದು ಕರೆ ಕೊಟ್ಟರು. ಸಮಾಜದಲ್ಲಿರುವ ಭ್ರಷ್ಠಚಾರ, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ, ಮಾತನಾಡಿ ಬೇರು ಸಹಿತ ಕಿತ್ತಿಹಾಕಬೇಕು ಇದಕ್ಕಾಗಿ ಸಮಾಜದ ಪ್ರತಿಯೊಬ್ಬರು ಎಚ್ಚರಗೊಂಡೆರೆÀ ಈ ಕಾರ್ಯ ಸಾಧ್ಯವೆಂದು ಹೇಳಿದರು. ವಿದ್ಯಾರ್ಥಿಗಳು ಒಳ್ಳೆಯ ನಾಗರಿಕರಾಗಿ ಬೆಳೆಯಬೇಕೆಂದು ಕಿವಿಮಾತು ಹೇಳಿದರು ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲೇಂದ್ರ ಮಾತನಾಡಿ ನಮ್ಮ ದೇಶದ ಹೆಮ್ಮೆಯ ಪ್ರತೀಕವಾಗಿರುವ ಧ್ವಜವು ಕೇವಲ ಬಟ್ಟೆಯ ತುಂಡಲ್ಲ, ಅದು ನಮ್ಮ ದೇಶದ ಆತ್ಮ, ಇತಿಹಾಸ ಮತ್ತು ಭವಿಷ್ಯವನ್ನು ಪ್ರತಿನಿಧಿಸುತ್ತದೆ. ಧ್ವಜದ ಮೇಲಿನ ಕೇಸರಿ ಬಣ್ಣವು ಶೌರ್ಯ, ತ್ಯಾಗ ಮತ್ತು ಬಲವನ್ನು ಸಂಕೇತಿಸುತ್ತದೆ. ಅದು ನಮ್ಮ ವೀರರನ್ನು ನೆನಪಿಸುತ್ತದೆ. ಬಿಳಿ ಬಣ್ಣವು ಶಾಂತಿ, ಸತ್ಯ ಮತ್ತು ಪವಿತ್ರತೆಯನ್ನು ಸೂಚಿಸುತ್ತದೆ. ಅದು ನಮ್ಮ ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ. ಕೆಂಪು ಬಣ್ಣವು ನಮ್ಮ ದೇಶಕ್ಕಾಗಿ ಹರಿಯುವ ರಕ್ತವನ್ನು ಮತ್ತು ತ್ಯಾಗವನ್ನು ಸಂಕೇತಿಸುತ್ತದೆ. ಧ್ವಜದ ಮಧ್ಯದಲ್ಲಿರುವ ಅಶೋಕ ಚಕ್ರವು ನಿರಂತರ ಚಲನೆ, ಪ್ರಗತಿ ಮತ್ತು ಸಂಕಲ್ಪವನ್ನು ಸೂಚಿಸುತ್ತದೆ.
ಈ ಧ್ವಜವು ನಮ್ಮನ್ನು ಒಗ್ಗೂಡಿಸುವ ಶಕ್ತಿಯಾಗಿದೆ. ಇದು ನಮ್ಮ ರಾಷ್ಟ್ರೀಯತೆಯನ್ನು ಜಾಗೃತಗೊಳಿಸುತ್ತದೆ. ಧ್ವಜವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ. ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಡಾ. ಪುಟ್ಟರಾಜ, ಡಾ. ಚಂದ್ರಶೇಖರ ಪಾಟೀಲ, ಡಾ. ಶರತಚಂದ್ರ ಪಾಟೀಲ, ಡಾ. ಸಿದ್ದಣ್ಣಗೌಡ, ಸುರೇಶ ಶಿಗ್ಲಿ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.