ಸ್ವಾತಂತ್ರ್ಯ ದಿನಾಚರಣೆ: ತಿರಂಗಾ ಯಾತ್ರೆಗೆ ಚಾಲನೆ
ಸಂಜೆವಾಣಿ ನ್ಯೂಸ್
ಮೈಸೂರು, ಆ.15:- ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ “ತಿರಂಗಾ ಯಾತ್ರೆ” ಯನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿಯನ್ನು ಮಾಜಿ ಶಾಸಕರು ಹಾಗೂ ಬಿಜೆಪಿ ನಗರಧ್ಯಕ್ಷರಾದ ಎಲ್ ನಾಗೇಂದ್ರ ಅವರು ಚಾಲನೆ ನೀಡಿದರು.
ನಂಜಬಹದ್ದೂರ್ ಛತ್ರ, ವಿನೋಬಾ ರಸ್ತೆ ,ಚಿಕ್ಕ ಗಡಿಯಾರ,ಡಿ ದೇವರಾಜ್ ಅರಸು ರಸ್ತೆ, ದಿವಾನ್ ರಸ್ತೆ ಮಾರ್ಗವಾಗಿ ಕಾರ್ಯಕ್ರಮ ಯಶಸ್ವಿಯಾಗಿ ಮಾಡಲಾಯಿತು.
ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಆರ್. ವಿ ದಿನೇಶ್ ಗೌಡ, ಮೈಸೂರು ನಗರ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ರಾಕೇಶ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಚಿನ್ ಆರ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಮೇಗೌಡ, ಚಾಮರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಅರ್ಜುನ್ ಕುಮಾರ್ ಎಸ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ, ನಿಖಿಲ್ ,ಶ್ರೀ ಯೋಗೇಶ್, ನಗರ ಯುವ ಮೋರ್ಚ ಕಾರ್ಯದರ್ಶಿಗಳಾದ ಶ್ರೀ ಉಮೇಶ್, ನಗರ ಯುವ ಮೋರ್ಚಾ ಸಾಮಾಜಿಕ ಜಾಲತಾಣ ಶ್ರೀ ದರ್ಶನ್ ,ಸದಸ್ಯರಾದ ಶ್ರೀ ಪ್ರವೀಣ್ ,ಕ್ಷೇತ್ರದ ಕಾರ್ಯದರ್ಶಿಗಳಾದ ಶ್ರೀ ಪಂಕಜ್ ಪಾರಿಕ್, ಕ್ಷೇತ್ರದ ಯುವ ಮೋರ್ಚಾ ಉಪಾಧ್ಯಕ್ಷರಾದ ಪ್ರಶಾಂತ್, ಮಂಜು,ದರ್ಶನ್, ಗೌತಮ್, ಕರಣ್,ಕಿರಣ್ ,ಸೂರಿ, ಇಂಪನ್, ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀನಿವಾಸ್, ಭಟ್ರು ,ಶರ್ಮಾಜಿ, ರಾಮು,ಛಾಯಾ,ರಾಜೇಶ್, ಮಂಜು, ಬದ್ರಿಶ್, ನಾರಾಯಣ, ಶ್ರೀನಿವಾಸ್ ಗೌಡ ಹಾಗೂ ಕಾರ್ಯಕರ್ತರು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.