ಕ್ರೀಡಾಂಗಣ ಉದ್ಘಾಟನೆ ಮುಂದೂಡಲು ಜಯದೇವ್ ಮನವಿ
ಕೋಲಾರ,ಆ,೧೫- ನಗರದ ಶ್ರೀ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಿಂಥೇಟಿಕ್,ಟ್ರಾಕ್, ಪೋಟ್ ಬಾಲ್, ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಲಾಂಗ್ ಜಂಪ್, ಹೈ ಜಂಪ್ ಮುಂತಾದವುಗಳ ಜೊತೆಗೆ ಕ್ರೀಡಾಪಟುಗಳಿಗೆ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅದರೆ ಟ್ರಾಕ್ ನಿರ್ಮಾಣದ ಸಂದರ್ಭದಲ್ಲಿ ಕೆಲವಡೆ ಲೋಪ ದೋಷಗಳಿಂದ ಕೊಡಿರುವುದನ್ನು ದುರಸ್ಥಿಗೊಳಿಸಿ ಕೆಲವೊಂದು ಬದಲಾವಣೆಗಳನ್ನು ಮಾಡಿದ ನಂತರ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿದರೆ ಅರ್ಥಪೂರ್ಣವಾಗಿರುವುದು ಅತುರ,ಅತುರವಾಗಿ ಅವೈಜ್ಞಾನಿಕ, ಅವ್ಯವಸ್ಥೆಯನ್ನು ಸರಿಪಡೆಸದೆ ಅಗಸ್ಟ್ ೧೫ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉದ್ಘಾಟಿಸುವುದನ್ನು ಮುಂದೊಡುವುದು ಸೂಕ್ತ ಎಂದು ಜಿಲ್ಲಾ ಅಮೆಚೊರ್ ಅಥ್ಲೇಟಿಕ್ ಅಸೋಸಿಯೇಷನ್ ಖಜಾಂಜಿ ಕೆ.ಜಯದೇವ್ ಅಭಿಪ್ರಾಯ ಪಟ್ಟರು.
ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಜಿಲ್ಲಾಡಳಿತ ಹಾಗೂ ಕ್ರೀಡಾ ಇಲಾಖೆ ಸೇರಿದಂತೆ ಯಾರು ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟಿಸಲಾಗುವುದು ಎಂಬ ಕನಿಷ್ಠ ಮಾಹಿತಿಯನ್ನು ನೀಡದೆ ದಿನಾಂಕವನ್ನು ನಿಗಧಿ ಪಡೆಸಿದೆ ಎಂದು ಅಸಮಾಧನ ವ್ಯಕ್ತ ಪಡೆಸಿದರು,
ಈಗಲೂ ಏನು ಕಾಲ ಮಿಂಚಿಲ್ಲ. ಎಲ್ಲವನ್ನು ದುರಸ್ತಿಗೊಳಿಸಿ ಸರಿ ಪಡೆಸಿದ ನಂತರವೇ ಎಲ್ಲಾ ಜನಪ್ರತಿನಿಧಿಗಳನ್ನು ಅಹ್ವಾನಿಸಿ ಪ್ರತ್ಯೇಕವಾದ ಉದ್ಘಾಟನೆ ಸಮಾರಂಭವನ್ನು ಆಯೋಜಿಸುವಂತಾಗ ಬೇಕು ಎಂದ ಅವರು ಈ ಟ್ರಾಕ್ ನಿರ್ಮಾಣಕ್ಕೆ ರಾಜ್ಯ ಆಹಾರ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ಅವರು ನಮ್ಮ ಅಸೋಸಿಯೇಷನ್ ಬೆನ್ನಲುಬು ಆಗಿ ಇದ್ದರು,ಸಂಬಂಧ ಪಟ್ಟ ಸಚಿವರನ್ನು ಬೇಟಿಯಾಗಿ ಹಾಗೂ ಆಗಿನ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿ ಅಥ್ಲೇಟಿಕ್ಸ್ ಕ್ರೀಡಾಪಟುಗಳ ಬಹುದಿನದ ಕನಸನ್ನು ನನಸು ಮಾಡಲು ಸುಮಾರು ೭ ಕೋಟಿಗಳನ್ನು ಮಂಜೂರಾತಿ ಮಾಡಿಸುವಲ್ಲಿ ಕೈ ಜೋಡಿಸಿದರು ಎಂದರು.
