ಗಾಂಜಾ ಸೇವನೆ ಪ್ರಕರಣ: ನಾಲ್ಕು ಮಂದಿ ವಶಕ್ಕೆ
ಗಂಗೊಳ್ಳಿ: ಆಗಸ್ಟ್ ೧೨ ರಂದು ಬಸವರಾಜ್ ಕನಶೆಟ್ಟಿ, ಪೊಲೀಸ್ ಉಪನಿರೀಕ್ಷಕರು(ತನಿಖೆ), ಗಂಗೊಳ್ಳಿ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ತ್ರಾಸಿ ಗ್ರಾಮದ ತ್ರಾಸಿ ಬೀಚ್ ಪಾರ್ಕ್ ಬಳಿ ೪ ಜನ ವ್ಯಕ್ತಿಗಳು ಅನುಮಾನಾಸ್ಪದವಾಗಿ ಗಾಂಜಾವನ್ನು ಸೇವಿಸುತ್ತಿದ್ದಾರೆ ಎಂಬ ಬಗ್ಗೆ ದೊರೆತ ಮಾಹಿತಿ ಬಂದಿದೆ.
ಅದರಂತೆ ಅಲ್ಲಿಗೆ ಹೋಗಿ ನೋಡಿದಾಗ ೪ ಜನ ವ್ಯಕ್ತಿಗಳು ಅಮಲಿನಲ್ಲಿ ತೂರಾಡುತ್ತಿರುವುದು ಕಂಡು ಬಂದಿದೆ. ಆರೋಪಿಗಳು ೧) ಮೆಹತಾಬ್ ಶರೀಪ್ (೩೦), ೨) ಅರ್ಷಾದ್ ನೌಶಾದ್ (೨೧), ೩) ಮೊಹಮ್ಮದ್ ಇಮ್ರಾನ್ (೩೦), , ೪) ರೋಹಿತ್ (೩೨) ಎಂಬುದಾಗಿ ಅವರ ಹೆಸರು ತಿಳಿಸಿದ್ದಾರೆ.
ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುತ್ತಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ೮೩/೨೦೨೪ ಕಲಂ: ೨೭(ಃ) ಓಆPS ಂಛಿಣ ರಂತೆ ಪ್ರಕರಣ ದಾಖಲಾಗಿರುತ್ತದೆ.