ಸಮುದಾಯ ಭವನಕ್ಕೆ ಸಮಾಜ ಸೇವಕರ ಆರ್ಥಿಕ ನೆರವು
ಕೋಲಾರ,ಆ.೧೫- ಕೋಲಾರ ನಗರದ ಕಾರಂಜಿಕಟ್ಟೆಯಲ್ಲಿರುವ ತಿಗಳ ಜನಾಂಗದ ಶ್ರೀ ಧರ್ಮರಾಯ ಸ್ವಾಮಿ ಸಮುದಾಯ ಭವನಕ್ಕೆ ಅಗತ್ಯವಾಗಿದ್ದ ಜನರೇಟರ್ ಖರೀದಿಗೆ ಸಮಾಜ ಸೇವಕ ಎ.ಶ್ರೀನಿವಾಸ್ ರವರಿಂದ ಎಂಟು ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ಚೆಕ್ ಮೂಲಕ ಎ. ಶ್ರೀನಿವಾಸ್ ಯುವ ಬ್ರಿಗೇಡ್‌ನ ಮುಖಂಡರುಗಳ ಮೂಲಕ ದೇವಾಲಯದ ಗೌಡರಿಗೆ ಬುಧವಾರ ತಲುಪಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿದ ತಿಗಳ ಸಮುದಾಯದ ಮುಖಂಡ ಫಾಲ್ಗುಣ ಸಮುದಾಯದ ಶ್ರೀ ಧರ್ಮರಾಯ ಸ್ವಾಮಿ ಸಮುದಾಯ ಭವನ ಶೀಘ್ರದಲ್ಲೇ ಉದ್ಘಾಟನೆ ನೆರವೇರಲಿದ್ದು, ನಮ್ಮ ಸಮುದಾಯ ಭವನಕ್ಕೆ ಅಗತ್ಯವಾದ ಜನರೇಟರ್‌ನ್ನು ನಮ್ಮ ಸಮುದಾಯದವರೇ ಆದ ಎ.ಶ್ರೀನಿವಾಸ್ ಆರ್ಥಿಕ ಸಹಾಯ ನೀಡಿ ಸೇವೆ ಸಲ್ಲಿಸಿರುವುದು ಸಂತೋಷ ತಂದಿದೆ ಶ್ರೀನಿವಾಸ್ ಈಗಾಗಲೇ ಬಹಳಷ್ಟು ಸಮುದಾಯಗಳಿಗೆ ಹಾಗೂ ಆಟೋ ನಿಲ್ದಾಣಗಳನ್ನು ನಿರ್ಮಾಣ ಸಹಾಯ ಮಾಡಿದ್ದು, ಬಡ ಜನತೆಗೆ ತಮ್ಮ ಕೈಲಾದ ಆರ್ಥಿಕ ನೆರವು ನೀಡುತ್ತಾ ಬರುತ್ತಿದ್ದು,ಅವರು ಮಾಡುತ್ತಿರುವ ಸಮಾಜ ಸೇವೆ ಇನ್ನಷ್ಟು ಮುಂದುವರೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಎ.ಶ್ರೀನಿವಾಸ್ ಯುವ ಬ್ರಿಗೇಡ್‌ನ ಮುಖಂಡರುಗಳಾದ ಅರ್ಬನ್ ಬ್ಯಾಂಕ್ ನಿರ್ದೇಶಕ ಸುರೇಶ್, ಜಿಯಾ ಉಲ್ಲಾ ಖಾನ್, ಗಂಗಾಧರ್, ಕಾರ್ತಿಕ್, ಅನಿಲ್, ಸೈಯದ್, ಮಹಮ್ಮದ್ ಆರೀಫ್, ಅರುಣ್ ಕುಮಾರ್, ಮಿರ್ಜಾ, ಶೇಕ್ ಮೌಲಾ, ನವೀನ್ ನಾಯಕ್, ಹನುಮಂತು, ಎಜಾಜ್ ಖಾನ್, ವಿನಯ್, ಶಂಕರ್, ಪರಮೇಶ್, ದೇವಾಲಯದ ಯಜಮಾನ ಆನಂದಕುಮಾರ್, ಗೌಡರಾದ ಅಯ್ಯಪ್ಪ, ಮುರಳಿ, ಶ್ರೀಕಾಂತ್, ಗೋಪಾಲಪ್ಪ, ಯಲ್ಲಪ್ಪ, ಅಶೋಕ್, ಪಾಪಣ್ಣ, ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.