ಇದಕ್ಕೂ ಮುನ್ನ ಕ್ರೀಡಾಂಗಣದ ಕಾಪೌಂಡ್ ನಿರ್ಮಾಣ, ಫೆನ್ಸಿಂಗ್‌ಗೆ ೨.೫ ಕೋಟಿ ರೂಗಳನ್ನು, ಒಳ ಕ್ರೀಡಾಂಗಣವನ್ನು ಸಿ.ಎಸ್.ಆರ್, ಅನುದಾನದಿಂದ ಮಂಜೂರಾತಿ ಒತ್ತಾಯಿಸಿದ್ದರು, ಹಾಗೂ ಮಾಲೂರು ಹಾಗೂ ಕೆ.ಜಿ.ಎಫ್. ಕ್ಷೇತ್ರಗಳಿಗೂ ಕ್ರೀಡಾಂಗಣ ಮಂಜೂರಾತಿಯಲ್ಲೂ ಶಿಫಾರಸ್ಸ್ ಮಾಡಿದ್ದರು ಇವರೊಂದಿಗೆ ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲಾ ಶಾಸಕರು ಕೈ ಜೋಡಿಸಿ ಸಹಕಾರ ನೀಡಿದ್ದಕ್ಕೆ ಕೃತಜ್ಞಾನತೆಯನ್ನು ಸಲ್ಲಿಸಲು ಜಿಲ್ಲೆಯ ಎಲ್ಲಾ ಶಾಸಕರನ್ನು ಜನಪ್ರತಿನಿಧಿಗಳನ್ನು ಆಹ್ವಾನಿಸಿ ಪ್ರತ್ಯೇಕವಾಗಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸ ಬೇಕೆಂಬುವುದು ಕ್ರೀಡಾ ಪಟುಗಳ ಪರವಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುತ್ತಿದೆ ಎಂದು ತಿಳಿಸಿದರು,
ರಾಜ್ಯ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಕರ್ನಾಟಕ ಅಥ್ಲೇಟಿಕ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾಗಿರುವುದರಿಂದ ಅವರ ನೇತ್ರತ್ವದಲ್ಲಿ ಎಲ್ಲಾ ಶಾಸಕರನ್ನು ,ಹಾಲಿ ಮತ್ತು ಮಾಜಿ ಸಂಸದರನ್ನು ಒಗ್ಗೂಡಿಸಿ ಕೊಂಡು ಜಿಲ್ಲೆಯಲ್ಲಿ ಹಬ್ಬದ ಮಾದರಿಯಲ್ಲಿ ಉದ್ಘಾಟನೆಯನ್ನು ನೆರವೇರಿಸ ಬೇಕು.ರಾಜ್ಯದಲ್ಲಿ ಬೆಂಗಳೂರಿಗೆ ಅತ್ಯಂತ ೬೫ ಕಿ.ಮಿ. ಸಮೀಪದಲ್ಲಿರುವ ಕೋಲಾರದಲ್ಲಿ ಮ್ಯಾರಥಾನ್ ಟ್ರಾಕ್ ಇರುವ ಕ್ರೀಡಾಂಗಣ ಎರಡನೇ ಸ್ಥಾನದಲ್ಲಿದ್ದು ರಾಷ್ಟ್ರೀಯ ಮಟ್ಟದ ಹಾಗೂ ರಾಜ್ಯ ಮಟ್ಟದ ಕ್ರೀಡೆಗಳನ್ನು ಆಯೋಜಿಸಲು ಸೂಕ್ತವಾಗಿದೆ ಎಂದು ಹೇಳಿದರು.
