ಪುಣಚ: ದುರಸ್ಥಿಗಾಗಿ ತಂದಿರಿಸಿದ್ದ ಪಂಪ್ ಕಳವು ಪ್ರಕರಣ –  ಆರೋಪಿ ಬಂಧನ
ವಿಟ್ಲ: ಮನೆ ಬಳಿಯ ಕಟ್ಟಡದಲ್ಲಿ ದುರಸ್ಥಿಗಾಗಿ ತಂದು ಇರಿಸಲಾಗಿದ್ದ ಬೋರ್ ವೆಲ್ ಪಂಪ್ ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಗಳನ್ನು ಬಂಧಿಸಿರುವ ವಿಟ್ಲ ಠಾಣಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕಡಬ ತಾಲೂಕು ಪೆರಬೆ ಗ್ರಾಮದ ಕೋಚಕಟ್ಟೆ ನಿವಾಸಿ ಉಮರಬ್ಬ ರವರ ಪುತ್ರ  ಮಹಮ್ಮದ್ ಶಾಕೀರ್ (೨೨ ವ.) ಬಂಧಿತ ಆರೋಪಿಯಾಗಿದ್ದಾರೆ.
ಜೂ.೨೧ರಂದು ತಡರಾತ್ರಿ ಕಳವು ಪ್ರಕರಣ ನಡೆದಿತ್ತು.
ಬಂಟ್ವಾಳ ತಾಲೂಕು ಪುಣಚ ಗ್ರಾಮದ ಗುರ್ಮೆ ನಿವಾಸಿ ಗಣೇಶ್ ಗೌಡರವರ  ಮನೆಯ ಬಳಿಯಿರುವ ಕಟ್ಟಡದಲ್ಲಿ ಸಾರ್ವಜನಿಕರಿಂದ ರಿಪೇರಿಗಾಗಿ ಪಡೆದು ಇರಿಸಿದ್ದ ಅಂದಾಜು ರೂ ೧,೮೧,೦೦೦  ಮೌಲ್ಯದ ಒಟ್ಟು ೧೬ ಬೊರ್‌ವೆಲ್ ಪಂಪುಗಳನ್ನು  ಕಳವುಗೈದಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿ ಮಹಮ್ಮದ್ ಶಾಕೀರ್ ರವರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದ ಆರೋಪಿಗಳು ರೂ ೧,೮೧,೦೦೦ ಮೌಲ್ಯದ ೧೬ ಬೊರವೆಲ್ ಪಂಪು ಗಳು , ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಕೆಎ-೫೨-ಎ-೮೧೬೪ನೇ ನೊಂದಣಿ ನಂಬರಿನ ಸುಪರ್ ಕ್ಯಾರಿ ವಾಹನವನ್ನು ವಶಪಡಿಸಿಕೊಂಡಿದ್ದು,  ವಶಪಡಿಸಿಕೊಂಡಿರುವ   ಸೊತ್ತುಗಳ ಒಟ್ಟು ಮೌಲ್ಯರೂ ೩,೮೧,೦೦೦ ಎಂದು ಅಂದಾಜಿಸಲಾಗಿದೆ.  ಪ್ರಕರಣದಲ್ಲಿ ಇನ್ನೂ ಇಬ್ಬರು  ಆರೋಪಿಗಳ ಬಂಧನವಾಗಲು ಬಾಕಿ ಇದೆ.
ಆರೋಪಿ ಪತ್ತೆಯ ಕಾರ್ಯಾಚರಣೆಯನ್ನು ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ  ಎಸ್. ವಿಜಯ ಪ್ರಸಾದ್ ರವರ  ಮಾರ್ಗದರ್ಶನದಂತೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ  ನಾಗರಾಜ್ ಹೆಚ್ ಈ ರವರ ನಿರ್ದೇಶನದಂತೆ, ಪೊಲೀಸ್ ಉಪ ನಿರೀಕ್ಷಕರಾದ ರತ್ನಕುಮಾರ್ ಎಂ  ನೇತ್ರತ್ವದಲ್ಲಿ ಸಿಬ್ಬಂಧಿಗಳಾದ ಉದಯ ರೈ, ರಾಧಾಕೃಷ್ಣ ಕರುಣಾಕರ, ಶ್ರೀಧರ್ ಸಿ ಎಸ್, ಶಂಕರ ಸಂಶಿ, ಗದಿಗಪ್ಪ, ಮನೋಜ್, ಗಣಕಯಂತ್ರ ವಿಭಾಗದ ಸಂಪತ್, ದಿವಾಕರ್ ರವರು ಭಾಗವಹಿಸಿದ್ದಾರೆ.