ವಿದುರಾಶ್ವತ್ಥದಲ್ಲಿ ಹರ್ ಘರ್ ತಿರಂಗಾ
ಕೋಲಾರ,ಆ.೧೫- ಕೋಲಾರ ಅಂಚೆ ವಿಭಾಗ ಇಂದು ದಕ್ಷಿಣ ಜಲಿಯನ್ ವಾಲಾ ಬಾಗ್ ಖ್ಯಾತಿಯ ಚಿಕ್ಕಬಳ್ಳಾಪುರ ಜಿಲ್ಲೆಯ ಐತಿಹಾಸಿಕ ವಿದುರಾಶ್ವತ್ಥದಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಆಯೋಜಿಸಿತ್ತು.
ವಿದುರಾಶ್ವತ್ಥ ಗ್ರಾಮದಿಂದ ವೀರಸೌಧದವರೆಗೆ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗಾ ಪ್ರಯುಕ್ತದ ಕಾಲ್ನಡಿಗೆ ಜಾಥಾದಲ್ಲಿ ಅಂಚೆ ನೌಕರರು ತ್ರಿವರ್ಣ ಧ್ವಜವನ್ನು ಹಿಡಿದು ಗಮನಸೆಳೆದರು.
ಇದಕ್ಕೂ ಮುನ್ನ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಾ.ಕೆ.ಚಂದ್ರಶೇಖರ್ ವೀರ ಸೌಧದ ಹುತಾತ್ಮ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಊರಿನ ಪ್ರಮುಖ ಬೀದಿಗಳಲ್ಲಿ ತಿರಂಗ ರ್‍ಯಾಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೋಲಾರ ವಿಭಾಗ ಹಿರಿಯ ಅಂಚೆ ಅಧೀಕ್ಷಕ ವಿ.ಎಸ್.ಎಲ್.ನರಸಿಂಹ ರಾವ್, ಇಲಾಖೆಯ ನಂಜುಂಡರಾಜು, ಹನುಮಂತಯ್ಯ, ನಾಗರಾಜು, ಶಶಿ ಕುಮಾರ್ ಶೆಟ್ಟಿಕೇರಿ, ಸತೀಶ್, ಶಶಿ, ಊರಿನ ಗಣ್ಯರು ಶಾಲಾ ಮಕ್ಕಳು ಹಾಜರಿದ್ದರು.