ಇವರ ಮಾರ್ಗದರ್ಶನದಲ್ಲಿ ಅಥ್ಲೇಟಿಕ್ಸ್‌ನಲ್ಲಿ ಉಷಾ, ಗಾಯಿತ್ರಿ, ಅರಹಳ್ಳಿ ನಾರಾಯಣಸ್ವಾಮಿ, ಮೂರಂಡಹಳ್ಳಿ ಮಾರಪ್ಪ ಅವರುಗಳು ಅಂತರ್‌ರಾಷ್ಟ್ರೀಯ, ರಾಷ್ಟ್ರ, ರಾಜ್ಯ ಮುಂತಾದ ಸ್ವರ್ಧೆಗಳಲ್ಲಿ ಜಿಲ್ಲೆಗೆ ಕೀರ್ತಿ ತಂದರು. ಆಗಾ ಈಗಿನಂತೆ ಯಾವೂದೇ ಕ್ರೀಡಾಂಗಣ ಇರಲಿಲ್ಲ, ಈಗಿನ ಸೌಲಭ್ಯಗಳು ಇರಲಿಲ್ಲ ಅದರೂ ಸಹ ಶ್ರಮವಹಿಸಿ ಅಭ್ಯಾಸ ಮಾಡಿ ಜಿಲ್ಲೆಗೆ ಹೆಸರು ತಂದರು, ಈಗಾ ಎಲ್ಲಾ ಸೌಲಭ್ಯಗಳಿರುವುದನ್ನು ಸದ್ಬಳಿಸಿ ಕೊಂಡು ಜಿಲ್ಲೆಗೆ ಕೀರ್ತಿ ತರುವಂತಾಗ ಬೇಕೆಂದು ಆಶಿಸಿದರು,
ಹಿರಿಯ ಕ್ರೀಡಾಪಟು ಶ್ರೀನಿವಾಸ ಮಾತನಾಡಿ ಕಳೆದ ೧೯೮೩-೮೪ ರಲ್ಲಿ ನೀಡಿದ ತರಭೇತಿಯಲ್ಲಿ ಸುಮಾರು ೩೦೦ ಮಂದಿ ಕ್ರೀಡಾಪಟುಗಳಿದ್ದರು, ಆಗಾ ಜಿಲ್ಲಾಧಿಕಾರಿಯಾಗಿದ್ದ ಸಂಜಯ್ ದಾಸ್ ಗುಪ್ತ ಅವರು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು, ಆಗಾ ಸರ್ಕಾರಿ ಜೂನಿಯರ್ ಕಾಲೇಜಿನ ಮೈದಾನದಲ್ಲಿ ತರಭೇತಿ ನೀಡುತ್ತಿದ್ದರು ಸುಮಾರು ೪೦ ವರ್ಷಗಳನಂತರ ಸುಸಜ್ಜಿತವಾದ ಕ್ರೀಡಾಂಗಣವನ್ನು ಕಾಣುವಂತಾಗಿದೆ.ಕೋಟ್ಯಾಂತರ ರೂಪಾಯಿ ವೆಚ್ಚದಿಂದ ನಿರ್ಮಿಸಿರುವ ಈ ಕ್ರೀಡಾಂಗಣವನ್ನು ಕಾಪಾಡಿ ಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು,
ಕ್ರೀಡಾ ತರಬೇತುದಾರರಾದ ಅಮೆಚೂರು ಅಥ್ಲೇಟಿಕ್ಸ್ ಕ್ರೀಡಾ ಸಂಸ್ಥೆ ಜಗನ್, ತ್ಯಾಗರಾಜ್, ರಾಮಚಂದ್ರಪ್ಪ ಇವರುಗಳ ಮಾರ್ಗದರ್ಶನದಲ್ಲಿ ಅನೇಕರು ಕ್ರೀಡಾಪಟುಗಳಿಗೆ ತರಭೇತಿ ನೀಡಿ ಪ್ರತಿಭೆಗಳನ್ನು ಬೆಳಕಿಗೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು ಎಂದರು.
ಇದಕ್ಕು ಮುನ್ನ ಯುವಜನ ಕ್ರೀಡಾ ಇಲಾಖೆಯ ನಿರ್ದೇಶಕರಾದ ಗೀತಾ ಅವರೊಂದಿಗೆ ಕ್ರೀಡಾಂಗಣದಲ್ಲಿನ ಕಾಮಗಾರಿಗಳನ್ನು ಪರಿಶೀಲಿಸಿ ಲೋಪ ದೋಷಗಳನ್ನು ತಿಳಿಸಿದರು,