ಅಕ್ರಮ ಬಂಡೆ ಸ್ಪೋಟ: ಹಾನಿ
ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಕುಂದಾಯ ಮಜಲು ಎಂಬಲ್ಲಿ ಪುತ್ತೂರು ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ನೇತ್ರಾವತಿ ನದಿಯಿಂದ ನೀರು ಸರಬರಾಜು ಉದ್ದೇಶದಿಂದ ಶಂಭೂರು ಬಾಳ್ತಿಲ ಗಡಿ ಪ್ರದೇಶವಾದ ಕುಂದಾಯಮಜಲು ಎಂಬಲ್ಲಿ ಕಾಮಗಾರಿಯು ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಅಕ್ರಮವಾಗಿ ಬಂಡೆಗಳನ್ನು ಸ್ಪೋಟಿಸುತ್ತಿದ್ದು ಈ ಸ್ಪೋಟದಿಂದ ಸುಮಾರು ೬೫ ಮನೆಗಳಿಗೆ ತೀವ್ರ ತರಹದ ಹಾನಿಯಾಗುತ್ತಿದ್ದು ಅಲ್ಲಿನ ಜನರು ತೀವ್ರ ತರದ ಭಯ ಭೀತರಾಗಿ ವಲಸೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಇದೇ ರೀತಿ ಸದ್ರಿ ಕಾಮಗಾರಿ ಮುಂದುವರಿದರೆ ಇನ್ನಷ್ಟು ಜೀವಹಾನಿ ಉಂಟಾಗುವ ಸಂಭವ ಇರುತ್ತದೆ  ಹೀಗಾಗಿ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ದೂರವಾಣಿ ಕರೆಯ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಆನಂದ ಸಾಲಿಯಾನ್ ಶಂಭೂರು ಮಾಜಿ ಅಧ್ಯಕ್ಷರು, ನರಿಕೊಂಬು ಗ್ರಾ.ಪಂಚಾಯತ್, ಕೂಸಪ್ಪ ಪೂಜಾರಿ ಕುಂದಾಯ ಮಜಲು. ಚಂದಪ್ಪ ಪೂಜಾರಿ ಕುಂದಾಯ ಮಜಲು. ಮೋನಪ್ಪ ಮುಗೇರ ಪಡ್ಪು’ ಗಿಲ್ಬಾರ್ಟ್ ಬುಕೆಲೋ ಹಾಗೂ ಊರವರು ಉಪಸ್ಥಿತರಿದ್ದರು.